ಸಮಾಜದ ಜಾಗೃತಿಗೆ ಶಿಕ್ಷಣ ಅಗತ್ಯ: ಒಡೆಯರ್

ಧಾರವಾಡ 16: ದೇಶಸೇವೆ ಮಾಡಲು ಶಕ್ತಿ ನೀಡಿದ ಶರಣರು, ಸಂತರು, ಜ್ಞಾನಿಗಳು ಜನ್ಮ ತಾಳಿದ ದೇಶವೆಂದರೆ ಅದು ಭಾರತ ಮಾತ್ರ. ಅವರ ಜಯಂತಿಗಳ ಮೂಲಕ ಗೌರವ ಸಲ್ಲಿಸಲಾಗುತ್ತಿದೆ ಎಂದು ದೇವರ ಹಿಪ್ಪರಗಿಯ ದೈಹಿಕ ಶಿಕ್ಷಣ ಶಿಕ್ಷಕ ಕೆ.ವ್ಹಿ. ಒಡೆಯರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಿನ್ನೆ (ಜ.15) ಬೆಳಿಗ್ಗೆ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಅವರು ಮಾತನಾಡಿದರು,

ದೇಶವನ್ನು ಆಳಲು ಶಕ್ತಿ ಕೊಟ್ಟಿರುವವರು ಶಿವಯೋಗಿಗಳು, ಶಿವಯೋಗಿಗಳ ಜಯಂತಿ ಆಚರಿಸುವ ಉದ್ದೇಶ ಸಮಾಜವನ್ನು ಒಗ್ಗೂಡಿಸಿ ಮೂಢನಂಬಿಕೆಯನ್ನು ಹೋಗಲಾಡಿಸುವುದಾಗಿದೆ. ಎಲ್ಲರೂ ಜಯಂತಿಯಲ್ಲಿ ಭಾಗವಹಿಸಿದಾಗ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದರು. 

ಶಿವಯೋಗಿ ಸಿದ್ಧರಾಮೇಶ್ವರರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.  ಶರಣರಲ್ಲಿ ಸಿದ್ದರಾಮೇಶ್ವರ ಅವರಿಗೂ ಪೂಜೆ ಸಲ್ಲುತ್ತಿದೆ. ತುಮಕೂರು ಮತ್ತು ಚಿಕ್ಕಮಗಳೂರಿನಲ್ಲಿ ಸಿದ್ದರಾಮ ಹೆಸರಿನ ಊರು, ನಗರಗಳಿವೆ.  ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅಂದಾಗ ಮಾತ್ರ ನಾವು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದರು.   

ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಧಿಕಾರಿ ಮಹಮ್ಮದ್ ಜುಬೇರ ಮಾತನಾಡಿ, ಸಾಮಾನ್ಯ ವರ್ಗದಿಂದ ಮೇಲೆ ಬಂದು ಸಮಾಜದಲ್ಲಿ ಗುರಿತಿಸಿಕೊಳ್ಳುವುದು ಕಡಿಮೆ, ಎಲ್ಲ ಸಮಾಜನ ಮಕ್ಕಳು ಶಿಕ್ಷಣ ಪಡೆಯುವ ಮೂಲಕ ಸಕರ್ಾರದ ವಿವಿಧ ಇಲಾಖೆಯ ಹುದ್ದೆಯನ್ನು ಅಲಂಕರಿಸಬೇಕು. ಪಾಲಕರು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಿ,  ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಹೇಳಿದರು.  

ಸಮಾರಂಭ ಉದ್ದೇಶಿಸಿ ಶಿಕ್ಷಕಿ ಅನುರಾಧ ಮಾತನಾಡಿದರು. ವೇದಿಕೆಯಲ್ಲಿ ಧಾರವಾಡ ತಹಶೀಲ್ದಾರ ಸಂತೋಷಕುಮಾರ ಬಿರಾದರ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರೀವಿಕ್ಷಕ ಬಿ.ಬಿ. ದುಬ್ಬನಮರಡಿ, ಕನರ್ಾಟಕ ಭೋವಿ ಅಭಿವೃದ್ಧಿ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ದೇವಸೂರ, ಸಮಾಜದ ಮುಖಂಡರಾದ ತುಳಜಪ್ಪಾ ಪೂಜಾರ, ಭೀಮನ ನಿಮಕಲ್ಲ, ಬಸವರಾಜ ಅಮ್ಮಿನಬಾವಿ, ಅಜರ್ುನ ಒಡ್ಡರ ಸೇರಿದಂತೆ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕಿ ನಿದರ್ೇಶಕಿ ಮಂಜುಳಾ ಯಲಿಗಾರ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ಅರ್ಜು ನ ಒಡ್ಡರ, ಕಾಂತು ಒಡೆಯರ್, ಜಯಪ್ರಕಾಶ್ ಬಾದಾಮಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಂತರ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.