ತಳಮಟ್ಟದ ಜೈನ ಸಮುದಾಯದ ಏಳಿಗೆಗೆ ಪ್ರಯತ್ನ : ಉತ್ತಮ ಪಾಟೀಲ
ಕಾಗವಾಡ 31 : ದಕ್ಷಿಣ ಭಾರತ ಜೈನ ಸಭೆಯಿಂದ ತಾಲೂಕಿನ ಜುಗೂಳ ಗ್ರಾಮದ ಪಿಯು ನೇಮಿನಾಥ ಸುಂಕೆ ಎಂಬ ವಿದ್ಯಾರ್ಥಿನಿಯನ್ನು ದತ್ತು ಪಡೆದುಕೊಂಡು, ಅವಳ ನಾಲ್ಕು ವರ್ಷದ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಬುಧವಾರ ದಿ. 30 ರಂದು ಜುಗೂಳ ಗ್ರಾಮದ 1008 ಆದಿನಾಥ ದಿಗಂಬರ ಜೈನ ಮಂದಿರದ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೋರಗಾಂವದ ಅರಿಹಂತ ಬ್ಯಾಂಕಿನ ಸಹಯೋಗದಲ್ಲಿ ವಿದ್ಯಾರ್ಥಿನಿಯನ್ನು ದತ್ತು ಪಡೆದುಕೊಂಡು, ಅವಳ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಹೊತ್ತುಕೊಂಡಿತು. ಈ ವೇಳೆ ದಕ್ಷಿಣ ಭಾರತ ಜೈನ ಸಭೆಯ ನಿರ್ದೇಶಕ ಉತ್ತಮ ಪಾಟೀಲ ಮಾತನಾಡಿ, ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ಜೈನ ಸಮುದಾಯದ ಬಡ ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಸಮುದಾಯದ ಏಳಿಗೆಗಾಗಿ ಶ್ರಮಿಸುವುದಾಗಿ ತಿಳಿಸಿದರು. ಈ ಸಮಯದಲ್ಲಿ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉತ್ತಮ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ದಕ್ಷಿಣ ಭಾರತ ಜೈನ ಸಭೆಯ ಸಿಇಓ ಯೋಗೇಶ ಖೋತ, ವೀರಸೇವಾ ದಳದ ಸುನೀಲ ಪಾಟೀಲ, ಅಜೀತ ಬಂಡೆ, ಎಂ.ಡಿ. ಬಿರನಾಳೆ, ಡಾ. ಮಹಾಧವಲ ಭೋಮಾಜ, ಮಹಾವೀರ ಕಾತ್ರಾಳೆ, ಬಾಸ್ಕರ ಪಾಟೀಲ, ಗುಂಡು ಐನಾಪೂರೆ, ಅನೀಲ ಸುಂಕೆ, ಸುಧಾಕರ ಗಣೇಶವಾಡಿ, ಅರುಣ ಗಣೇಶವಾಡಿ, ಮಹಾವೀರ ಕುಡಚೆ, ಸುಭಾಷ ಐತವಾಡೆ, ಭರತ ಲಾಂಡಗೆ ಸೇರಿದಂತೆ ಜೈನ ಸಮಾಜದ ಬಾಂಧವರು ಉಪಸ್ಥಿತರಿದ್ದರು.