ಪ್ರಾಥಮಿಕ ಹಂತದಲ್ಲಿ ಪಡೆಯುವ ಶಿಕ್ಷಣ ಭವಿಷ್ಯದ ಭದ್ರ ಬುನಾದಿಯಾಗಲಿದೆ: ಚಂದ್ರಶೇಖರ.ಎಂ.

Education received at the primary level will be a solid foundation for the future: Chandrashekar.M.

ಪ್ರಾಥಮಿಕ ಹಂತದಲ್ಲಿ ಪಡೆಯುವ ಶಿಕ್ಷಣ ಭವಿಷ್ಯದ ಭದ್ರ ಬುನಾದಿಯಾಗಲಿದೆ: ಚಂದ್ರಶೇಖರ.ಎಂ. 

ಕೊಪ್ಪಳ 22: ತಾಲೂಕಿನ ಬಹದ್ದೂರಬಂಡಿ ಗ್ರಾಮದಲ್ಲಿ ಬೆಳಕು ಚಾರಿಟೇಬಲ್ ಟ್ರಸ್ಟ್‌  ಹಾಗೂ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅರಿವಿನ ಅಂಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತವಾದ ಹುದ್ದೆಯನ್ನು ಪಡೆಯಬೇಕಾದರೆ ಮೊದಲು ಪ್ರಾಥಮಿಕ ಹಂತದಲ್ಲಿ ನೀಡಲಾಗುವ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಪಡೆಯಬೇಕು ಎಂದು ಚಂದ್ರಶೇಖರ ಎಂ.ಹೇಳಿದರು. 

  ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ​‍್ಪ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿ,ಬೆಳಕು ಚಾರಿಟೇಬಲ್ ಬೆಂಗಳೂರು  ಹಾಗೂ ಶ್ರೀಅರುಣೋದಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಚಿಲವಾಡಗಿ ವತಿಯಿಂದ ಪ್ರತಿ ತಿಂಗಳು ಒಬ್ಬ ಮಹಾನ ವ್ಯಕ್ತಿಗಳನ್ನು ಕರೆಸಿ ಅವರಿಂದ ಮಕ್ಕಳಿಗೆ ಉತ್ತಮವಾದ ವಿಚಾರಗಳನ್ನು ತಿಳಿಸಿ ಕೊಡುವ ಕಾರ್ಯ ಮಾಡಲಾಗುತ್ತದೆ. ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನು ಕರೆ ತರುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು. 

ಕಾರ್ಯಕ್ರಮದ ಕುರಿತು ಬಹದ್ದೂರಬಂಡಿ ಕ್ಲಸ್ಟರ್ ಸಿ.ಆರ್‌.ಪಿ.ಹನುಮಂತಪ್ಪ ಕುರಿ ಹಾಗೂ ವಿಕಲಚೇತನ ನೌಕರರ ಸಂಘದ ವಿಭಾಗಿಯ ಕಾರ್ಯದರ್ಶಿ ಕರಿಯಪ್ಪ ಅಜ್ಜಿ ಮಾತನಾಡಿದರು. 

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ದಿ ಮತ್ತು ಮೆಲುಸ್ತವಾರಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕುರಿ ವಹಿಸಿದ್ದರು. 

 ಕಾರ್ಯಕ್ರಮದಲ್ಲಿ ಉರ್ದು ಶಾಲೆಯ ಶಾಲಾ ಅಭಿವೃದ್ದಿ ಮೇಲು ಉಸ್ತುವಾರಿ ಅಧ್ಯಕ್ಷರಾದ ಮೌಲಾಸಾಬ ಕಮ್ಮಾರ,ಸದಸ್ಯರಾದ ಬಸವರಾಜ ಕರಿಗಾರ,ನಬೀಸಾಬ ಬನ್ನಿಕೊಪ್ಪ,ಹುಸೇನಸಾಬ ಕಮ್ಮಾರ,ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಭಾರತಿ ಹವಳೆ,ಶಿಕ್ಷಕರಾದ ಜ್ಯೋತಿಲಕ್ಷ್ಮೀ,ಮೀರಾಜುನ್ನಿಸಾ,ಭಾರತಿ ಉಪಾಧ್ಯಯ,ಗಂಗಮ್ಮ ಕಪರಶೆಟ್ಟರ,ಹನುಮವ್ವ, ರಾಜಾ ಹುಸೇನ,ಜಲಜಾಕ್ಷಿ,ವೀಣಾ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಪೂರ್ಣಿಮಾ ತುಪ್ಪದ ಸ್ವಾಗತಿಸಿ,ಶಿಕ್ಷಕಿ ಗೀತಾ ಕುರಿ ವಂದಿಸಿದರು.