ಪ್ರಾಥಮಿಕ ಕೃ.ಪ.ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಕಂಪ್ಲಿ 15: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಟ್ಟೆ ಸಣ್ಣ ದುರುಗಪ್ಪ ಹಾಗೂ ಉಪಾಧ್ಯಕ್ಷರಾಗಿ ಬಳೆ ಮಲ್ಲಿಕಾರ್ಜುನ ಅವಿರೋಧವಾಗಿ ಆಯ್ಕೆಯಾದರು. ಇಲ್ಲಿನ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಈ ಇಬ್ಬರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಕಟ್ಟೆ ಸಣ್ಣ ದುರುಗಪ್ಪ, ಉಪಾಧ್ಯಕ್ಷರಾಗಿ ಬಳೆ ಮಲ್ಲಿಕಾರ್ಜುನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಯರಿ್ರಸ್ವಾಮಿ ಘೋಷಿಸಿದರು.
ನೂತನ ಅಧ್ಯಕ್ಷ ಕಟ್ಟೆ ಸಣ್ಣ ದುರುಗಪ್ಪ ಮಾತನಾಡಿ, ಸಹಕಾರ ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ನಿರ್ದೇಶಕರು ಅಧ್ಯಕ್ಷ ಸ್ಥಾನಕ್ಕೆ ನಮ್ಮನ್ನು ಆಯ್ಕೆ ಮಾಡಿದ್ದು, ಅವರ ನಿರ್ದೇಶನದಂತೆ ಅಭಿವೃದ್ಧಿಗೆ ಶ್ರಮಿಸಲಾಗುವುದು. ಮತ್ತು ರೈತರಿಗೆ ಸಮರ್ಕವಾಗಿ ರಸಗೊಬ್ಬರ ಕಲ್ಪಿಸಲಾಗುವುದು ಎಂದರು.
ಈ ಚುನಾವಣೆ ಪ್ರಕ್ರಿಯೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಈರಣ್ಣ, ನಿರ್ದೇಶಕರಾದ ಅಳ್ಳಿ ನಾಗರಾಜ, ಈರ್ಪ ಜೋಳಮಾರ, ಗಂಗಣ್ಣ ತಳವಾರ, ಎಸ್.ಸಣ್ಣಪ್ಪ, ಬಿ.ಎಂ.ವಿಶಾಲಾಕ್ಷಿ, ಕೆ.ನಾಗಮ್ಮ, ರಾಜೇಶ ಶೆರೆಗಾರ, ಟಿ.ನಿರಂಜನಯ್ಯ, ಕೆ.ಕೃಷ್ಣ, ಬಿ.ಬಸವರಾಜ ಇದ್ದರು. ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಡಾ.ವಿ.ಎಲ್.ಬಾಬು, ಮುಖಂಡರಾದ ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಪಿ.ಮೂಕಯ್ಯಸ್ಚಾಮಿ, ಕರೇಕಲ್ ಮನೋಹರ, ಯು.ಹನುಮಂತ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.