ವಿದ್ಯಾರ್ಥಿಗಳಲ್ಲಿ ಆರ್ಥಿಕ ಸಾಕ್ಷ್ಷರತೆ ಅತಿ ಅವಶ್ಯ: ಸುನೀಲಕುಮಾರ

ಧಾರವಾಡ೨೭: ಇಂದಿನ ದಿನಮಾನಗಳಲ್ಲಿ ವಿದ್ಯಾಥರ್ಿಗಳು ಆಥರ್ಿಕ ಸಾಕ್ಷರತೆ ಹೊಂದಿದ್ದರೆ ಮಾತ್ರ ಹಣಕಾಸಿನ ವಿಚಾರದಲ್ಲಿ ಮೆಲುಗೈ ಸಾಧಿಬಹುದು. ಆಥರ್ಿಕ ದಿನಚರಿಯನ್ನು ರೂಢಿಯಲ್ಲಿ ಇರಿಸಿಕೊಂಡರೆ ಯಾವುದೇ ಹಣಕಾಸಿನ ತೊಂದರೆ ಇಲ್ಲದೆ ಜೀವನ ಸಾಗಿಸಬಹುದಾಗಿದೆ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಐ.ಟಿ.ಐ ನಲ್ಲಿ ಆಯೊಜಿಸಿದ್ದ ಆಥರ್ಿಕ ಸಾಕ್ಷರತೆ ವಿಷಯದ ಮೇಲೆ ಅತಿಥಿ ಉಪನ್ಯಾಸ ನೀಡುತ್ತ ನಿಟ್ ಫೌಂಡೇಶನ್ನ ಯೋಜನಾ ಸಂಯೋಜಕರಾದ ಶ್ರೀಯುತ ಸುನೀಲಕುಮಾರವರು ಮಾತನಾಡುತ್ತಿದ್ದರು. ನಮ್ಮ ಆದಾಯ, ಖಚರ್ು, ವೆಚ್ಚಗಳ ಬಗ್ಗೆ ಸರಿಯಾದ ದಾಖಲೆಗಳನ್ನು ನಿರ್ವಹಣೆ ಮಾಡಬೇಕು. ನಾಗರಿಕರಿಗೆ ಬ್ಯಾಂಕುಗಳಲ್ಲಿ ಸಿಗುವ ಸವಲ್ಲತ್ತುಗಳು, ನಗದು ರಹಿತ ಮತ್ತು ಸಹಿತ ವ್ಯವಹಾರಗಳು, ಅಂಚೆ ಇಲಾಖೆಯ ನೂತನ ಯೋಜನೆಗಳು, ವಿವಿಧ ರೀತಿಯ ವಿಮಾ ಯೋಜನೆಗಳ ಮಾಹಿತಿಯನ್ನು ವೋಡಾಪೋನ್ನ ಸಿ.ಎಸ್.ಆರ್ ಪ್ರಾಜೆಕ್ಟ "ಜಾದು ಗಿನ್ನಿ ಕಾ" ಎಂಬ ಕಾರ್ಯಕ್ರಮದಡಿ ವಿದ್ಯಾಥರ್ಿಗಳಿಗೆ ಆಥರ್ಿಕ ಸಾಕ್ಷರತೆ ನೀಡಿದರು.

ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ 50 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿ, ಐ.ಟಿ.ಐ ನಂತರ ಸ್ವ-ಉದ್ಯೋಗಕ್ಕೆ ಬ್ಯಾಂಕುಗಳಲ್ಲಿ ದೊರೆಯುವ ಸಾಲ ಸೌಲಭ್ಯ ಮತ್ತು ಮರು ಪಾವತಿಗೆ ಸಿಗುವ ರಿಯಾಯತಿ ಹಾಗೂ ವಿವಿಧ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರಾದ ಮಹೇಶ ಬಡಿಗೇರ, ಸಿದ್ಧಲಿಂಗಯ್ಯಾ ಹಿರೇಮಠ, ವಿನಾಯಕ ಗವಳಿ, ಶೋಭಾ ಕಮ್ಮಾರ, ವಿಶಾಲಕುಮಾರ ಭಜಂತ್ರಿ ಇದ್ದರು. ಅಶೋಕ ಜಿಗಳೂರ ನಿರೂಪಿಸಿ ವಂದಿಸಿದರು.