ಕಲಾವಿದರನ್ನ ಪ್ರೋತ್ಸಾಹಿಸಿ: ಮಹಾದೇವ ಶ್ರೀ

ಲೋಕದರ್ಶನ ವರದಿ

ಧಾರವಾಡ07: ಜಾನಪದ ಸಾಹಿತ್ಯ ಪರಂಪರೆ ಅನೇಕ ಸಂಗತಿಗಳನ್ನು ಹೊತ್ತು ತರುತ್ತದೆ. ಸಾಹಿತ್ಯ, ಕಲೆ, ನೃತ್ಯ, ನಾಟಕ ಕ್ರಿಯೆಗಳ ಚೌಕಟ್ಟೆ ಜಾನಪದ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಾಳಪ್ಪ ಬಡ್ಳಿ ಹೇಳಿದರು.

ಇತ್ತೀಚೆಗೆ ನಡೆದ ಕಲಘಟಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧಾರವಾಡದ ನಾದಝೇಂಕಾರ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರಸಕ್ತ 2019ರ ಕೊಡ ಮಾಡುವ ರಾಜ್ಯ ಮಟ್ಟದ 'ಕಲಾಶ್ರೀ', 'ರಂಗಶ್ರೀ' ಪ್ರಶಸ್ತಿಗಳನ್ನು ವಿವಿಧ ಕಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ

  ಮೊಹ್ಮದಶಫಿ ನೂಲಕರ, ಅನಿತಾಆರ್, ಸುರೇಶಹಿರೆಣ್ಣವರ, ಶ್ರೀಧರ ಭಜಂತ್ರಿ, ಶಿವಕುಮಾರ ಮಂಗಳೂರು, ಪ್ರಿಯಾಂಕಾ ಭಜಂತ್ರಿ, ಅಕ್ಷತಾಗಚ್ಚಿನಮನಿ, ಅಪೂರ್ವ ಭಜಂತ್ರಿ, ಐಶ್ವರ್ಯ ಕಲಾಲ, ಮಹನ್ಯ ಪಾಟೀಲ, ಸಾಧಕರಿಗೆ ನಾದಝೇಂಕಾರ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

     ನಾಡಿನ ಸಾಂಸ್ಕೃತಿಕ ಚರಿತ್ರೆಯ ಹೊಸ ನಿಮರ್ಾಣಕ್ಕೆ ಆದಿವಾಸಿಗಳಲ್ಲಿ ಗಿರಿಜನರು, ಪಂಚಮರು, ಹಳ್ಳಿಗರು, ಮಹಿಳೆ, ಹೀಗೆ ಅನೇಕ ರೀತಿಗಳಲ್ಲಿ ತಮ್ಮ ಬದುಕನ್ನು ಜಾನಪದ ಜೀವನಕಟ್ಟಿಕೊಂಡು ಜಾನಪದವೇ ಬದುಕಿನ ಜೀವಾಳವಾಸಿ ಎಂದು  ಕೊಂಡಿದ್ದರು.ಆಧುನಿಕಯುವಕರು ಯುವತಿಯರು ಜಾನಪದ ಕಲೆಯನ್ನು ಉಳಿಸಿ-ಬೆಳೆಸುವ ಕಾರ್ಯವನ್ನು ಮುನ್ನಡೆಸುವಂತಾಗಬೇಕೆಂದು ಜಗದ್ಗುರು ಅನ್ನದಾನೇಶ್ವರ ಶಾಖಾ ಮಠದಮಹದೇವ ಶ್ರೀಗಳು ಹೇಳಿದರು.

  ನಾದಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದಶರ್ಿಯ ಮನಪ್ಪಜಾಲಗಾರ ಮಾತನಾಡಿನಾವು ಎಷ್ಟೇ ಉನ್ನತ ಸ್ಥಾನಕ್ಕೇರಿದರು ನಮ್ಮಜನನಕ್ಕೆ ಕಾರಣವಾದತಂದೆ-ತಾಯಿಯರನ್ನು ಮರೆಯುವುದಿಲ್ಲ.ಹಾಗೆಯೇ ನಮ್ಮಜಾನಪದವು ನಮ್ಮತಂದೆ-ತಾಯಿಯ ಸ್ಥಾನದಲ್ಲಿದೆ.ನಮ್ಮ ನಾಡು-ನುಡಿ ಸಂಸ್ಕೃತಿಯನ್ನು ಕಟ್ಟಿಕೊಂಡಿದೆ ಅದನ್ನು ನಾವು ಮರೆಯಬಾರದು ಎಂದರು

ಕಾರ್ಯಕ್ರಮದ ಅತಿಥಿಗಳಾಗಿ ದೇವಪ್ಪ ಅಮರಗೋಳ, ಗುರುರಾಜರಾವದೇಸಾಯಿ, ಮೆಹಬೂಬ ಬಾದಶಾ, ಗುರುಪಾದಗೌಡ,

  ಸುರೇಶ ಬಾದಾಮಿ, ಫಕ್ಕೀರಪ್ಪ ಮಾದನಭಾವಿ, ಪ್ರಮೋದಕೆಂಗೇರಿ, ವಿವಿಧ ಸಾಧಕರು, ಮುಂತಾದವರು ಉಪಸ್ಥಿತರಿದ್ದರು.