ಶಿಕ್ಷಣ-ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳು: ಕೋರೆಡ್ಡಿ
ರನ್ನ ಬೆಳಗಲಿ 14: ಪಟ್ಟಣದ ಜನತಾ ಕಾಲೋನಿಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ರನ್ನ ಬೆಳಗಲಿಯಲ್ಲಿ. ಗುರುವಾರ ದಂದು ಜಿಲ್ಲಾ ಪಂಚಾಯತ,ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟೆ. ಸಮಾಜ ಕಲ್ಯಾಣ ಇಲಾಖೆ ಮುಧೋಳ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ 2025ರ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆ ವಹಿಸಿದ ಎಮ್ ಕೆ ಕೋರಡ್ಡಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಮುಧೋಳ. ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಣ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳು ಶಿಕ್ಷಣ ನಮ್ಮನ್ನು ಬೀಳದಂತೆ ಎಚ್ಚರಿಸಿದರೆ, ಸಂಸ್ಕಾರ ನಮ್ಮಿಂದ ಯಾವ ತಪ್ಪುಗಳು ಆಗದಂತೆ ಎಚ್ಚರಿಕೆ ನೀಡಿ, ಆದರ್ಶ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಪರೀಕ್ಷೆಗಳನ್ನು ಹಬ್ಬದಂತೆ ಆಚರಿಸಿ. ಉತ್ತಮ ಫಲಿತಾಂಶದ ಜೊತೆಗೆ ಇಲಾಖೆಯ ಗೌರವವನ್ನು ಇಮ್ಮಡಿಗೊಳಿಸಿ ತಂದೆ-ತಾಯಿ, ಗುರುಗಳ ಕೀರ್ತಿಯನ್ನು ಹೆಚ್ಚಿಸಿ ಎಂದು ಹೇಳುವುದರ ಮೂಲಕ ವಿದ್ಯಾರ್ಥಿನಿಯರ ಬಳಗಕ್ಕೆ ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ವಿದ್ಯಾರ್ಥಿ ಜೀವನವು ಶಿಸ್ತು ಬದ್ಧ ಜೀವನವಾಗಬೇಕು. ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆದುಕೊಂಡು ಓದುತ್ತಿರುವ ನಾವುಗಳು ಸರ್ಕಾರಕ್ಕೆ ಋಣಿಯಾಗಿ. ಋಣವನ್ನು ತೀರಿಸುವಂತಹ ಸಾಧನೆಯನ್ನು ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಮುಂದಿನ ಜೀವನ ಉತ್ತಮವಾಗಿರುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ಎಲ್ಲಾ ಇಂದ್ರಿಯ ಸುಖವನ್ನು ತ್ಯಾಗ ಮಾಡಿ. ಕೇವಲ ಓದನ್ನೇ ತಮ್ಮ ಗುರಿಯನ್ನಾಗಿಸಿಕೊಳ್ಳಬೇಕು ಎಂದು ತಿಳಿಸಿದರು. ನಿಲಯ ಪಾಲಕಿಯಾದ ಶೋಭಾ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಸತಿ ನಿಲಯದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪಾಲಕರ ಪ್ರತಿನಿಧಿಯಾಗಿ ಕಮಲಾ ಪೂಜಾರಿ, ಬಾಬು ಭಜಂತ್ರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ವಸತಿ ನಿಲಯದ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಯಲ್ಲಿ ಸರ್ಕಾರದ ಯೋಜನೆಗಳ ಕುರಿತು,ವಸತಿ ನಿಲಯ ಸಿಬ್ಬಂದಿಗಳಿಂದ ಪಡೆದ ಸೇವೆಗಳನ್ನು ಮನತುಂಬಿ ಮಾತನಾಡುತ್ತಾ, ಅಧಿಕಾರಿ ವರ್ಗದ ಕಾರ್ಯಗಳ ಕುರಿತು ಮೆಚ್ಚುಗೆಯ ಮಾತುಗಳನ್ನು ಅನಿಸಿಕೆಗಳಲ್ಲಿ ವ್ಯಕ್ತಪಡಿಸಿದರು. ರಕ್ಷಿತಾ ಪೂಜೇರಿ ಸ್ವಾಗತಿಸಿದಳು. ನಿರೂಪಣೆಯನ್ನು ಪ್ರೀತಿ ನಾವಿ ನಿರ್ವಹಿಸಿದರೆ, ಪ್ರಿಯಾ ಮುಧೋಳ ವಂದಿಸಿದಳು. ವಸತಿ ನಿಲಯದ ಸಿಬ್ಬಂದಿಗಳಾದ ಮಹಾದೇವಿ ದೊಡಮನಿ, ಶೋಭಾ ಮಳಲಿ, ಅಶ್ವಿನಿ ಹೂಗಾರ, ರೂಪಾ ಕ್ಯಾತಪಗೋಳ, ಸಂಗೀತಾ ಬಾವಿಮನಿ, ಲತಾ ಕುರಾಡೆ(ಕರಾಬಿ) ಮತ್ತು ಪಾಲಕ ಪೋಷಕರು, ವಿದ್ಯಾರ್ಥಿನಿಯರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.