ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ : ಖಾದ್ರಿ

Efforts to fulfill just demands : Qadri

ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ : ಖಾದ್ರಿ  

  ಶಿಗ್ಗಾವಿ  15: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಎರಡನೇ ಹಂತದ ಅನಿರ್ಧಿಷ್ಟ ಅವಧಿಯ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ತಾಲೂಕು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಶನಿವಾರ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಪಿರ್ ಖಾದ್ರಿ ಭೇಟಿ ನೀಡಿ ಮನವಿ ಸ್ವೀಕರಿಸಿದರು.   

 ಕಳೆದ ಐದು ದಿನಗಳಿಂದ ಕಂದಾಯ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವದಾಗಿ ಪ್ರತಿಭಟನಾನಿರತರು ಹೆಸ್ಕಾಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.  

 ಮನವಿ ಸ್ವೀಕರಸಿ ತಮ್ಮ ನ್ಯಾಯಯುತ ಬೇಡಿಕೆಗಳು ನ್ಯಾಯಯುತವಾಗಿದ್ದು, ಸ್ವತಃ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿಮ್ಮ ಬೇಡಿಕೆಗೆ ಈಡೇರಿಕೆಗೆ ಮನವೊಲಿಸುವುದಾಗಿ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜಂಪಿರ್ ಖಾದ್ರಿ ಹೇಳಿದರು.  ಜಿಲ್ಲಾ ಅಧ್ಯಕ್ಷ ಡಿ.ಎಂ.ಪಾಟೀಲ, ಗೌ.ಅಧ್ಯಕ್ಷ ಪ್ರಸಾದ ಅಕ್ಕಿ, ಪದಾಧಿಕಾರಿಗಳಾದ ವೆಂಕಟೇಶ ಲಮಾಣಿ, ಶಕುಂತಲಾ ವಡ್ಡರ, ಮಾರುತಿ ದೊಡ್ಡಮನಿ, ರಾಜೇಶ ಜಿ, ಗದಿಗೆಪ್ಪ ಮೇಲಿಮನಿ, ಮರ್ದಾನಸಾಬ ಪಾಪಣ್ಣವರ, ಗಾಯಿತ್ರಿ ಹಲಕರ್ಣಿ, ಮಂಜುನಾಥ ಹಳ್ಳದ, ಮೆಹಬೂಬ ತೆಗ್ಗಿ, ಮಂಜುಳಾ ಕಾಳೆ, ಮಹಾಂತೇಶ ಹಡಪದ, ಅಕ್ಷತಾ ಅಲೆಗಾವ, ಕಿರಣ ತೆರದಾಳ, ಕೆ ಎ ಕಿಲ್ಲೆದಾರ, ಸುರೇಶ ಗಂಜಿಗಟ್ಟಿ, ಐಡಿ ನಂದಿ ಸೇರಿದಂತೆ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.