ಸಮಾಜ ಆರ್ಥಿಕವಾಗಿ ಸಬಲೀಕರಣ ಹೊಂದಲು ಶಿಕ್ಷಣ ಬಹಳ ಮುಖ್ಯ-ಪಟೇಲ್

Education is very important for socio-economic empowerment - Patel

ಸಮಾಜ ಆರ್ಥಿಕವಾಗಿ ಸಬಲೀಕರಣ ಹೊಂದಲು ಶಿಕ್ಷಣ ಬಹಳ ಮುಖ್ಯ-ಪಟೇಲ್  

ಕೊಪ್ಪಳ 25: ಯಾವುದೇ ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಬಲೀಕರಣ ಗೊಳ್ಳಲು ಶಿಕ್ಷಣ ಬಹಳ ಮುಖ್ಯ ವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು. 

ಅವರು ಮಂಗಳವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಆಡಳಿತ ಏರಿ​‍್ಡಸಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ದೇಶ ಕಂಡ ಮಹಾನ್ ನಾಯಕರು, ಮಹಾನ್ ರಾಜರು ,ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕು.  

ಯಾವುದೇ ಸಮಾಜ ಸಮಗ್ರ ಅಭಿವೃದ್ಧಿ ಹೊಂದಲು ಮೊದಲು ನಾವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ ಎಂದರು. ಈ ಸಮಾಜದ ಋಣ ನನ್ನ ಮೇಲಿದೆ ನನ್ನ ವಾರ್ಡಿನಲ್ಲಿ ಇರುವ ಸಮಾಜ ಬಾಂಧವರು ನಿರಂತರವಾಗಿ ನನ್ನನ್ನು ಬೆಂಬಲಿಸುತ್ತ ಬಂದಿದ್ದಾರೆ ಅವರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ನಗರಸಭೆ ವತಿಯಿಂದ ಅಗತ್ಯ ಕ್ರಮ ಕೈಗೊಂಡು ಶ್ರಮಿಸುವುದಾಗಿ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.  

ಸಮಾರಂಭದಲ್ಲಿ ಕೊಪ್ಪಳ ತಹಸಿಲ್ದಾರ್ ವಿಠಲ ಚೌಗಲ ನಗರಸಭೆ ಉಪಾಧ್ಯಕ್ಷರಾದ ಅಶ್ವಿನಿ ಗದಗಿನಮಠ್, ಸಮಾಜದ ಮುಖಂಡ ಫಕೀರ​‍್ಪ ಆರ್ಯರ ಸರೋಜಾ ಬಾಕಳೆ, ಮಾರುತಿ  ಗವಿಸಿದ್ದಪ್ಪ ನಿಂಬಾಳ್ಕರ್ , ರಮೇಶ್ ಗೋರೆ​‍್ಡ ,ಪ್ರಾಣೇಶ್ ಕಂಪ್ಲಿ,  ಯಂಕಪ್ಪ ಮೇಸ್ತ್ರಿ ,ಮಹಾಂತೇಶ್, ಸುಭಾಷ್ ಕಂಪ್ಲಿ ,ಚಂದ್ರು ಬಡಿಗೇರ್, ಈಶಪ್ಪ ಅರಿಕೇರಿ, ಮಾರುತಿ ನಿಕ್ಕಿಮ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,