ಸಿ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರ ಸಂಘದ ಚುನಾವಣೆ ಹಳೆ ಸದಸ್ಯರನ್ನು ಸೋಲಿಸಿ ಹೊಸ ಸದಸ್ಯರು ಆಯ್ಕೆ

Election of C Hadapada Appanna Multi-Purpose Cooperative Society elected new members after defeatin

ಸಿ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರ ಸಂಘದ ಚುನಾವಣೆ ಹಳೆ ಸದಸ್ಯರನ್ನು ಸೋಲಿಸಿ ಹೊಸ ಸದಸ್ಯರು ಆಯ್ಕೆ 

ಸಿಂದಗಿ 06: ಪಟ್ಟಣದ ಹಡಪದ ಅಪ್ಪಣ್ಣ  ವಿವಿದೋದ್ದೇಶಗಳ ಸಹಕಾರ ಸಂಘ ನಿಯಮಿತ ಸಿಂದಗಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಹಳೇ ಸದಸ್ಯರನ್ನು ಸೋಲಿನ ರುಚಿ ತೊರಿಸಿ ಎಲ್ಲ ಹೊಸ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ,ವ ಉಪ ನಿಬಂಧಕರ ಕಛೇರಿ ಸಹಕಾರ ಅಭಿವೃದ್ದಿ ಅಧಿಕಾರಿ ಎಂ.ಎಸ್‌.ರಾಠೋಡ ಇವರು ಘೋಷಣೆ ಮಾಡಿದರು.  

       ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದ ಸುಧಾರಾಣಿ ಅನೀಲ ಕರ್ನಾಳ, ಪ್ರವೀಣ ಗುರಲಿಂಗಪ್ಪ ಹಡಪದ, ತೌಹಿದ ಶೌಕತಲಿ ಮಳ್ಳಿಕರ, ಕಾವೇರಿ ಶೇಖರ ಹಡಪದ, ಭಾಗಣ್ಣ ಜಟ್ಟೆಪ್ಪ ಹಡಪದ, ಶಿವಶರಣ ದುಂಡಪ್ಪ ಸಿಂದಗಿ, ಸಿದ್ರಾಮಪ್ಪ ನಿಂಗಪ್ಪ ಹಡಪದ ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಲಕ್ಷ್ಮೀಂಬಾಯಿ ದುಂಡಪ್ಪ ಸಿಂದಗಿ, ಸುನಂದಾ ತೀರ್ಥಪ್ಪ ಹಡಪದ, ಹಿಂದುಳಿದ ಅ ಕ್ಷೇತ್ರದಿಂದ ಬಸಮ್ಮ ಜಟ್ಟೆಪ್ಪ ಹಡಪದ ಹಿಂದುಳಿದ ಬ ಕ್ಷೇತ್ರದಿಂದ ನಿರ್ಮಲಾ ರೇಚಣ್ಣ ಗೋಲಗೇರಿ ಪರಿಶಿಷ್ಠ ಪಂಗಡ ಕ್ಷೇತ್ರದಿಂದ ಮೀನಾಕ್ಷಿ ಶಿವಪುತ್ರ ಅಸ್ಕಿ, ಪ.ಜಾ ಕ್ಷೇತ್ರದಿಂದ ಕುಮಾರ ಚಂದ್ರಕಾಂತ ಶಿವಲಿಂಗಪ್ಪ ಮಾದರ ಆಯ್ಕೆಯಾಗಿದ್ದಾರೆ.