ಲೋಕದರ್ಶನವರದಿ
ಶಿಗ್ಗಾವಿ: ಮುಗಳಿ ಗ್ರಾಮದ ಯೋಗಪಟು ಅಶ್ವಿನಿ ಭದ್ರಶೆಟ್ಟಿಗೆ ವಿಶ್ವಗುರು ಹಳೆಯ ವಿದ್ಯಾಥರ್ಿಗಳ ಸಂಘದ ವತಿಯಿಂದ ಐದು ಸಾವಿರ ರೂ.ಗಳ ಪ್ರೋತ್ಸಾಹ ಧನ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಿ.ಜಿ. ದುಂಡಪ್ಪನವರ, ಮೇ 25 ಹಾಗೂ 26ರಂದು ಥೈಲ್ಯಾಂಡ್ ದೇಶದ ಪಟ್ಟಾಯ್ ನಗರದಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಹಾವೇರಿ ಜಿಲ್ಲೆಯಿಂದ ಎಂಟು ಜನ ಯೋಗಪಟುಗಳು ಭಾಗವಹಿಸಲಿದ್ದಾರೆ. ಇವರ ಪೈಕಿ ನಮ್ಮೂರಿನ ಪ್ರತಿಭೆ ಅಶ್ವಿನಿ ಭದ್ರಶೆಟ್ಟಿ ಭಾಗವಹಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಐದು ಸಾವಿರ ರೂ. ಪ್ರೋತ್ಸಾಹ ಧನ ವಿತರಿಸಲಾಯಿತು. ವಿ.ಎಸ್. ಭದ್ರಶೆಟ್ಟಿ, ಮಹಾದೇವಪ್ಪ ಕಾಮನಹಳ್ಳಿ, ಅಶೋಕ ಬೆಂಗೇರಿ, ಗೂಳಪ್ಪ ಅರಳಿಕಟ್ಟಿ ಇದ್ದರು.