ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಧಾರವಾಡ 20: ನವಲಗುಂದ ತಾಲೂಕಿನ ದುಂದೂರ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯು 2018-19ನೇ ಸಾಲಿನ ಪರಿಸರ ಮಿತ್ರ ಶಾಲೆಯಾಗಿ ಆಯ್ಕೆಗೊಂಡು ಪಾರಿತೋಷಕ, ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಪಡೆದುಕೊಂಡಿತು.

ಅದರಂತೆ, ಕುಂದಗೋಳ ತಾಲೂಕಿನ ಬು.ಕೊಪ್ಪ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ, ಹುಬ್ಬಳ್ಳಿ ಅಕ್ಷಯ ನಗರದ ಚೇತನ್ ಪಬ್ಲಿಕ್ ಸ್ಕೂಲ್, ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ಸಕರ್ಾರಿ ಆದರ್ಶ ವಿದ್ಯಾಲಯ, ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ನವಲಗುಂದ ತಾಲೂಖಿನ ಬೆನ್ನೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ, ಧಾರವಾಡ ಗ್ರಾಮೀಣ ಜಿರಿಗಿವಾಡದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ,  ಮನಸೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೋಗೂರ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ, ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ಬೂದನಗುಡ್ಡ ಬಸವೇಶ್ವರ ಪ್ರೌಢಶಾಲೆ, ಹಾಗೂ ಮಸಳೀಕಟ್ಟಿ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಗಳು 2018-19ನೇ ಸಾಲಿನ ಹಸಿರು ಶಾಲೆಗಳಾಗಿ ಆಯ್ಕೆಗೊಂಡು ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಪಡೆದುಕೊಂಡವು. 

ನವಲಗುಂದ ತಾಲೂಕಿನ ಅಣ್ಣಿಗೇರಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ, ಭೋಗಾನೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಿಶುವಿನಹಳ್ಳಿ ಗ್ರಾಮದ ಸಕರ್ಾರಿ ಪ್ರೌಢಶಾಲೆ, ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ, ಧಾರವಾಡ ಗ್ರಾಮೀಣ ದೇವಗಿರಿಯ ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಧಾರವಾಡ ಗ್ರಾಮಾಂತರ ಗೋವನಕೊಪ್ಪ ಎಮ್.ವಾಯ್. ನಲವಡಿ ಪ್ರೌಢಶಾಲೆ, ಧಾರವಾಡ ಶಹರದ ಟಿ.ಸಿ.ಡಬ್ಲ್ಯೂ ಸಕರ್ಾರಿ ಮಾದರಿ ಪ್ರಾಯೋಗಿಕ ಶಿ.ಸ.ತ. ಸಂಸ್ಥೆ, ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ, ನವಲಗುಂದ ತಾಲೂಕಿನ ಬಲ್ಲರವಾಡ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ, ಹುಬ್ಬಳ್ಳಿ ಗ್ರಾಮೀಣ ಭಂಡಿವಾಡ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗಳು 2018-19ನೇ ಸಾಲಿನ ಹಳದಿ ಶಾಲೆಗಳಾಗಿ ಆಯ್ಕೆಗೊಂಡು ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಪಡೆದುಕೊಂಡವು.