ಗದಗ 23: ಶಿಕ್ಷಣ ಜೀವನ ನೀಡಿದರೆ ಆರೋಗ್ಯ ಮರುಜನ್ಮ ನೀಡುತ್ತದೆ ಆದುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣ ಹಾಗೂ ಆರೋಗ್ಯ ಬಹುಮುಖ್ಯವಾಗಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ನುಡಿದರು.
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಂದು ನೂತನ ಶುಶ್ರೂಷಾ ಕಾಲೇಜು ಉದ್ಘಾಟಿಸಿ ಸಂಸ್ಥೆಯ ಪಂಚ ವಸಂತ ಮಹೋತ್ಸ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವೈದ್ಯಕೀಯ ವಿಧ್ಯಾಥರ್ಿಗಳು ಮೌಲ್ಯಾಧರಿತ ಶಿಕ್ಷಣದ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು. ಸರಕಾರವು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ವೈದ್ಯರು ತಾವು ಉಪಚರಿಸುವ ರೋಗಿಗಳ ಕುರಿತು ದೇವರ ಸೇವೆ ಮಾಡುವ ಮನೋಭಾವ ಹೊಂದಬೇಕು. ಗದಗ ಜಿಲ್ಲೆಯಲ್ಲಿ ನಿಮರ್ಾಣವಾದಂತಹ ವೈದ್ಯಕೀಯ ವಿಜ್ಞಾನ ಸಂಸ್ಥೆಯು ರಾಷ್ಟ್ರದ ಉತ್ತಮ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಎಲ್ಲ ಮೂಲಭೂತ ಸೌಕರ್ಯಗಳ ಜೊತೆಗೆ ಉತ್ತಮ ವಿದ್ಯಾಭ್ಯಾಸಕ್ಕಾಗಿ ಪೂರಕ ವಾತಾವರಣವಿದ್ದು ಇಲ್ಲಿನ ಪ್ರತಿಯೊಬ್ಬ ವಿದ್ಯಾಥರ್ಿಯು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ತುಕಾರಾಂ ತಿಳಿಸಿದರು.
ಶಾಸಕರಾದ ಎಚ್.ಕೆ.ಪಾಟೀಲ ಮಾತನಾಡಿ ವೈದ್ಯಕೀಯ ವಿಧ್ಯಾಥರ್ಿಗಳು ರೋಗಿಗಳೊಂದಿಗೆ ಆತ್ಮೀಯವಾಗಿ ಸೇವೆ ನೀಡಲು ಮುಂದಾಗಬೇಕು ಎಂದರು. ಸಂಸ್ಥೆಯಲ್ಲಿ ಕ್ಯಾಥ್ ಲ್ಯಾಬ ಪ್ರಾರಂಭಿಸಲು ಅಗತ್ಯದ ಅನುದಾನವನ್ನು ಬಿಡುಗಡೆ ಮಾಡಲು ವೈದ್ಯಕೀಯ ಶಿಕ್ಷಣ ಸಚಿವರಲ್ಲಿ ಅವರು ವಿನಂತಿಸಿದರು. ಜಿಲ್ಲೆಯಲ್ಲಿ ಸೂಪರ ಸ್ಪೆಶಾಲಿಟಿ ಆಸ್ಪತ್ರೆ, ಕ್ಯಾನ್ಸರ ಸೆಂಟರ ಆರಂಭಿಸುವ ಹಾಗೂ ಸಂಸ್ಥೆಯಲ್ಲಿ ಇನ್ನೂ ಎರಡು ವಿಧ್ಯಾಥರ್ಿ ನಿಲಯಗಳ ಅಗತ್ಯವಿದೆ ಎಂದರು. ಸಿಟಿ ಸ್ಕ್ಯಾನ ಹಾಗೂ ಎಂ.ಆರ್.ಆಯ್ ಕೇಂದ್ರಗಳು ಶೀಘ್ರವೇ ಪ್ರಾರಂಭಗೊಳ್ಳಲಿವೆ ಎಂದು ಎಚ್.ಕೆ.ಪಾಟೀಲ ನುಡಿದರು.
ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ. ಬಳಿಗಾರ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಅಸುಂಡಿ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಗದಗಿನ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಜಿ.ಪಂ. ಸದಸ್ಯರುಗಳಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಜಿಮ್ಸ ಮುಖ್ಯ ಆಡಳಿತಾಧಿಕಾರಿ ಪಿ.ಎಸ್.ಮಂಜುನಾತ, ಆಥರ್ಿಕ ಸಲಹೆಗಾರ ಜಿ.ಸಿ.ಪ್ರಶಾಂತ ಸೇರಿದಂತೆ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ, ವಿಧ್ಯಾಥರ್ಿಗಳು ಉಪಸ್ಥಿತರಿದ್ದರು. ಜಿಮ್ಸ ನಿದರ್ೇಶಕರಾದ ಪಿ.ಎಸ್.ಭೂಸರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.