ಲೋಕದರ್ಶನ ವರದಿ
ಬೆಳಗಾವಿ 04: ಜೈನ ಇಂಜಿನೀಯರಿಂಗ್ ಕಾಲೇಜಿನಲ್ಲಿ ಜರುಗಿದ ಉದ್ಯೋಗ ಮೇಳದಲ್ಲಿ 650 + ವಿದ್ಯಾಥರ್ಿಗಳು ಆಯ್ಕೆಗೊಂಡರು.
ಜೀವನ ವೃತ್ತಿ ಜೋಡಣೆ ಉದ್ದೇಶಕ್ಕಾಗಿ ಬೆಳಗಾವಿಯ ಜೈನ ಇಂಜಿನೀಯರಿಂಗ್ ಕಾಲೇಜ 2019 ನೇ ಫೆಬ್ರುವರಿ, ದಿನಾಂಕ 2 ರಂದು ಉದ್ಯೋಗ ಮೇಳವನ್ನು ಆಯೋಜಿಸಿತ್ತು.
3 ರಾಜ್ಯಗಳ 2440 ಅಭ್ಯಥರ್ಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದರು. ಅನೇಕ ಶೈಕ್ಷಣಿಕ ಅರ್ಹತೆ ಹೊಂದಿದ ಕನರ್ಾಟಕ, ಮಹಾರಾಷ್ಟ್ರ ಹಾಗೂ ಗೋವಾದ ರಾಜ್ಯಗಳಿಂದ ಅಭ್ಯಥರ್ಿಗಳು ಈ ಬೃಹತ್ ಮೇಳದಲ್ಲಿ ಭಾಗಿಯಾಗಿದ್ದರು.
ಕೇಲವು ಬಹು ರಾಷ್ಟ್ರೀಯ ಕಂಪನಿಗಳ ಅಭ್ಯಥರ್ಿಗಳು ಈ ಉದ್ಯೋಗ ಮೇಳದಲ್ಲಿ ಆಯ್ಕೆಗೊಂಡರು. ಜೈನ ಇಂಜಿನೀಯರಿಂಗ್ ಕಾಲೇಜಿನ ಅಭ್ಯಥರ್ಿಗಳು ಪ್ರತಿ ವರ್ಷವು ಉತ್ಕೃಷ್ಟ ಉದ್ಯೋಗ ಅವಕಾಶ ಪೂರೈಕೆಯ ಫಲಿತಾಂಶ ನೀಡುತ್ತಾ ಬಂದಿರುತ್ತದೆ. ಈ ವರ್ಷ ಬಹು ದೊಡ್ಡ ಸಂಖ್ಯೆಯಲ್ಲಿ ಅಭ್ಯಥರ್ಿಗಳು ಈ ಮೇಳದಲ್ಲಿ ಭಾಗಿಯಾಗಿ, ಹಿಂದಿನ ಅಂದಾಜುಗಳನ್ನು ಮೀರಿಸಿದ್ದು, ಜೈನ ಇಂಜಿನೀಯರಿಂಗ್ ಕಾಲೇಜ ಆಯೋಜಿಸುತ್ತಿರುವ ಉದ್ಯೋಗ ಮೇಳ ಆದರ್ಶಪ್ರಾಯವಾಗಿತ್ತು ಎಂಬುದರ ಸೂಚನೆಯಾಗಿದೆ. ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ಅಭ್ಯಥರ್ಿಗಳನ್ನು ಬಯಸುತ್ತಿರುವ ಸಂಘಟನೆಗಳಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ಕಾರ್ಯದಲ್ಲಿ ಇದು ಪ್ರಥಮ ಹೆಜ್ಜೆಯಾಗಿದೆ. ಸ್ಥಳೀಯ ಜಿ.ಆಯ್.ಟಿ., ಕೆ.ಎಲ್.ಇ, ಅಂಗಡಿ ಇಂಜಿನೀಯರಿಂಗ್ ಕಾಲೇಜ ಹಾಗೂ ಇನ್ನೀತರ ಇಂಜಿನೀಯರಿಂಗ್ ಕಾಲೇಜುಗಳ ಅಂತಿಮ ವರ್ಷದ ವಿದ್ಯಾಥರ್ಿಗಳು ಈ ಮೇಳದಲ್ಲಿ ಭಾಗಿಯಾಗಿದ್ದರು.
ಉದ್ಯೋಗ ಭಾಗವಹಿಸಿದ ಕಂಪನಿಗಳ ಪಟ್ಟಿ
ಇನ್ಪೋಸಸ್, ಜಸ್ಟ ಡೈಲ್, ಗಲ್ಲಾಗೇರ್, 24/7 ಕಂಪನಿಗಳು, ಕ್ಯಾಪಗೇಮಿನಿ, ರೆಂಟೋ ಮೋಜೋ, ಒಮೆಗಾ, ಇಂಟೆಲ್ನೇಟ್, ಟೀಮ್ಲೀಜ್, ಎಡವೆಂಟ್ ಗ್ಲೋಬಲ್ ಸೋಲ್ಯೂಶನ್ಸ, ವೆಂಚುರಾ ಸೆಕ್ಯೂರಿಟಿಸ್, ಲ್ಯೂಮನ್ ಡೇಟಾ, ಯುರೇಕಾ ಪೋರ್ಬ್ಸ ಲಿಮಿಟೇಡ್, ಇ & ಕ್ಯೂ ಕನಸಲಟಂಟ, ಕೋಡಿಲ್ಲಾರ, ಜೈನ ಹೇರಿಟೇಜ ಸ್ಕೂಲ್, ಮಾವೆಂಟಿಕ್ ಸೋಲ್ಯೂಶನ್ಸ, ಸ್ನೇಹಮ ಇಂಟರನೇಷನಲ್, ಪಿಯೋಲ್ ಸೋಲ್ಯೂಶನ. ಹಾಗೂ ಹೆಸರಾಂತ ಹಲವಾರು ಕಂಪನಿಗಳು ಈ ಮಹಾನ್ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದವು. ದಿನದ ಕೊನೆಗೆ 650 ಕ್ಕಿಂತ ಹೆಚ್ಚು ವಿದ್ಯಾಥರ್ಿಗಳು ಅನೇಕ ಕಂಪನಿಗಳಿಗೆ ಆಯ್ಕೆಗೊಂಡರು. ಇನ್ನೂ ಹಲವಾರು ಅಭ್ಯಥರ್ಿಗಳು ಈ ಪ್ರಕ್ರಿಯೆಯ ಪಟ್ಟಿಯಲ್ಲಿದ್ದಾರೆ.
ಜೈನ ಇಂಜಿನೀಯರಿಂಗ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ವಿವಿಧ ವಿಜ್ಞಾನ ವಿಭಾಗಗಳ ಅಧ್ಯಾಪಕರುಗಳು ಹಾಗೂ ವಿದ್ಯಾಥರ್ಿಗಳು, ಈ ಉದ್ಯೋಗ ಮೇಳದಲ್ಲಿ ವಿಜೇರನ್ನು ಅಭಿನಂದಿಸಿದರು.