ಲೋಕದರ್ಶನ ವರದಿ
ಕೊಪ್ಪಳ 02: ಯುವಕರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಪ್ರಯತ್ನ ಈ ವೇದಿಕೆಯ ಮೂಲಕ ಮಾಡಲಾಗುತ್ತೀರುವುದು ಶ್ಲಾಘನೀಯ ಎಲ್ಲಾರು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದಾಗ ಉತ್ತಮ ಸಾಧನೆಗೈಯಲು ಸಾಧ್ಯ ಎಂದು ನಗರ ಪೊಲೀಸ್ ಠಾಣೆ ಇನ್ಸ್ಪೇಕ್ಟರ್ ಶಿವಾನಂದ ವಾಲಿಕಾರ ಹೇಳಿದರು.
ಅವರು ನಗರದ ಸಾರ್ವಜನಿಕ ಮೈದಾನದಲ್ಲಿ ಕೊಪ್ಪಳ ಪ್ರಿಮೀಯರ್ ಲೀಗ್-2018 ಕ್ರಿಕೇಟ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕ್ರಿಕೇಟ್ ಪಂದ್ಯಾವಳಿಯನ್ನು ಏರ್ಪಡಿಸುವ ಮೂಲಕ ಜಿಲ್ಲೆಯಲ್ಲಿ ಇರುವ ಯುವ ಪ್ರತಿಭಾವಂತ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸಿ ಕೊಡುವ ಪ್ರಯತ್ನ ಸಂತೋಷದಾಯಕ ಎಲ್ಲಾರೂ ಉತ್ಸಾಹದಿಂದ ಪಾಲ್ಗೊಂಡು ಜಯಗಳಿಸಿ ಎಂದರು.
ಕೊಪ್ಪಳ ಪ್ರಿಮೀಯರ್ ಲೀಗ್-2018 ಕ್ರಿಕೇಟ್ ಪಂದ್ಯಾವಳಿಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಕೆ.ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು.
ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಿ ಪ್ರಿಮೀಯರ್ ಲೀಗ್-2018 ಕ್ರಿಕೇಟ್ ಪಂದ್ಯಾವಳಿಯ ಎಲ್ಲಾ ಕ್ರೀಡಾಪಟುಗಳಿಗೆ ಶುಭಾ ಕೋರಿ ಆಶರ್ೀವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಹಿರಿಯ ಸದಸ್ಯ ಅಮ್ಜದ್ ಪಟೇಲ್ ಮಾತನಾಡಿ ಪ್ರಿಮೀಯರ್ ಲೀಗ್-2018 ಕ್ರಿಕೇಟ್ ಪಂದ್ಯಾವಳಿಯು ಕ್ರೀಡಾಪಟುಗಳು ತಮ್ಮ ಪ್ರತಿಭೆ ಅನಾವರಣ ಮಾಡಲು ಪ್ರೋತ್ಸಾಹ ನೀಡುತ್ತಿದೆ ಇದರಿಂದ ಕ್ರೀಡಾಪಟುಗಳು ರಾಜ್ಯ-ರಾಷ್ಟ್ರಮಟ್ಟ ತಲುಪಿ ಸಾಧನೆ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ, ಡಾ.ಮಹೇಂದ್ರ ಕಿಂದ್ರೆ, ಡಾ.ಅಜಯ್ ಬಾಚಲಾಪುರು, ಮುಖಂಡರಾದ ಬಾಬು ಅರಗಂಜಿ, ನಗರಸಭೆ ಸದಸ್ಯರಾದ ಅರುಣ್ ಅಪ್ಪುಶೆಟ್ಟಿ, ಅಕ್ಬರ್ ಪಲ್ಟನ, ರಾಜು ಬಗಾಡೆ, ಗವಿಸಿದ್ದಪ್ಪ ಪಾಟೀಲ್ ತಾಲೂಕ ಕ್ರೀಡಾಂಗಣ ರಕ್ಷಣೆ ಹೋರಾಟ ಸಮಿತಿಯ ಅಧ್ಯಕ್ಷ ಆದಿಲ್ ಪಟೇಲ್, ವಿರುಪಾಕ್ಷಿ ಗೊಂಬಿನ್, ಮೈನುದ್ದೀನ್ ವದರ್ಿ, ಖಲೀಲ್ ಪಟೇಲ್, ಅನ್ವರ್ ಪಟೇಲ್, ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು.