ಆರ್ಥಿಕ ವೆಚ್ಚ ಭಾರ ಕಡಿಮೆ ಮಾಡಿಕೊಂಡು ತಮ್ಮ ಆಧಾಯವನ್ನು ದ್ವಿಗುಣಗೊಳಿಸಿಕೊಳ್ಳಲು ಶ್ರಮವಹಿಸಬೇಕು : ಕೋಳಿವಾಡ
ರಾಣೇಬೆನ್ನೂರ 24: ತಂತ್ರಜ್ಞಾನಗಳನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ಆರ್ಥಿಕ ವೆಚ್ಚ ಭಾರ ಕಡಿಮೆ ಮಾಡಿಕೊಂಡು ತಮ್ಮ ಆಧಾಯವನ್ನು ದ್ವಿಗುಣಗೊಳಿಸಿಕೊಳ್ಳಲು ಶ್ರಮವಹಿಸಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ಅವರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಆವರಣದಲ್ಲಿ ಕೃಷಿ ಇಲಾಖೆ, ತಾಲೂಕಾ ಕೃಷಿಕ ಸಮಾಜ ಮತ್ತು ಆತ್ಮ ಯೋಜನೆ ಅಡಿಯಲ್ಲಿ ಏರಿ್ಡಸಲಾಗಿದ್ದ, ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯ ಕ್ರಮವನ್ನು ಕಣಜಕ್ಕೆ ಧಾನ್ಯಗಳನ್ನು ತುಂಬುವ ಮೂಲಕ ಉದ್ಘಾಟಿಸಿ, ಮಾತನಾಡಿದರು. ರೈತರು ಬೆಳೆಗಳಿಗೆ ರಸಗೊಬ್ಬರ ಕೀಟನಾಶಕ ಮತ್ತು ಇತರ ಪರಿಕರಗಳನ್ನು ನಿರ್ದಿಷ್ಟಪಡಿಸಿದ ಪ್ರಮಾಣಗಳನ್ನು ಮಾತ್ರ ಬಳಸಬೇಕು ವೈಜ್ಞಾನಿಕವಾಗಿ ಕೀಟ, ರೋಗಗಳನ್ನು ಹತೋಟಿ ಮಾಡುವ ಕ್ರಮಗಳನ್ನು ಅಳವಡಿಸಿಕೊಂಡು ತಮ್ಮ ಕೃಷಿಯಲ್ಲಿ ಉತ್ಫಾದನೆ ಹೆಚ್ಚಿಸಿಕೊಳ್ಳಲು ಚಿಂತನೆ ಮಾಡಬೇಕು ಎಂದರು. ತಾಲೂಕಿನ ರೈತರಿಗೆ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಾದ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವ ನನ್ನ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, 28 ಠ ಸುಮಾರು.ರೂ.50,000/-ಗಳಿಗೆ ಆಧಾಯ ಬರುವಂತೆ ಮಾಡುವುದಾಗಿ ತಿಳಿಸಿದರು.
ಉಪ ಕೃಷಿ ನರ್ದೇಶಕ ಕರಿಯಲ್ಲಪ್ಪ ಬಿ.ಕೆ ಮಾತನಾಡಿ, ಕೃಷಿ ಕಾಮದೇನು, ಕಲ್ಫವೃಕ್ಷವಿದ್ದಂತೆ ಕೃಷಿಗೆ ವೈಜ್ಞಾನಿಕ ಜ್ಞಾನ ಮತ್ತು ಅಳವಡಿಕೆ ಅವಶ್ಯ ಮಣ್ಣು, ನೀರು ಬಳಕೆ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಆಗುವ ಅಡ್ಡಪರಿಣಾಮಗಳನ್ನು ತಡೆಗಟ್ಟಲು ಸಾವಯವ ಕೃಷಿ ಪದ್ಧತಿಯ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ಶಾಂತಮಣಿ ಜಿ. ಅವರು ಮಾತನಾಡಿ, ರಾಷ್ಟ್ರೀಯ ರೈತ ದಿನಾಚರಣೆಯನ್ನು ನಮ್ಮ ದೇಶದ ಐದನೆ ಪ್ರಧಾನ ಮಂತ್ರಿ ದಿ. ಚೌಧರಿ ಚರಣ ಸಿಂಗ್ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ವರ್ಷ ಡಿಸೆಂಬರ್ 23 ರಂದು ರೈತ ದಿನಾಚರಣೆ ಅಥವಾ ಕಿಸಾನ ದಿವಸ್ ಎಂದು ಆಚರಿಸಲ್ಫಡುತ್ತದೆ ಈ ದಿನದಂದು ದೇಶದ ಆಹಾರ ಭದ್ರತೆ ಮತ್ತು ದೇಶದ ಅಭಿವೃದ್ಧಿಗೆ ಬಿಡುವಿಲ್ಲದೇ ಶ್ರಮಿಸುವ ಅನ್ನಧಾತ ರೈತರನ್ನು ಶ್ಲಾಘಿಸಲು ಮತ್ತು ಅವರನ್ನು ಗೌರವಿಸುವ ಸಲುವಾಗಿ ಆಚರಿಸಲ್ಫಪಡುತ್ತದೆ ಎಂದು ತಿಳಿಸಿದರು.
ರ್ಷದ ಒಂದು ದಿನ ಮಾತ್ರ ರೈತರಿಗೆ ಮೀಸಲಲ್ಲಾ ರ್ಷದ 365ದಿನಗಳು ರೈತರಿಗೆ ಮೀಸಲಾಗಬೇಕು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತ ದಿನಾಚರಣೆಗೆ ಆಚರಿಸುವಂತಾಗಬೇಕು. ಮಣ್ಣು, ನೀರಿನ ಕುರಿತು ಅರಿವು ರೈತರಿಗೆ ಅತಿ ಮುಖ್ಯ ಕಡಿಮೆ ವೆಚ್ಚದಲ್ಲಿ ಯಶಸ್ವಿ ಕೃಷಿ ಕೈಗೊಳ್ಳಬೇಕು. ಮಣ್ಣಿನ ಆರೋಗ್ಯ ವೃದ್ಧಿಕೊಳ್ಳಬೇಕು, ಹವಮಾನ ವೈಪರಿತ್ಯದಿಂದಾಗಿ ಅತಿಯಾದ ಅಕಾಲಿಕ ಮಳೆ, ಅತಿಯಾದ ಉಷ್ಣಾಂಶ ಇವುಗಳಿಂದ ಬೆಳೆಗಳನ್ನು ರಕ್ಷಿಸಲು ಸಾವಯವ ಕೃಷಿ ಸಹಕಾರಿಯಾಗುವುದು ಎಂದು ತಿಳಿಸಿದರು. ಹಾಸನ ಕೃಷಿ ಮಹಾವಿದ್ಯಾಲಯದ ನಿವೃತ್ತ ಡಿನ್ ಡಾಽ ಮಂಜುನಾಥ ಮಾತಾನಾಡಿ, ಕುಡುಕುಟುಂಬ, ಸಮಗ್ರ ಕೃಷಿ ಅಳವಡಿಕೆ, ಕೂಲಿ ಕರ್ಮಿಕ ಮೇಲೆ ಅವಲಂಬಿತರಾಗದೆ ಸ್ವತಃ ತಾವೇ ಕೃಷಿಯಲ್ಲಿ ತೊಡಗಿಸಿಕೊಂಡು ಮತ್ತು ಮುಯ್ಯಾಳು ಮಾಡಿಕೊಂಡು ಕುಟುಂಬದ ಆಧಾಯ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಹಾವೇರಿ ಎಂ.ಸಿ.ಎಫ್ ಸಂಸ್ಥೆಯ ಡೆಪೂಟಿ. ಮ್ಯಾನೇಜರ್ ದೇವರಾಜ ಕೋರಿ ಮಾತನಾಡಿ, ಮಣ್ಣಿನ ಫಲವತ್ತನೆಗೆ ಆದ್ಯತೆ ನೀಡುವುದು. ಅತಿಯಾದ ಯೂರಿಯಾ ಬಳಕೆಯಿಂದ ಬೆಳೆಗಳ ಹೆಚ್ಚು ಇಳುವರಿ ಬರುವುದಿಲ್ಲ ಆದರೆ ಅಗತ್ಯಕ್ಕೆ ತಕ್ಕಷ್ಟು ಯೂರಿಯಾ ಮತ್ತು ಇತರೆ ಗೊಬ್ಬರಗಳ ಬಳಕೆಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯ ಬಹುದು ಆದ್ದರಿಂದ ರೈತರು ನ್ಯಾನೋ ಯೂರಿಯಾ, ನ್ಯಾನೋ ಡಿ.ಎ.ಪಿ ಬಳಸಬೇಕೆಂದು ರೈತರಿಗೆ ತಿಳಿಸಿದರು. ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷ ಎಂ.ಹೆಚ್.ಪಾಟೀಲ, ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ತೋಟಗಾರಿಕೆ ಇಲಾಖೆಯ ಜಗಧೀಶ ಹುಲಗೂರು, ಪಶುಸಂಗೋಪನಾ ಇಲಾಖೆಯ ಡಾಽ ನೀಲಕಂಠ ಅಂಗಡಿ, ಶಿವಾನಂದ ಹಾವೇರಿ, ಬಸವರಾಜ ಮರಣ್ಣನವರ, ವಿರೇಶ ಜೆಎಂ ಮತ್ತು ರೈತರು ಹಾಗೂ ರೈತ ಮಹಿಳೆಯರು ಇದ್ದರು.