ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ವಿದ್ಯೆ ಅವಶ್ಯ: ಉಮಾ
ಶಿಗ್ಗಾವಿ 14: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ವಿದ್ಯೆ ಅವಶ್ಯ ಅಲ್ಲದೇ ತಂದೆ ತಾಯಿಯ ಕನಸು ಪ್ರೀತಿ ಗೌರವ ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಶಾಲಾ ಜೀವನ ಉಪಯುಕ್ತ ಎಂದು ಯೋಜನಾಧಿಕಾರಿ ಉಮಾ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಶಿಗ್ಗಾವಿ ದುಂಡಸಿ ವಲಯದ ಮೌಲಾನ ಅಜಾದ್ ಮಾದರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು ಹೆಚ್ಚಿನ ಜ್ಞಾನಕ್ಕೆ ಈ ಟ್ಯೂಷನ್ ಕ್ಲಾಸ್ ಅಗತ್ಯ ಹಾಗೂ ಮುಂದಿನ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅಂಕ ಪಡೆಯಲು ಸಾಕಾರಿಯಾಗುತ್ತದೆ ಎಂದರು. ಅದ್ಯಕ್ಷತೆವಹಿಸಿದ್ದ ಮುಖ್ಯೋಪಾಧ್ಯಾಯ ನಾಗಪ್ಪ ಬಡ್ಡಿ ಮಾತನಾಡಿ ವಿದ್ಯಾರ್ಥಿಗಳು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಮಾದರಿ ವಿದ್ಯಾರ್ಥಿ ಆಗಬೇಕು ಹಾಗೂ ಟ್ಯೂಷನ್ ಕ್ಲಾಸ್ ಹಮ್ಮಿಕೊಂಡಿದ್ದು ನಮ್ಮ ಭಾಗ್ಯ, ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಯಿತು ಎಂದರು. ಶಾಲೆಯ ಶಿಕ್ಷಕರಾದ ದೇವರಾಜ್ ಲಮಾಣಿ, ಮಂಜುಳಾ ರಾಠೋಡ, ಜಯರಾಮ್ ದೇವಾಡಿಗ, ಸೇವಾಪ್ರತಿನಿಧಿ ಲಕ್ಷ್ಮಿ ಸೊಗಲಿ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿನಿ ಕವನಾ ನಿರೂಪಿಸಿದರು, ವಿದ್ಯಾರ್ಥಿನೀ ಪಲ್ಲವಿ ವಂದಿಸಿದರು,