ಭರತೇಶ ಶಾಲೆಯ ಶೈಕ್ಷಣಿಕ ಪ್ರವಾಸ

Educational Tour of Bharatesh School

ಭರತೇಶ ಶಾಲೆಯ ಶೈಕ್ಷಣಿಕ ಪ್ರವಾಸ 

ಬೆಳಗಾವಿ 17: ಇಲ್ಲಿಯ ಎಸ್‌.ಪಿ.ಎಚ್‌.ಭರತೇಶ ಕನ್ನಡ ಮಾಧ್ಯಮ ಶಾಲೆಯ 115 ವಿದ್ಯಾರ್ಥಿಗಳು 9 ಶಿಕ್ಷಕರ ಜತೆಗೆ ಶೈಕ್ಷಣಿಕ ಪ್ರವಾಸ ಕೈಕೊಂಡಿದ್ದರು. ದಿ. 13ರಿಂದ ನಾಲ್ಕು ದಿನಗಳ ಕಾಲ ಶ್ರವಣಬೆಳಗೊಳ, ಬೇಲೂರು, ಹಳೆಬೀಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ, ಮೈಸೂರು, ಶ್ರೀರಂಗಪಟ್ಟಣ ಹಾಗೂ ನಂಜನಗೂಡು ಮುಂತಾದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಶೈಕ್ಷಣಿಕ ಅಧ್ಯಯನ ನಡೆಸಿದರು. ಮುಖ್ಯಾಧ್ಯಾಪಕ ಭರತೇಶ ಮಾರಣಬಸರಿ ಹಾಗೂ ಶಿಕ್ಷಕರಾದ ಪವನ ಪಾಟೀಲ, ಸತೀಶ ಗಾಣಿಗೇರ ನೇತೃತ್ವ ವಹಿಸಿದ್ದರು.