ಯುವನೀತಿ ಜಾರಿ, ಯುವ ಸಬಲೀಕರಣ ಪ್ರತ್ಯೇಕಕ್ಕೆ ಒತ್ತಾಯ : ಡಾ. ಬಾಲಾಜಿ
ಕೊಪ್ಪಳ 02: ಕರ್ನಾಟಕ ರಾಜ್ಯ ಯುವ ನೀತಿ ಜಾರಿ ಮಾಡುವದು ಮತ್ತು ಯುವ ಸಬಲೀಕರಣವನ್ನು ಕ್ರೀಡಾ ಇಲಾಖೆಯಿಂದ ಬೇರಿ್ಡಸುವದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ರಾಜ್ಯ ಸರಕಾರವನ್ನು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಒತ್ತಾಯ ಮಾಡಿದರು,
ಅವರು ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡುತ್ತ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕಳೆದ 25 ವರ್ಷಗಳಿಂದ ರಾಜ್ಯದಾದ್ಯಂತ ಯುವ ಸಂಘಟನೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲೆ ಸತತವಾಗಿ ಯುವಜನರ ಕುರಿತು ಬೇಡಿಕೆ, ಮನವಿ, ಒತ್ತಾಯದ ಮೂಲಕ ಹಲವಾರು ಯೋಜನೆಗಳನ್ನು ಉಳಿಸಿಕೊಂಡಿದ್ದರು ಸಹ ಈಗಿನ ಸರ್ಕಾರ ಮತ್ತು ಹಿಂದಿನ ಬಿಜೆಪಿ ಸರ್ಕಾರ 2009ರಲ್ಲಿ ಎಲ್ಲಾ ಯುವ ಸಂಘಗಳನ್ನ ರದ್ದುಗೊಳಿಸುವ ಮೂಲಕ ಯುವಜನರನ್ನ ಮೂಲೆಗುಂಪು ಮಾಡಿದವು.
ಈ 15 ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳೊಂದಿಗೆ ಯುವ ಸಂಘಗಳು ಸಂಪೂರ್ಣವಾಗಿ ನೆಲಕಚ್ಚಿದ್ದು ಅವುಗಳ ಪುನಶ್ಚೇತನಕ್ಕೆ ಇನ್ನೊಂದು ಹಂತದ ಪ್ರಯತ್ನವನ್ನು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮಾಡುತ್ತಿದೆ ಆದ್ದರಿಂದ ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನ, ಯೋಜನೆಗಳನ್ನ ಸಂಘಟನೆ ರೂಪಿಸಿದ್ದು ಸರಕಾರ ಸ್ಪಂದಿಸಿ ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯ ಮಾಡಿದರು. ಕೊಪ್ಪಳದಲ್ಲಿ ಬಾಬಾಸಾಹೇಬ್ ಅಂಬೇಸ್ಕರ್ ಹೆಸರಲ್ಲಿ ರಾಜ್ಯ ಮಟ್ಟದ ಯುವ ಪ್ರಶಸ್ತಿ ಸ್ಥಾಪಿಸಿದ್ದು ಶೀಘ್ರ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಯುವನೀತಿ ಸರಿಯಾದ ರೀತಿಯಲ್ಲಿ ಜಾರಿಯಾಗಬೇಕು ಕ್ರೀಡೆಯ ಜೊತೆಗೆ ಯುವಜನರ ಸಬಲೀಕರಣವೂ ಕೂಡ ಆಗಬೇಕು ಎಂಬ ಒತ್ತಾಯ ನಮ್ಮದು. ರಾಜ್ಯ ಯುವ ಪ್ರಶಸ್ತಿಗಳನ್ನು ಪುನಃ ಸ್ಥಾಪಿಸಬೇಕು. ತಾಲೂಕ, ಜಿಲ್ಲಾ, ವಿಭಾಗ ಮಟ್ಟದಿಂದ ರಾಜ್ಯಮಟ್ಟದವರೆಗಿನ ಯುವಜನ ಮೇಳವನ್ನು ಪುನಃ ಆರಂಭಿಸಬೇಕು ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಯುವಜನೋತ್ಸವ ತನ್ನ ವೈಶಿಷ್ಟತೆಯನ್ನು ಕಳೆದುಕೊಂಡಿದ್ದು ಅಲ್ಲಿ ಆಗಬೇಕಿದ್ದ ಕಾರ್ಯಕ್ರಮಗಳನ್ನ ಯುವಜನ ಮೇಳದಲ್ಲಿ ಸೇರಿಸಿ ಉತ್ತಮವಾದಂತಹ ಕಾರ್ಯಕ್ರಮವನ್ನಾಗಿ ಮಾಡಬೇಕು ಎಂಬ ಒತ್ತಾಯ ನಮ್ಮದು ಸರಕಾರ ಮಾಡದಿದ್ದರೂ ಇದೇ ವರ್ಷ ಒಕ್ಕೂಟದಿಂದ ಆರಂಭಿಸುತ್ತೇವೆ, ಮೊದಲ ಹಂತವಾಗಿ ಕಲ್ಯಾಣ ಕರ್ನಾಟಕದ ಏಳು ಜಲ್ಲೆಗಳಲ್ಲಿ ಬಾಲಾಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸುತ್ತೇವೆ ಎಂದರು.
ಗರಡಿ ಮನೆಗಳಿಗೆ ಕೊಡುತ್ತಿರುವ ಸಹಾಯಧನವನ್ನು ಪುನಃ ಸ್ಥಾಪಿಸಬೇಕು. ಕ್ರೀಡಾ ಇಲಾಖೆಯ ಜಿಲ್ಲಾ ಮತ್ತು ತಾಲೂಕ ಕ್ರೀಡಾಂಗಣ ಸಮಿತಿಗಳಿಗೆ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರನ್ನು ಮತ್ತು ಯುವ ಸಂಘಟನೆಯಲ್ಲಿ ತೊಡಗಿಕೊಂಡವರನ್ನು ಸೇರಿಸಿ ಸಮಿತಿ ರಚಿಸಲು ಅವಕಾಶ ಆಗುವಂತಹ ತಿದ್ದುಪಡಿ ತರಬೇಕು, ರಾಜ್ಯ ಸರ್ಕಾರ ಪ್ರಶಸ್ತಿ ಕೊಡುವುದನ್ನು ನಿಲ್ಲಿಸಿದ ಕಾರಣ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ದಕ್ಷಿಣ ಕನ್ನಡ, ಬಿಜಾಪುರ, ಬೆಳಗಾವಿ, ಬೆಂಗಳೂರು ಮತ್ತು ಕೊಪ್ಪಳ ಹೀಗೆ ಜಿಲ್ಲಾ ಸಂಘಟನೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಿ ಪ್ರತಿ ಜಿಲ್ಲೆಯ ಒಬ್ಬರಂತೆ ಯುವ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ಕೊಡುತ್ತಿದ್ದೇವೆ ಅದರ ಮೂಲಕ ಯುವಜನರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದೇವೆ ಅತ್ಯಂತ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟಕ್ಕೆ ಸರಕಾರದಿಂದ ಬೆಂಬಲ ಕೋರುತ್ತೇವೆ ಎಂದರು. ಈ ಸಂದರ್ಭದಲ್ಲಿ ಬೆಂಗಳೂರು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹೇಂದ್ರ ಜಾಧವ ಇದ್ದರು.