ಜೀವನಕ್ಕೆ ಆಧ್ಯಾತ್ಮಿಕತೆ ಅಳವಡಿಸಿಕೊಳ್ಳಿ: ಪೂಜ್ಯ ಸಿದ್ದಲಿಂಗ ಶ್ರೀ

Embrace Spirituality in Life: Pujya Siddalinga Sri

ಜೀವನಕ್ಕೆ ಆಧ್ಯಾತ್ಮಿಕತೆ ಅಳವಡಿಸಿಕೊಳ್ಳಿ: ಪೂಜ್ಯ ಸಿದ್ದಲಿಂಗ ಶ್ರೀ 

 ತಾಳಿಕೋಟಿ, 27; ನಮ್ಮ ಬಳಿ ಇರುವ ಬಂಗಾರ,ಹಣ ಜಮೀನುಗಳಿಂದ ನಾವು ಶ್ರೀಮಂತರು ಎನಿಸಿಕೊಳ್ಳುವುದಿಲ್ಲ, ನಿಜವಾದ ಶ್ರೀಮಂತಿಕೆ ಹೃದಯ ವೈಶಾಲ್ಯತೆಯಾಗಿದೆ,ಯಾರು ಹೃದಯ ಶ್ರೀಮಂತಕೆಯನ್ನು ಗಳಸಿಕೊಂಡಿದ್ದಾರೋ ಅವರೇ ನಿಜವಾದ ಶ್ರೀಮಂತರು ಎಂದು ಖಾಸ್ಗತೇಶ್ವರ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. 

ತಾಲೂಕಿನ ನಾವದಗಿ ಗ್ರಾಮದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದ ಶಾಖಾ ಮಠ ಬ್ರಹನ್ಮಠದ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಪ್ರಥಮ ಗುರು ಪಟ್ಟಾಧಿಕಾರ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ ನಾವಿಂದು ಈ ಲೋಕದ ವಸ್ತುಗಳಿಂದ ಶಾಂತಿ ಹಾಗೂ ನಿಮ್ಮದಿಯನ್ನು ಪಡೆಯಲು ಬಯಸುತಿದ್ದೇವೆ ಅದೆಂದೂ ಸಾಧ್ಯವಿಲ್ಲ ಏಕೆಂದರೆ ಶಾಂತಿ ನೆಮ್ಮದಿ ಹಾಗೂ ಸಮಾಧಾನ ಅಧ್ಯಾತ್ಮಿಕತೆಯಲ್ಲಿದೆ, ಧರ್ಮದ ಉನ್ನತ ಮೌಲ್ಯಗಳಿಂದಲೇ ಜೀವನ ಸಾರ್ಥಕ ವಾಗುತ್ತದೆ ಎಲ್ಲರೂ ಧರ್ಮವಂತರಾಗಲು ಪ್ರಯತ್ನಿಸಬೇಕು ಎಂದರು. 

 ಯರನಾಳ ವಿರಕ್ತ ಮಠದ ಪೂಜ್ಯಶ್ರೀ ಗುರು ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ ನಾವದಗಿಯ ಪೂಜ್ಯರು ನಿಮ್ಮನ್ನು ಸಂಸ್ಕರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ, ಅವರೊಬ್ಬ ನುಡಿದಂತೆ ನಡೆಯುವ ವ್ಯಕ್ತಿ, ಅವರ ಗುರು ಪಟ್ಟಾಧಿಕಾರದ ಕಾರ್ಯಕ್ರಮ ನೀವೆಲ್ಲರೂ ಸೇರಿ ಅಭೂತಪೂರ್ವಕವಾಗಿ ಯಶಸ್ವಿಗೊಳಿಸಿದ್ದೀರಿ ಈ ಕಾರ್ಯಕ್ರಮಕ್ಕೂ ಸಹಾಯ ಸಹಕಾರ ನೀಡಿ ಎಂದರು.ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಪೂಜ್ಯಶ್ರೀ ಗುರು ಸಂಗನಬಸವ ಮಹಾಸ್ವಾಮಿಗಳಿಗೆ ಶ್ರೀಮಠದಿಂದ ಗೌರವ ಸಮರೆ​‍್ಣ ಸಲ್ಲಿಸಲಾಯಿತು. ಸಮಾರಂಭದ ಸಾನಿಧ್ಯವನ್ನು ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ನಾವದಗಿ ಗ್ರಾಮದ ಗಣ್ಯರು ಗುರು ಹಿರಿಯರು ಹಾಗೂ ಮಹಿಳೆಯರು ಇದ್ದರು.