ಕಾಗವಾಡ 05: ಈ ವರೆಗೆ ಎಲ್ಲೆಡೆ ರಸ್ತೆ ಬದಿಗೆ ವಿದ್ಯುತ್ ಕಂಬ ಇರುವದನ್ನು ಕಂಡಿದ್ದೇವೆ. ಅದೇ ಕಂಬಿನ ಮೇಲೆ ಬೀದಿದೀಪ ಇರುವದನ್ನು ನೋಡಿದ್ದೇವೆ. ಆದರೆ ಹೆಸ್ಕಾಂ ಇಲಾಖೆ ಅಧಿಕಾರಿ ಮತ್ತು ರಸ್ತೆ ನಿಮರ್ಿಸುವ ಗುತ್ತಿಗೆದಾರರು ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬವನ್ನಿಟ್ಟು, ರಸ್ತೆ ನಿಮರ್ಿಸಿದ್ದನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ?
ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಈ ಯಡವಟ್ಟು ಗುತ್ತಿಗೆದಾರನೊಬ್ಬ ಮಾಡಿದ್ದಾನೆ. ಗುತ್ತಿಗೆದಾರನ ಬೇಜವಾಬ್ದಾರಿಯೋ, ಹೆಸ್ಕಾಂ ಇಲಾಖೆಯ ನಿರ್ಲಕ್ಷವೊ, ಅಥವಾ ಶೇಡಬಾಳ ಪಟ್ಟಣ ಪಂಚಾಯತಿಯ ನಿಷ್ಕಾಳಜಿತನವೋ ಏನೋ ರಸ್ತೆ ಬದಿ ಇರಬೇಕಾಗಿದ್ದ ವಿದ್ಯುತ್ ಕಂಬ ರಸ್ತೆ ಮಧ್ಯಕ್ಕೆ ಬಂದಿದೆ. ಇದೊಂದು ಇಲಾಖೆಯ ಯಡವಟ್ಟು ಅಪಹಾಸ್ಯಕ್ಕೆ ಒಳಗಾಗಿದೆ.
ಪಟ್ಟಣ ಪಂಚಾಯತಿಯ ವಾಡರ್್ ನಂ. 8ರ ವ್ಯಾಪ್ತಿಯಲ್ಲಿ ಬರುವ ಶೇಡಬಾಳ-ಕೋಣನಕೋಡಿಯ ಮಧ್ಯದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ರಸ್ತೆ ನಿಮರ್ಾಣ ಕಾಮಗಾರಿ ಕೈಗೊಂಡಿದ್ದಾರೆ.
ರಸ್ತೆ ಅಗಲಿಕರಣ ಮಾಡುವಾಗ ರಸ್ತೆ ಬದಿಗೆ ಇದ್ದ ವಿದ್ಯುತ್ ಕಂಬ, ರಸ್ತೆ ಮಧ್ಯದಲ್ಲಿ ಬಂದಿರುವ ಕಾರಣ ವಿದ್ಯುತ್ ಕಂಬವನ್ನು ರಸ್ತೆ ಬದಿಗೆ ಹಾಕದೇ ಗುತ್ತಿಗೆದಾರ ಕಂಬ ಇದ್ದ ಸ್ಥಿತಿಯಲ್ಲಿಯೇ ರಸ್ತೆ ಡಾಂಬರಿಕರಣ ಮಾಡಿದ್ದರಿಂದ, ಯಡವಟ್ಟಾಗಿದೆ.
ಈ ಕುರಿತು ಗುತ್ತಿಗೆದಾರರನ್ನು ವಿಚಾರಿಸಿದರೆ ವಿದ್ಯುತ್ ಕಂಬ ಮೊದಲು ರಸ್ತೆ ಬದಿಗೆ ಇದ್ದು ರಸ್ತೆ ಸರಳಗೊಳಿಸಿದ್ದರಿಂದ ರಸ್ತೆ ಮಧ್ಯದಲ್ಲಿ ಬಂದಿದೆ. ವಿದ್ಯುತ್ ಕಂಬ ಸ್ಥಳಾಂತರಿಸುವ ಜವಾಬ್ದಾರಿ ಪಟ್ಟಣ ಪಂಚಾಯತಿ, ಮತ್ತು ಹೆಸ್ಕಾಂ ಇಲಾಖೆಯದ್ದಾಗಿದೆ. ಇದಕ್ಕೆ ನಂದೇನು ಸಂಬಂಧವಿಲ್ಲಾ ಎಂದು ಹೇಳುತ್ತಿದ್ದಾರೆ.
ಇದೇ ಮಾರ್ಗದಲ್ಲಿ ಶೇಡಬಾಳಕ್ಕೆ ಪೂರೈಸುವ ಹೆಸ್ಕಾಂ ಇಲಾಖೆಯ 33 ಕೆವ್ಹಿ ಸಬಸ್ಟೇಶನ ಇದೆ. ಇಲ್ಲಿಂದ ಹೈವೋಲಟೆಜ್ ವಿದ್ಯುತ್ ಸರಬರಾಜು ಮಾಡುವ ಕಂಬಗಳು ಹಾಕಿಸಿದ್ದಾರೆ. ರಸ್ತೆ ನಿಮರ್ಿಸುವಾಗ ಸದರಿ ಕಂಬ ಸ್ಥಳಾಂತರಿಸದೆ, ರಸ್ತೆ ಮಧ್ಯದಲ್ಲಿ ಇಟ್ಟುಕೊಂಡು ಡಾಂಬರಿಕರಣ ಮಾಡಲಾಗಿದೆ.
ಸದರಿ ಕಾಮಗಾರಿ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಅದನ್ನು ಗಮನಿಸದೆ ಕಳಪೆಮಟ್ಟದ ರಸ್ತೆ ಕಾಮಗಾರಿ ಮಾಡಿದ್ದು, ಈ ಕಾಮಗಾರಿ ಪುನಃ ಮಾಡಲು ಪಟ್ಟಣ ಪಂಚಾಯತಿ ವತಿಯಿಂದ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ. ವಿದ್ಯುತ್ ಕಂಬದ ಯಡವಟ್ಟ ಇದೇ ಗುತ್ತಿಗೆದಾರರು ಮಾಡಿದ್ದಾರೆಯೆಂದು ಪಟ್ಟಣ ಪಂಚಾಯತಿ ಸದಸ್ಯ ಸುನೀಲ ಸೋಟ್ರಾಯಿ ಹೇಳಿದರು.
ರಸ್ತೆ ಬದಿಗೆಯಿದ್ದ ವಿದ್ಯುತ್ ಕಂಬ ರಸ್ತೆ ಅಗಲಿಕರಣ ಮಾಡಿ, ರಸ್ತೆ ನಿಮರ್ಾಣ ಮಾಡಿರುವ ಗುತ್ತಿಗೆದಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಡವಟ್ಟು ಮಾಡಿದ್ದಾರೆ. ಆದರೂ ಮೇಲಾಧಿಕಾರಿಗಳ ಆದೇಶದಂತೆ ವಿದ್ಯುತ್ ಸ್ಥಳಾಂತರಿಸುತ್ತೇನೆ ಎಂದು ಡಿ.ಎಸ್.ಅರಳಿಕಟ್ಟಿ ಹೇಳಿದರು.
ಪಟ್ಟಣ ಪಂಚಾಯತಿಯಿಂದ ರಸ್ತೆ ಮಾಡಿದ್ದು ತಪ್ಪು:
ಪಟ್ಟಣ ಪಂಚಾಯತಿ ವತಿಯಿಂದ ನಗರೋತ್ಥಾನ ಅನುದಾನ ಕೇವಲ ಪಟ್ಟಣದಲ್ಲಿ ಅಭಿವೃದ್ಧಿಗಾಗಿ ಬಳಿಸಬೇಕಾಗುತ್ತದೆ. ಆದರೆ ಪಟ್ಟಣ ಪಂಚಾಯತಿಯ ಅಭಿಯಂತರು ಎರಡು ಗ್ರಾಮಗಳಿಗೆ ಜೋಡಿಸುವ ರಸ್ತೆ ಮಾಡುವುದು ತಪ್ಪು. ಕಳಪೆಮಟ್ಟದ ಕಾಮಗಾರಿ ಮತ್ತು ಅನಧಿಕೃತ 30 ಲಕ್ಷ ರೂ. ಅನುದಾನ ಬಳಿಸಿ ರಸ್ತೆ ನಿಮರ್ಿಸಿದ್ದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೊಣೆಗಾರ ಮಾಡಬೇಕೆಂದು ಕೆಲ ಪಟ್ಟಣ ಪಂಚಾಯತಿ ಸದಸ್ಯರು ನೇರವಾಗಿ ಹೇಳಿದರು.
ಕಳಪೆ ಕಾಮಗಾರಿ ತನಿಖೆಯಾಗಿ ವಿದ್ಯುತ್ ಕಂಬ ಸ್ಥಳಾಂತರಿಸಬೇಕೆಂದು ಇದೇ ವಾಡರ್ಿನ ಪರಿಶಿಷ್ಟ ಪಂಗಡದ ಕಾರ್ಯಕರ್ತರಾದ ಗಣಪತಿ ಭಾಪಕರ, ವಿರುಪಾಕ್ಷ ನರಸಾಯಿ, ಸಂಜು ನರಸಾಯಿ, ಗಣಪತಿ ನರಸಾಯಿ, ಸುಭಾಷ ನರಸಾಯಿ, ಲಕ್ಷ್ಮಣ ನರಸಾಯಿ ಬೇಡಿಕೆ ಮಂಡಿಸಿದ್ದಾರೆ.