ದತ್ತಿ ಉಪನ್ಯಾಸ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 09:  ಲಿಂ.ಈಶ್ವರಯ್ಯಾ ಶಿವಮೂತರ್ಿಯ್ಯಾ ಮಾಸ್ತಿಹೊಳಿಮಠ ಹಆಗೂ ಲಿಂ.ಚಂಪಾಬಾಯಿ ಈಶ್ವರಯ್ಯಾ ಮಾಸ್ತಿಹೊಳಿಮಠ ದತ್ತಿ ಉಪನ್ಯಾಸ ಕಾರ್ಯಕ್ರಮವು ಇತ್ತೀಚಿಗೆ ಬೆಳಗಾವಿಯಲ್ಲಿ ಜರುಗಿತು. ಬೆಳಗಾವಿಯ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. 

ದತ್ತಿ ಉಪನ್ಯಾಸದ ಅಧ್ಯಕ್ಷತೆಯನ್ನು ಎ.ಎಸ್.ಪಾವಟೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧಪಕ್ಷ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು ವಹಿಸಿದ್ದರು. ಹಾರೂಗೇರಿ ಬಿ.ಆರ್. ದರೂರ ಸಂಶೋಧನಾ ಕೇಂದ್ರ ನಿದರ್ೇಶಕರಾದ ಡಾ.ವ್ಹಿ.ಎಸ್.ಮಾಳಿಯವರು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಡಾ.ಮಾಳಿಯವರು ಮಾತನಾಡಿ ಶರಣರ ವಿಚಾರಗಳು ಲೋಕಸತ್ಯವೆನಿಸಿವೆ. ಅವರು ಸಮಾಜವನ್ನು ಕಟ್ಟುವ ಕಾರ್ಯವನ್ನು ಮಾಡಿದರು. ಅವರು ನೀಡಿದ ಸಂದೇಶಗಳು ವಿಶ್ವಸತ್ಯವೆನಿಸಿಕೊಂಡಿವೆ ಎಂದು ತಿಳಿಸಿದರು.

ಗೌರಿ ಮಾಸ್ತಿಹೊಳಿ ಸ್ವಾಗತಿಸಿದರು. ಲಕ್ಷ್ಮೀ ಮಾಸ್ತಿಹೊಳಿ ಪರಿಚಯಿಸಿದರು. ಉಮಾದೇವಿ ಪಟ್ಟಣಶೆಟ್ಟಿ ಶರಣ ಸಾಹಿತ್ಯ ಕುರಿತು ಪರಿಚಯಿಸಿದರು. ಜಯಶ್ರೀ ಭಂಡಾರಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.