ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಶಿಕ್ಷಣದ ಪಾತ್ರ ಮಹತ್ವದ್ದು: ಬಳಿಗಾರ

ಗದಗ  27: ಅಲೆಮಾರಿ ಮತ್ತು ಅರೆ ಅಲೆಮಾರಿಗಳು, ಗೊಲ್ಲರು, ವೇಷಧಾರರು ಸಮುದಾಯದವರನ್ನು  ಗುರುತಿಸಿ  ಅವರಿಗಾಗಿ  ಅಭಿವೃದ್ಧಿ ಕಾರ್ಯಕ್ರಮಗಳನ್ನು  ಬೆಂಗಳೂರಿನ ಡಿ.ದೇವರಾಜ ಅರಸು ಸಂಸ್ಥೆ ಆಯೋಜಿಸುತ್ತಿರುವುದು  ಒಂದು ಉತ್ತಮ ಬೆಳವಣಿಗೆಯಾಗಿದೆ  ಎಂದು ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ.ಬಳಿಗಾರ  ಮಾತನಾಡಿದರು.

       ಗದಗ ನಗರದ ಕನಕ ಭವನದಲ್ಲಿ ನಡೆದ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಹಿಂದುಳಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಕಲೆಗಳ ಪ್ರದರ್ಶನ, ಜಾನಪದ ಕಲಾಮೇಳ ಹಾಗೂ ಈ ಜನಾಂಗಗಳ ಸ್ಥಿತಿಗತಿಗಳ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಹೊಂದಿದ ದೇಶದಲ್ಲಿ ಸಮಾಜದಲ್ಲಿ ಸಮಾನತೆಯನ್ನು ಮೂಡಿಸುವದು ಬಹಳಷ್ಟು ಅವಶ್ಯಕ ಸಂಗತಿಯಾಗಿದೆ. ಯಾವುದೇ ಜಾತಿ  ಜನಾಂಗದವರು ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ  ಅಭಿವೃದ್ಧಿ ಹೊಂದಲು ದೇಶದ  ಸಂವಿಧಾನ   ಸಮಾನ ಅವಕಾಶ ಕಲ್ಪಿಸಿದೆ.  ಅಲೆಮಾರಿ ಮತ್ತು ಅರೆ ಅಲೆಮಾರಿಗಳು ಜನಾಂಗದವರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಬಳಿಗಾರ  ಹೇಳಿದರು. 

      ಕನರ್ಾಟಕ ಜಾನಪದ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕರು ಡಾ. ನಾಗರಾಜ ಎಸ್    ಕ.ವಿ.ವಿ   ಪ್ರಸಾರಾಂಗದ ಉಪನಿದರ್ೇಶಕ ಚಂದ್ರಶೇಖರ್  ರೊಟ್ಟಿಗವಾಡ   ಇವರುಗಳು  ಅಲೆಮಾರಿ ಅರೆ ಅಲೆಮಾರಿ ಜನಾಂಗದವರಿಗೆ ಶಾಶ್ವತ ನೆಲೆ ಹಾಗೂ ಜೀವನೋಪಾಯದ ವೃತ್ತಿಗಳ ಅಗತ್ಯತೆ ಬಗ್ಗೆ ಉಪನ್ಯಾಸ ನೀಡಿದರು. 

ಸಮಾಜದಲ್ಲಿ ಸಾಧನೆ ಮಾಡಿದ ದಾದಾಬಾಯಿ ಯರಗೋಡಿ, ಪುಂಡಲಿಕ ಬಿಂಗೇರಿ, ವಿಶ್ವನಾಥ ಬೇಲೇರಿ, ಶರಣಪ್ಪ ಬೇಲೇರಿ, ಗೋವಿಂದರಾಜು, ಗುರುನಾಥ ಹಲಗೋರಿ, ರೇಣುಕಾಂಬ ಸುಭಾಶ ಹಡಪದ ಇವರುಗಳನ್ನು  ಸನ್ಮಾನಿಸಲಾಯಿತು. 

        ಹನಮಂತಪ್ಪ ಪೂಜಾರ, ಕೆ.ಎಂ.ಪಾಟೀಲ, ಹರೀಶ ಪೂಜಾರ, ಎಚ್.ಜಗನ್ನಾಥ, ರಂಗಸ್ವಾಮಿ, ದಾದಾಬಾಯಿ ಯರಗೋಡಿ, ದಿವಾನಂದ, ಎನ್.ವಿ.ಬೇಲೇರಿ, ರಾಮಣ್ಣ ಕವಡೆಕಾಯಿ, ರೇಣುಕಾಂಬ ಹಾಗೂ ಕಲಾಮೇಳ, ಕಲಾತಂಡ, ಸಮುದಾಯದ ಸಂಘಟನೆಗಳು,   ವಿವಿಧ ಜನಾಂಗಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ   ಭಾಗವಹಿಸಿದ್ದರು.  ಇದೇ ಸಂದರ್ಭದಲ್ಲಿ  ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ವಿವಿಧ ಕಲಾ ತಂಡಗಳು ತಮ್ಮ ಪ್ರದರ್ಶನವನ್ನು ನೀಡಿದವು.    ಮಲ್ಲಿಕಾಜರ್ುನ ಯಾದವ ಸ್ವಾಗತಿಸಿದರು.   ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.