ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಿ: ಮನೋವೈದ್ಯ ಟೆಕ್ಕಳಕಿ

Emphasis on mental health too: Psychiatrist Tekkalaki

ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಿ: ಮನೋವೈದ್ಯ ಟೆಕ್ಕಳಕಿ 

ಬೆಳಗಾವಿ 01: ಕೆಎಲ್‌ಇ ವೇಣುದ್ವನಿ 90.4 ಏಫ್ ಎಮ್‌. ಸಮುದಾಯ ಬಾನುಲಿ ಕೇಂದ್ರ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ - ಭಾರತ ಸರಕಾರ ಮತ್ತು ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್, ನವದೆಹಲಿ ಇವರ ಸಹಯೋಗದಲ್ಲಿ ಅಟಲ್ ವಯೋ ಅಭ್ಯುದಯ ಯೋಜನೆ ಕುರಿತು ಸರಣಿ ರೇಡಿಯೋ ಕಾರ್ಯಕ್ರಮದಡಿಯಲ್ಲಿ ನಮ್ಮ  ಹಿರಿಯರು  ನಮ್ಮ  ಗೌರವ ಎಂಬ ಘೋಷವಾಕ್ಯದಡಿಯಲ್ಲಿ ಶುಕ್ರವಾರ ದಿ. 31ರಂದು ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ಆರೈಕೆ ವಿಷಯ ಕುರಿತು ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

 ಬೆಳಗಾವಿ ಕೆಎಲ್‌ಇ ಡಾ ಪ್ರಭಾಕರ ಕೋರೆ ಆಸ್ಪತ್ರೆಯ ಮನೋವೈದ್ಯ ಡಾ. ಭೀಮಸೇನ ಟೆಕ್ಕಳಕಿ ಅವರು ಭಾಗವಹಿಸಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಹಿರಿಯ ನಾಗರಿಕರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಬೇಕು ಎಂದು ತಿಳಿಸಿದರು. 

ಹಿರಿಯ ನಾಗರಿಕರು ಮಾನಸಿಕ ಒತ್ತಡವನ್ನು ಹೇಗೆ ನಿರ್ವಹಣೆ ಮಾಡಬಹುದು ಮತ್ತು ಅತೀಯಾದ ಒತ್ತಡದಿಂದ ಆರೋಗ್ಯದ ಮೇಲೆ ಯಾವೇಲ್ಲಾ ಪರಿಣಾಮಗಳಾಗುತ್ತವೆ ಎಂಬುದರ ಕುರಿತು ತಿಳಿಸಿದರು. ಪುಸ್ತಕ ಓದುವುದು, ವಾಕಿಂಗ್, ಯೋಗ, ಉಸಿರಾಟದ ವ್ಯಾಯಾಮಗಳು ಮಾನಸಿಕ ಆರೋಗ್ಯಕ್ಕೆ ಒಳ್ಳೆಯವು ಎಂದು ಜಾಗೃತಿ ಮೂಡಿಸಿದರು.  

ಶಾಂತಾಯಿ ವೃದ್ಧಾಶ್ರಮದ ವ್ಯವಸ್ಥಾಪಕ ಮಾರಿಯಾ ವಿಜಯ ಮೋರೆ, ವೇಣುಧ್ವನಿಯ ಕಾರ್ಯಕ್ರಮ ಸಂಯೋಜಕ ಮಂಜುನಾಥ ಬಳ್ಳಾರಿ, ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ. ಎಸ್‌. ಮತ್ತು ಮಂಜುನಾಥ ಪೈ ಉಪಸ್ಧಿತರಿದ್ದರು.