ಮತದಾರರಲ್ಲಿ ಜಾಗ್ರತಿ ಮೂಡಿಸಲು ಮತದಾನ ದಿನಾಚರಣೆ ಮುಖ್ಯ : ಎಫ್ ಬಿ ತಳವಾರ
ಮಹಾಲಿಂಗಪುರ: ಸ್ಥಳೀಯ ಕೆ ಎಲ್ ಇ ಸಂಸ್ಥೆಯ ಶ್ರೀ ಚನ್ನಗಿರಿಶ್ವರ ಪ್ರಾಸಾಧಿಕ ಕಲಾ,ವಿಜ್ಞಾನ ಮತ್ತು ಡಿ ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ, ಎನ್.ಎಸ್.ಎಸ್ ಘಟಕ ಹಾಗೂ ಯುಥ್ ರೆಡ್ ಕ್ರಾಸ್ ವಿಂಗ್‌ನ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಎಫ್ ಬಿ ತಳವಾರ ಮಾತನಾಡಿ ಮತದಾರರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಮತದಾರರ ಯಾವ ಆಮಿಷಗಳಿಗೂ ಒಳಗಾಗದೆಣಟಿಜಜಜಿಟಿಜಜ ಮತದಾನ ಚಲಾಯಿಸಿಬೇಕು. ಮತದಾನ ಮಾಡುವಾಗ ನಿಷ್ಠೆಯಿಂದ ಹಾಗೂ ನಿರ್ಬಿತಿ ಮತದಾನ ಮಾಡಬೇಕು. ಜನಸಂಖ್ಯೆ ಹೆಚ್ಚಾದರೂ ಮತದಾನ ಹೆಚ್ಚಾಗಲಿಲ್ಲ ಹಾಗಾಗಿ ಮತದಾನ ದಿನಾಚರಣೆ ಆಚರಿಸಲು ನಿಶ್ಚಯಿಸಲಾಯಿತು ಎಂದು ಹೇಳಿದರು.
ನಂತರ ಡಾ.ಎ ಎಮ್ ನರೋಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಮತದಾರರು ಒಂದೊಠು ಮತ ಹಾಕುವ ಮುನ್ನ ಜಾಗ್ರತೆ ವಹಿಸಬೇಕು. ನಮ್ಮ ಮತವನ್ನು ಮಾರಿಕೊಳ್ಳಬಾರದು. ಪೂರ್ಣ ಪ್ರಮಾಣದಲ್ಲಿ ಮತದಾನವಾದಾಗ ಭಾರತ ಪ್ರಜಾಪ್ರಭುತ್ವ ದೇಶವಾಗಲು ಸಾಧ್ಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಉಪನ್ಯಾಸಕರಾದ ಶಿವಲಿಂಗ ಸಿದ್ನಾಳ್,ಆರ್ ಎಸ್ ಪೂಜಾರಿ,ಆಯ್ ಸಿ ಶಿರೋಳ, ಕುಮಾರಿ ಡಿ ಎಂ ಹೊಸಪೇಟಿ,ಟಿ ಡಿ ಡಂಗಿ, ಸೇರಿದಂತೆ ಅನೇಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಗೀತಾ ತೇಲಿ ನಿರೂಪಿಸಿದರು ಎ ಎಮ್ ಉಗಾರೆ ಸ್ವಾಗತಿಸಿದರು.ಪಿ ಎಂ ಗೌಳಿ ವಂದಿಸಿದರು.
25 ಟಟಠಿ 01 ಫೋಟೋ