ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣ ಒಂದೇ ಪರಿಹಾರ ಇದನ್ನು ಗಮನದಲ್ಲಿಟ್ಟು ಕೆಲಸ ಮಾಡಲು ಸಚಿವರಿಗೆ ಸಭಾಪತಿಗಳು ಸಲಹೆ

ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣ ಒಂದೇ ಪರಿಹಾರ ಇದನ್ನು ಗಮನದಲ್ಲಿಟ್ಟು ಕೆಲಸ ಮಾಡಲು ಸಚಿವರಿಗೆ ಸಭಾಪತಿಗಳು ಸಲಹೆ  

 ಬೆಂಗಳೂರ 16 : ಮಕ್ಕಳಿಗೆ ಶಾಲಾ ಅವಧಿ ಅತ್ಯಂತ ಅಮೂಲ್ಯವಾದದ್ದು ಶಾಲೆಗೆ ಬೇರೆ ಬೇರೆ ಆರ್ಥಿಕ, ಸಾಮಾಜಿಕ ಹಿನ್ನೆಲೆಯಿಂದ ಶಾಲೆಗೆ ವಿದ್ಯಾರ್ಥಿಗಳು ಬರುತ್ತಾರೆ ಅವರ ಎಲ್ಲ ಸಮಸ್ಯೆಗಳಿಗೆ ಶಿಕ್ಷಣ ಒಂದೇ ಪರಿಹಾರ. ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸಾಮಾಜಿಕವಾಗಿ ಆರ್ಥಿಕವಾಗಿ ಸರ್ವ ಸಮಾನತೆ ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಸಚಿವರು ಹೆಚ್ಚು ಆದ್ಯತೆ ನೀಡಿ ಕೆಲಸ ಮಾಡುವಂತಾಗಲಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರ​‍್ಪನವರಿಗೆ ಸಲಹೆ ನೀಡಿದರು.  ಇಂದು ಸಚಿವ ಬಂಗಾರ​‍್ಪನವರ ಮನೆಗೆ ಬೆಳಿಗ್ಗೆ ಓಪಚಾರಿಕವಾಗಿ ಭೇಟಿ ನೀಡಿ ಉಪಹಾರ ಸೇವಿಸಿ ಪ್ರಸ್ತುತ ಶೈಕ್ಷಣಿಕ ಸಮಸ್ಯೆಗಳ ಕುರಿತು ತಮ್ಮ ನಾಲ್ಕು ದಶಕಗಳ ಸುದೀರ್ಘ ಅನುಭವವನ್ನು ಹಂಚಿಕೊಂಡರು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವಿದೆ ಪ್ರತಿಶತ ಎಪ್ಪತ್ತು ಪಸೆಂರ್ಟ್‌ ಮಕ್ಕಳು ಸರ್ಕಾರಿ ಶಾಲೆಯನ್ನೇ ಅವಲಂಬಿಸಿದ್ದಾರೆ. ಆ ಎಲ್ಲ ಮಕ್ಕಳ ಹಿತ ಕಾಯುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರೊಳಗಾಗಿ ಮತ್ತಾರು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಸಮಸ್ಯೆ ರಹಿತ ಶಿಕ್ಷಣ ಕ್ಷೇತ್ರವನ್ನ ಮಾಡುವುದು ಅಷ್ಟು ಸುಲಭವಲ್ಲ ನನಗೆ ಸಿಕ್ಕ 20 ತಿಂಗಳ ಅವಕಾಶದಲ್ಲಿ ಸಾಕಷ್ಟು ಕೆಲಸ ಮಾಡಿದ ತೃಪ್ತಿ ನನಗೆ ಇದೆ. ಇನ್ನೊಂದೆರಡು ವರ್ಷ ಸಿಕ್ಕಿದ್ದರೆ ಭವಿಷ್ಯ 80ಅ ಹೆಚ್ಚು ಸಮಸ್ಯೆಗಳನ್ನ ಬಗೆ ಹರಿಸುತ್ತಿದ್ದೆ ಎಂಬ ವಿಶ್ವಾಸವಿತ್ತು ಅನಿವಾರ್ಯ ಕಾರಣದಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಬದಲಾದ ಸನ್ನಿವೇಶ, ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ ಸಿಕ್ಕಾಗ ಸದುಪಯೋಗ ಮಾಡಿಕೊಂಡು ನಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಬೇಕು ಆ ಕೆಲಸ ಮಾಡಿದ ತೃಪ್ತಿ ನನಗೆ ಇದೆ .ತಾವು ಸಹ ಈಗಾಗಲೇ ಸಾಕಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದೀರಿ ಇನ್ನಷ್ಟು ಸಮಯವನ್ನು ಶೈಕ್ಷಣಿಕ ಕ್ಷೇತ್ರಕ್ಕಾಗಿ ಮೀಸಲಿಟ್ಟು ಕೆಲಸ ಮಾಡಿದರೆ ತಮ್ಮ ಹೆಜ್ಜೆ ಗುರುತುಗಳು ಈ ನಾಡಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಇದೊಂದು ತಮಗೆ ಸಿಕ್ಕ ದೊಡ್ಡ ಅವಕಾಶ ಇದರ ಸದುಪಯೋಗ ಮಾಡಿಕೊಂಡು ನಾಡಿನ ಮಕ್ಕಳ ಭವಿಷ್ಯಕ್ಕಾಗಿ ತಾವು ನಿತ್ಯಶ್ರಮಿಸಬೇಕೆಂದು ತಮ್ಮ ಮನದಾಳದ ಮಾತುಗಳನ್ನು ಸಚಿವರೊಂದಿಗೆ ಹಂಚಿಕೊಂಡರು. ನಾನು ಸದಾ ಕಾಲ ನಿಮ್ಮೊಂದಿಗೆ ಇರುತ್ತೇನೆ. ಪ್ರಸ್ತುತ ಶಿಕ್ಷಕರ ಹಾಗೂ ಮಕ್ಕಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಕೆಲ ಸಮಯವನ್ನ ಮೀಸಲಿಡಿ ಜೊತೆಗೆ ಪ್ರಸ್ತುತ ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ವ್ಯವಸ್ಥೆಯ ಕೆಲ ಮಾರ​‍್ಾಡುಗಳನ್ನು ತರುವ ಯೋಜನೆಗಳನ್ನು ಸಹ ಹಾಕಿಕೊಳ್ಳಿ ಎಂದು ಹೇಳಿದರು . ಸುದೀರ್ಘ ಅವಧಿಯ ಓಪಚಾರಿಕ ಚರ್ಚೆಯಲ್ಲಿ ಸಭಾಪತಿಗಳು ತಮ್ಮ 45 ವರ್ಷಗಳ ಅನುಭವವನ್ನು ಸಚಿವರ ಜೊತೆ ಹಂಚಿಕೊಂಡು ಪ್ರಸ್ತುತ ಕೆಲವು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದು ಬೇಗನೆ ಪರಿಹಾರ ದೊರಕಿಸುವಂತೆ ಹೇಳಿದರು. ಸಚಿವರು ಸಭಾಪತಿಗಳ ಎಲ್ಲ ವಿಚಾರಗಳನ್ನ ಆಲಿಸಿ, ತಮ್ಮದೇ ಆದ ಚಿಂತನೆಗಳನ್ನ ಯೋಜನೆಗಳನ್ನ ಸಭಾಪತಿಗಳ ಗಮನಕ್ಕೆ ತಂದರು. ತಮ್ಮ ಸಲಹೆ ಸೂಚನೆಗಳು ಮಾರ್ಗದರ್ಶನ ಸದಾ ನನಗೆ ಇರಬೇಕೆಂದು ಸಚಿವರು ಅತ್ಯಂತ ಕಳಕಳಿಯಿಂದ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು. ಇದೊಂದು ಓಪಚಾರಿಕ ಸಭೆ ಆದರೂ ಸಾಕಷ್ಟು ಮಹತ್ವದ ಸಂಗತಿಗಳು ಸಚಿವ ಸಭಾಪತಿ ಅವರ ಮಧ್ಯೆ ಚರ್ಚೆ ಯಾಗಿದ್ದು ಹಲವಾರು ಶೈಕ್ಷಣಿಕ ಸಮಸ್ಯೆಗಳಿಗೆ ದಾರಿ ದೀಪವಾಗಿದ್ದಂತೂ ಸತ್ಯ ಇದೊಂದು ಉತ್ತಮ ಬೆಳವಣಿಗೆ.