ಸಿ ಎಸ್ ಷಡಾಕ್ಷರಿ ನೌಕರರ ಸಂಘಕ್ಕೆ 2 ಬಾರಿಗೆ ಆಯ್ಕೆ

Elected to CS Shadakshari Employees' Association for 2 terms

ಸಿ ಎಸ್ ಷಡಾಕ್ಷರಿ ನೌಕರರ ಸಂಘಕ್ಕೆ 2 ಬಾರಿಗೆ ಆಯ್ಕೆ

ಗದಗ 14 :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ 2 ಬಾರಿಗೆ ಆಯ್ಕೆ ಆಗಿರುವ ಸಿ ಎಸ್ ಷಡಾಕ್ಷರಿ ರವರು ಪ್ರಥಮ ಬಾರಿಗೆ ಗದಗ ನಗರಕ್ಕೆ ಆಗಮಿಸುತ್ತಿದ್ದು, ಅವರಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಜಿಲ್ಲಾ ಶಾಖೆಯ ಪದಗ್ರಹಣ ಕಾರ್ಯಕ್ರಮವನ್ನ ಮಾರ್ಚ-15 ರ ಶನಿವಾರ ಸಂಜೆ 4 ಗಂಟಗೆ  ಹಮ್ಮಿಕೊಂಡಿರುವುದಾಗಿ ರಾಜ್ಯ ಹಿರಿಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ.ರವಿ ಎಲ್ ಗುಂಜೀಕರ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸರಕಾರಿ ನೌಕರರಿಗೆ ಅನೇಕ ರೀತಿಯಲ್ಲಿ ಅನೂಕೂಲ ಅಗುವಂತಹ ಯೋಜನೆಗಳಿಗೆ ಸ್ಪಂದಿಸುತ್ತಾ ರಾಜ್ಯಾಧ್ಯಕ್ಷರು ಬಂದಿರುತ್ತಾರೆ. ಅವರ ಆಗಮನ ದಿನದಂದು ಚುನಾಯಿತ ಸದಸ್ಯರ ಪದಗ್ರಹಣವನ್ನ ಹಮ್ಮಿಕೊಂಡಿದ್ದು, ಮಾರ್ಚ-15 ರಂದು ನಗರದ ಮುಳಗುಂದ ನಾಕಾದಿಂದ ಧೋಭಿ ಘಾಟ-ಟಿಪ್ಪು ಸುಲ್ತಾನ ವೃತ್ತ ಮಾರ್ಗವಾಗಿ100 ಕ್ಕೂ ಅಧಿಕ ಬೈಕ್ ಜಾಥಾ, ತೆರೆದ ವಾಹನಗಳು ಹಾಗೂ ಕಲಾ ತಂಡಗಳ ಮುಖಾಂತರ ಮತ್ತು ಸರಕಾರಿ ಮಹಿಳಾ ನೌಕರರಿಂದ ಕುಂಭಮೇಳ ದೊಂದಿಗೆ ಪಂಡಿತ ಭೀಮಸೇನ ಜೋಷಿ ಕಲಾ ರಂಗಮಂದಿರದ ವರೆಗೆ ಮೇರವಣಿಗೆ ಸಾಗಲಿದ್ದು ರಾಜ್ಯ ಸರಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ವಿನಂತಿಸಿದರು.                  ಈ ಕಾರ್ಯಕ್ರಮವನ್ನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರು ಉದ್ಘಾಟಿಸುವರು,ಮುಖ್ಯ ಅತಿಥಿಗಳಾಗಿ ಸಿ ಎನ್ ಶ್ರೀಧರ ಜಿಲ್ಲಾಧಿಕಾರಿಗಳು ಗದಗ,ಬಿ ಎಸ್ ನೇಮಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗದಗ, ಭರತ್ ಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಗದಗ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬಿ ಸಂಕದ ಭಾಗವಹಿಸುವುದಾಗಿ ತಿಳಿಸಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನ ರಾಜ್ಯ ಹಿರಿಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ.ರವಿ ಎಲ್ ಗುಂಜೀಕರ ವಹಿಸುವರು. ಉಪಸ್ಥಿತಿ ಪ್ರಧಾನ ಕಾರ್ಯದರ್ಶಿ ಗಿರಿಗೌಡ ಎಚ್, ರಾಜ್ಯ ಖಜಾಂಚಿ ವಿ ವಿ ಶಿವರುದ್ರಯ್ಯ, ಗೌರವಾಧ್ಯಕ್ಷ ಎಸ್ ಬಸವರಾಜ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ,ನಾಗರಾಜ ಜುಮ್ಮನವರ ಸುರೇಶ ಶೆಡಶ್ಯಾಳ,ಎನ್ ನರಸಿಂಹರಾಜು, ಆರ್ ರ್ಮೋಹನ್ ಕುಮಾರ, ಶಂಭುಗೌಡ ಎಸ್, ಎಸ್ ಎಫ್ ಸಿದ್ದನಗೌಡರ, ಬಿ ಎ ಕುಂಬಾರ, ಬಸವರಾಜ ರಾಯವ್ವಗೊಳ ಹಾವೇರಿ ಜಿಲ್ಲಾ ಅಧ್ಯಕ್ಷ ಮಲ್ಲೇಶ ಕರಿಗಾರ ಭಾಗಿಯಾಗುವುದಾಗಿ ತಿಳಿಸಿದರು.ಕರ್ನಾಟಕ ರಾಜ್ಯ  ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರುಗಳಾದ  ಗಜೇಂದ್ರಗಡ  ಡಾ.ಎಂ ಎ ಹಾದಿಮನಿ, ರೋಣ ಎಸ್ ಜಿ ದಾನಪ್ಪಗೌಡ್ರ, ನರಗುಂದ ಮಲ್ಲಿಕಾರ್ಜುನ ಹಿರೇಮಠ, ಶಿರಹಟ್ಟಿ ಶಿವಪ್ಪ ಹದ್ಲಿ, ಲಕ್ಷ್ಮೇಶ್ವರ ಜಿ ಡಿ ಹವಳದ, ಮುಂಡರಗಿ ಎನ್ ಜಿ ಹಳ್ಳಿಕೇರಿ ಇರುವುದಾಗಿ ತಿಳಿಸಿದರು. ಪತ್ರಿಕಾ ಗೋಷ್ಠಿ ವೇಳೆ ರಾಜ್ಯ ಪರಿಷತ್ ಸದಸ್ಯ ಡಿ ಟಿ ವಾಲ್ಮೀಕಿ, ಜಿಲ್ಲಾ ಖಜಾಂಚಿ ಎಂ ಎಂ ನಿಟ್ಟಾಲಿ, ಜಿಲ್ಲಾ ಕಾರ್ಯದರ್ಶಿ ಡಾ. ಬಸವರಾಜ ಬಳ್ಳಾರಿ, ಗೌರವಾಧ್ಯಕ್ಷ ಡಿ ಎಸ್ ತಳವಾರ, ಕಾರ್ಯಾಧ್ಯಕ್ಷ ಸಿದ್ಧಪ್ಪ ಲಿಂಗದಾಳ, ಹಿರಿಯ ಉಪಾಧ್ಯಕ್ಷ ಮಾರುತಿ ಮಂಗಳಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.