ವಿದ್ಯುತ್ ಶಾಟ್ ಸರ್ಕ್ಯೂಟ್: 1 ಕೋಟಿಗೂ ಅಧಿಕ ವಸ್ತುಗಳು ಸುಟ್ಟು ಭಸ್ಮ
ಜಮಖಂಡಿ 08: ನಗರದ ವಿಜಯಪೂರ ರಸ್ತೆಯ ಹೊರವಲಯದಲ್ಲಿ ತಡರಾತ್ರಿ ಸಮಯದಲ್ಲಿ ವಿದ್ಯುತ್ ಶಾಟ್ ಸರ್ಕ್ಯೂಟ್‌ನಿಂದ ಗಾದಿ ಕಾರ್ಖಾನೆ ಹಾಗೂ ಗ್ಯಾರೇಜ್ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 1 ಕೋಟಿಗೂ ಅಧಿಕ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಸಂಭವಿಸಿದೆ.
ನಗರದ ವಿಜಯಪೂರ ರಸ್ತೆಯ ಬಸವ ನಗರ ಹತ್ತಿರ ಇರುವ ರೆಹೆಮತುಲಾ ನಧಾಪ ಅವರ ಗಾದಿ ಕಾರ್ಖಾನೆಗೆ ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಗಾದಿಗಳನ್ನು ತಯಾರಿಸುವ ಹತ್ತಿಗೆ ಗಂಟುಗಳಿಗೆ ಹಾಗೂ ಗಾದಿಗಳಿಗೆ ಬೆಂಕಿ ಹೊತ್ತಿದ ಪರಿಣಾಮ ಸಂಪೂರ್ಣವಾಗಿ ಗೋಡಾವನ ಸುಟ್ಟು ಭಸ್ಮವಾಗಿದ್ದು, ರೆಹೆಮತುಲಾ ನಧಾಪ ಅವರ ಗಾದಿ ಕಾರ್ಖಾನೆಯಲ್ಲಿ ಇರುವ ವಸ್ತುಗಳು ಸರಿಸುಮಾರು 25 ಲಕ್ಷ ರೂ.ಅಧಿಕವಾಗಿ ಬೆಂಕಿ ಕೆನ್ನಾಲಿಗೆ ಸುಟ್ಟು ಭಸ್ಮವಾಗಿ ನಷ್ಟ ಸಂಭವಿಸಿದೆ.
ಗಾದಿ ಕಾರ್ಖಾನೆ ಪಕ್ಕಕ್ಕೆ ಹೊಂದಿಕೊಂಡಿರುವ ಶಿವಾಜಿ ಇಂಜಿನಿಯರಿಂಗ್ ಗ್ಯಾರೇಜ್‌ಗೆ ಸಂಬಾಜಿ ರಾಜು ಪಳಕೆ ಅವರ ಗ್ಯಾರೇಜ್ ಸಹ ಬೆಂಕಿ ಹೊತ್ತಿದ ಪರಿಣಾಮ ಗ್ಯಾರೇಜ್‌ನಲ್ಲಿ ಇರುವ ಜೆಸಿಬಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು. ಗ್ಯಾರೇಜ್‌ನಲ್ಲಿ ಇರುವ ಸಿಒಟಿ ಮಷೀನ್, ಹೌಸ್ ಪೆಪ್ಸಿ ಕ್ಲಿಪಿಂಗ್ ಮಷೀನ್ ಸೇರಿದಂತೆ ಸರಿಸುಮಾರು, 75 ಲಕ್ಷಕ್ಕೂ ರೂ. ಅಧಿಕವಾಗಿ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಬೆಂಕಿ ಕೆನ್ನಾಲಿಗೆ ಗ್ಯಾರೇಜ್ ಸುಟ್ಟು ಭಸ್ಮವಾಗಿ ನಷ್ಟ ಸಂಭವಿಸಿದೆ. ತಡರಾತ್ರಿ 3 ಗಂಟೆ ಸುಮಾರಿಗೆ ಸಾರ್ವಜನಿಕರು ಮಾಹಿತಿ ತಿಳಿಸಿದ ಬಳಿಕ ವಿಷಯ ತಿಳಿದು ಬಂದಿದೆ ಎಂದು ರೆಹಮತುಲಾ ನಧಾಪ ಹಾಗೂ ಸಂಭಾಜಿ ರಾಜು ಪಳಕೆ ಮಾಹಿತಿಯನ್ನು ನೀಡಿದ್ದಾರೆ.
ತಡರಾತ್ರಿ ಸಮಯದಲ್ಲಿ ಅಗ್ನಿಶಾಮಕ ದಳದವರು ಆಗಮಿಸಿ, ಸರಿಸುಮಾರು ಬೆಳಗಿನ ಜಾವದವರೆಗೆ ಬೆಂಕಿ ಹೊತ್ತಿ ಉರಿಯುತ್ತಿರುವ ಗಾದಿ ಕಾರ್ಖಾನೆ ಹಾಗೂ ಗ್ಯಾರೇಜ್ ಜಮಖಂಡಿ ಹಾಗೂ ಬನಹಟ್ಟಿ ಅಗ್ನಿಶಾಮಕ ದಳದ ತಂಡವು ಅಗ್ನಿಯನ್ನು ನಂದಿಸಲು ಹರಸಾಹ ಪಟ್ಟಿದ್ದಾರೆ. ಸುಮಾರು ಅಗ್ನಿಶಾಮಕ ದಳದ ವಾಹನಗಳು ಒಂದಾದ ಬಳಿ ಮತ್ತೊಂದು ಆಗಮಿಸಿ. ಜಮಖಂಡಿ ಮತ್ತು ಬನಹಟ್ಟಿಯ ಸಿಬ್ಬಂದಿಗಳು ತಡರಾತ್ರಿಯಿಂದ ಬೆಳಗಿನ ಜಾವದವರೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾದಿ ಕಾರ್ಖಾನೆ ಹಾಗೂ ಗ್ಯಾರೇಜ್ ಪಕ್ಕದಲ್ಲಿ ಕಟ್ಟಿಗೆ ಅಡ್ಡೆಯು ಇದ್ದು, ಕಟ್ಟಿಗೆ ಅಡ್ಡೆಗೆ ಬೆಂಕಿ ಹೊತ್ತದ ಹಾಗೆ ಅಗ್ನಿಶಾಮಕ ದಳದವರು ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳದ ಠಾಣಾ ಅಧಿಕಾರಿ ರಾಜು, ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ನಿಂಗಪ್ಪ ಹೂಗಾರ, ಪ್ರಮುಖ ಅಗ್ನಿಶಾಮಕ ಮಾದೇವ ಹಳೆಗೌಡರ, ವಾಹನ ಚಾಲಕ ಶೇಖರ್ಪ ಚೆಟ್ಟರ, ಚಾಲಕ ತಂತ್ರಜ್ಞಾನ ಶ್ರೀಧರ ಮಾಳಶೆಟ್ಟಿ, ಅಗ್ನಿಶಾಮಕ ಅಶೋಕ ಮೇಳಗಡೆ, ಶ್ರವಣಕುಮಾರ ವಾಜಂತ್ರಿ, ಭರಮಪ್ಪ ಮೇಳಿಗೇರಿ, ಪರಶುರಾಮ ತೇರದಾಳ ಹಾಗೂ ಬನಹಟ್ಟಿ, ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ರಮೇಶ ಚೂಟೆ, ಎಂ.ಎಸ್.ಹೂಗಾರ, ಕಾಶೀಮ ಹಳೂರ, ಆರಿ್ಸ.ಬಿಳೂರ, ಮಂಜು ತಳವಾರ, ಮಾರುತಿ ರಾಠೋಡ ಅಗ್ನಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸ್ಥಳಕ್ಕೆ ಪೋಲಿಸ್ ಸಿಬ್ಬಂದಿಗಳು ಇದ್ದರು.