ಲೋಕದರ್ಶನ ವರದಿ
ಬೆಳಗಾವಿ 14: "ಅಧ್ಯಯನ ಎನ್ನುವದು ಒಂದು ರೀತಿ ಯತಪಸ್ಸು ಅದನ್ನು ಮೈಗೂಡಿಸಿಕೊಂಡು ವಿದ್ಯಾಥರ್ಿಗಳು ನಿರಂತರ ಶ್ರಮಪಟ್ಟಲ್ಲಿ ಯಶಸ್ಸು ಸಾಧ್ಯ ಎಂದು ಮೂಡಲಗಿಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿರವರು ಹೇಳಿದರು.
ಸ್ಥಳೀಯ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರದಲ್ಲಿ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಸಮಾಜಕಾರ್ಯ ವಿಭಾಗ ಹಾಗೂ ಎನ್.ಎಸ್.ಎಸ್.ಘಟಕದ ವತಿಯಿಂದ ದಿ.13ರಂದು ಹಮ್ಮಿಕೊಂಡಿದ್ದರಂದು ವಿಷಯ ಆಧಾರಿತ ಜಾಗೃತಿ ಮತ್ತು ಶಿಕ್ಷಣ ಹಾಗೂ ಸಂವಿಧಾನ ದಿನಾಚರಣೆ ರಾಷ್ಟ್ರೀಯ ಯುವ ದಿನ ಮತ್ತು ಯುವ ಸಪ್ತಾಹ ಸದೃಢ ಭಾರತ ಸೈಕಲ್ ಜಾಥಾ ಕಾರ್ಯಕ್ರಮ'ದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿ ಪ್ರಧಾನಮಂತ್ರಿಯವರ ಜಲಸಂರಕ್ಷಣೆ ಅಭಿಯಾನದಡಿಯಲ್ಲಿ ನಾವೆಲ್ಲರೂ ಇಂದಿನ ಹಾಗೂ ಮುಂದಿನ ಪೀಳಿಗೆಗಾಗಿ ನೀರನ್ನು ಸಂರಕ್ಷಿಸಬೇಕೆಂದು ಯುವ ಜನತೆಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ನೆಹರು ಯುವ ಕೇಂದ್ರ ಬೆಳಗಾವಿಯ ಲೆಕ್ಕಾಧಿಕಾರಿ ಆರ್.ಆರ್. ಮುತಾಲಿಕ ಅವರು ಮಾತನಾಡುತ್ತಾ ಗ್ರಾಮೀಣ ಯುವಜನತೆಗೆ ಲಭ್ಯವಿರುವ ವಿನೂತನರೀತಿಯ ಉದ್ಯೋಗಾವಕಾಶಗಳು ಹಾಗೂ ಅವುಗಳನ್ನು ಸುಲಭವಾಗಿ ಪಡೆಯುವ ಮಾರ್ಗಗಳನ್ನು ತಿಳಿಸಿದರು.ಸ್ಥಳೀಯ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡರವರು ಘನತ್ಯಾಜ್ಯ ನಿರ್ವಹಣೆ ಕುರಿತು, ಪ್ರೊ.ಎಮ್.ಬಿ.ಮುಂಡರಗಿರವರು ಕೋಮುವಾದ, ಜಾತ್ಯಾತೀಯತೆ, ಸದೃಢ ಭಾರತ ಹಾಗೂ ಡಾ.ಸತೀಶಗೌಡ ಎಂ. ರವರು ಭ್ರಷ್ಟಾಚಾರ ಹಾಗೂ ಬಡತನ ಕುರಿತು ಉಪನ್ಯಾಸ ನೀಡಿದರು.
ಪ್ರಭಾರಿ ಪ್ರಾಂಶುಪಾಲ ಶಾನೂರ ಕುಮಾರ ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇಂದಿನ ಯುವಜನತೆ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಈ ದಿಶೆಯಲ್ಲಿ ನೆಹರು ಯುವ ಕೇಂದ್ರದ ಕಾರ್ಯ ಸ್ತುತ್ಯಾರ್ಹ ಎಂದು ಹೇಳಿದರು.
ಆಯ್.ಕ್ಯೂ.ಎ.ಸಿ. ಸಂಯೋಜಕ ಚೇತನರಾಜ್ ಬಿ,ಎನ್.ಎಸ್.ಎಸ್. ಸಂಯೋಜಕ ಸಂಜೀವಕುಮಾರ ಗಾಣಿಗೇರ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ರಾಧಾ ಎಂ.ಎನ್, ಡಾ. ರವಿ ಗಡದನ್ನವರ, ಎಸ್.ಪಿ.ದೇಶಪಾಂಡೆ, ಕೆಂಪಣ್ಣ ದೊನವಾಡ, ಹಾಲಪ್ಪ ಮಡಿವಾಳರ, ಶಿವಾಜಿ ಮುಳಿಕ, ಯಲ್ಲಪ್ಪ ಗೊದ್ದನ್ನವರ, ಬಸವರಾಜ ಪಡದಲ್ಲಿ ಸಿದ್ದಣ್ಣ ದುರದುಂಡಿ, ದುಂಡಯ್ಯಾ ಮೆಳೈನ್ನವರ, ಮುಂತಾದವರು ಕಾರ್ಯಕ್ರಮದಲಿ ್ಲಭಾಗವಹಿಸಿದ್ದರು. ವಿದ್ಯಾಥರ್ಿ ಆನಂದ ಮತು ಸ್ಟೆಲ್ಲಾ ಸ್ವಾಗತಿಸಿದರು. ವಿದ್ಯಾಥರ್ಿ ಡೇನಿಯಲ್ ಮೇತ್ರಿ ನಿರೂಪಿಸಿದರು, ಪ್ರೊ.ರಾಜೇಂದ್ರ ಆಸಂಗಿ ವಂದಿಸಿದರು.