ಲೋಕದರ್ಶನ ವರದಿ
ಸಿಂದಗಿ: ರಾಷ್ಟ್ರ ಧ್ವಜ ಎಂಬುದು ಕೇವಲ ಧ್ವಜವಲ್ಲ ಅದೊಂದು ನಮ್ಮ ದೇಶದ ಏಕತೆ ಸಮಗ್ರತೆಯ ಮತ್ತು ರಾಷ್ಟ್ರದ ಗುರುತಾಗಿದೆ ಎಂದು ನಾಗಠಾಣದ ಸಕರ್ಾರಿ ಪ್ರೌಢ ಶಾಲೆಯ ಶಿಕ್ಷಕ ಪರುಶುರಾಮ ಕುಂಬಾರ ಹೇಳಿದರು. ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯಲ್ಲಿ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ ಹಾಗೂ ಮಕ್ಕಳ ಸಾಹಿತ್ಯ ಸಂಗಮ ವಿಜಯಪುರ ಇವರ ಸಹಯೋಗದಲ್ಲಿ ಮಕ್ಕಳ ಮನೋವಿಕಾಸದ ಮಾಲಿಕೆಯಡಿ ರಾಷ್ಟ್ರಧ್ವಜದ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕವಾಗಿ ಉಪನ್ಯಾಸ ನೀಡಿದರು.
ರಾಷ್ಟ್ರಧ್ವಜದ ಬಗ್ಗೆ ಸುಧಿರ್ಘ ಅನುಭವವಿಲ್ಲದೆ ಅನೇಕರು ಧ್ವಜಾರೋಹಣ ಸಂಧರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಅನೇಕ ಸಂಗತಿಗಳನ್ನು ನೋಡುತ್ತೇವೆ ಅದರ ಬಳಕೆಯ ಬಗ್ಗೆ ಇಂದಿನ ಯುವಕರು ಜ್ಞಾನ ಪಡೆದುಕೊಳ್ಳಬೇಕು ಎಂದು ಹೇಳಿದರು. ಸ್ವಾತಂತ್ರ್ಯಕ್ಕಾಗಿ ಎಷ್ಟು ಹೋರಟಗಳು ನಮ್ಮ ದೇಶದಲ್ಲಿ ನಾವು ಕಂಡಿದ್ದೇವೆಯೋ ರಾಷ್ಟಧ್ವಜವನ್ನು ನಿಮರ್ಿಸಲು ನಮ್ಮಯ ಜನ ಅನೇಕ ಚಿಂತನೆಗಳನ್ನು ನಡೆಸಿದ್ದಾರೆ. ಇದೊಂದು ನಮ್ಮ ದೇಶದ ಭಕ್ತಿಯ ಸಂಕೇತ. ಅದರ ರಚನೆ ಅನೇಕ ನಿಯಮಗಳು ಹಾಗೂ ನಿದರ್ಿಷ್ಟ ನಿಲುವುಗಳನ್ನು ಹೊಂದಿದೆ ಎಂದರು.
ಪ್ಲಾಸ್ಟಿಕದಿಂದ ತಯಾರು ಮಾಡಿರುವ ರಾಷ್ಟ್ರಧ್ವಜವನ್ನು ನಾವು ಬಳಕೆ ಮಾಡುತ್ತಿದ್ದೇವೆ ಇದನ್ನು ಸಕರ್ಾರ ಸಂಪೂರ್ಣ ನಿಷೇಧಿಸಬೇಕು. ರಾಷ್ಟ್ರ ಧ್ವಜವನ್ನು ಧಾರವಾಡದ ಗರಗ ಮತ್ತು ಹುಬ್ಬಳ್ಳಿಯ ಬೆಂಗೇರಿ ಎಂಬ ಗ್ರಾಮಗಳಲ್ಲಿ ಮಾತ್ರ ತಯಾರಿಸುತ್ತಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು. ಧ್ವಜದಲ್ಲಿರುವ ಕೇಸರಿ, ಬಿಳಿ, ಹಸಿರು ಬಣ್ಣಗಳು ತನ್ನದೆ ಅದ ಅನೇಕ ಮಹತ್ತರ ಅಂಶಗಳನ್ನು ಒಳಗೊಂಡಿವೆ ಎಂದ ಅವರು ರಾಷ್ಟ್ರಧ್ವಜವನ್ನು ಹೇಗೆ ಬಳಸಬೇಕು, ಹೇಗೆ ಇಳಿಸಬೇಕು, ಅದನ್ನು ವ್ಯವಸ್ಥಿತವಾಗಿ ಹೇಗೆ ವಿನ್ಯಾಸಗೊಳಿಸಬೇಕೆಂಬ ಅನೇಕ ಮಾಹಿತಿಗಳನ್ನು ಪ್ರಾತ್ಯಕ್ಷಿಕವಗಿ ಪ್ರಶಿಕ್ಷಣಾಥರ್ಿಗಳಿಗೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆಡಳಿತಾಧಿಕಾರಿ ಡಾ. ಬಿ.ಜಿ.ಮಠ ಅವರು ಮಾತನಾಡಿ, ಶಿಕ್ಷಕರು ಸಮಾಜ ಮುಖಿಯಾಗಿ ಜೀವನ ನಡೆಸಿ ಸಮಾಜದ ಓರೆಕೋರೆಗಳನ್ನು ತಿದ್ದುವ ಪ್ರಯತ್ನ ನಿರಂತರವಾಗಿ ಮಾಡಬೇಕು. ನಿರಂತರ ಅಧ್ಯಯನ ನಮ್ಮ ಸಾಧನೆಗೆ ಕಾರಣವಾಗುತ್ತದೆ ಎಂದರು.
ಮಕ್ಕಳ ಸಾಹಿತ್ಯ ಸಂಗಮ ಅಧ್ಯಕ್ಷ ಹ.ಮ.ಪೂಜಾರ ಪ್ರಸ್ತಾವಿಕವಾಗಿ ಮಾತನಾಡಿ, ಇಂದು ಶಿಕ್ಷಕರಲ್ಲಿ ಓದುವಿಕೆಯ ಮನೋಭಾವ ಕಡಿಮೆಯಾಗುತ್ತಿದೆ. ತಾಲೂಕು, ಜಿಲ್ಲಾ, ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ನಡೆಯುವ ಶೈಕ್ಷಣಿಕ ಕಾಯರ್ಾಗಾರದಲ್ಲಿ ಭಾಗವಹಿಸಬೇಕು. ರಾಷ್ಟ್ರದ ಮತ್ತು ರಾಷ್ಟ್ರಧ್ವಜದ ಕಲ್ಪನೆ ಇಂದು ಎಲ್ಲರಿಗೂ ಅತ್ಯವಶ್ಯವಾಗಿದೆ ಎಂದರು.
ಮಕ್ಕಳಿಗೆ ಕೆವಲ ಗಿಳಿ ಪಾಠ ಮಾಡಿದರೆ ಸಾಲದು. ಅವರ ಮನಬೋವಿಕಾಸಕ್ಕೆ ಪೂರಕವಾಗಿ ಪಾಠ ಮಾಡಬೇಕು. ಪಠ್ಯಪೂರಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶರಣಬಸವ ಜೋಗೂರ ಅವರು ಮಾತನಾಡಿದರು. ಉಪನ್ಯಾಸಕರಾದ ಪಿ.ಎಂ.ಮಡಿವಾಳರ, ದಾನಯ್ಯ ಮಠಪತಿ, ಎನ್.ಬಿ.ಪೂಜಾರಿ, ಚನ್ನು ಕತ್ತಿ, ನೀಲಾ ಸಜ್ಜನ ಸೇರಿದಂತೆ ಪ್ರಶಿಕ್ಷಣಾಥರ್ಿಗಳು ಭಾಗವಹಿಸಿದ್ದರು. ಪ್ರಶಿಕ್ಷಣಾಥರ್ಿ ಪೂಜಾ ಹಿರೇಮಠ ಪ್ರಾಥರ್ಿಸಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು. ಉಪನ್ಯಾಸಕ ದಾನಯ್ಯ ಮಠಪತಿ ವಂದಿಸಿದರು