ಇವಿಎಂ, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಧಾರವಾಡ.01: ಭಾರತ ಚುನಾವಣಾ ಆಯೋಗದ ನಿದರ್ೆಶನದಂತೆ ಲೋಕಸಭಾ ಚುನಾವಣೆ-2019 ರ ಹಿನ್ನಲೆಯಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಕಚೇರಿ ಸಭಾಂಗಣದಲ್ಲಿ ಸಭೆ ಜರುಗಿಸಿ, ಚುನಾವಣೆ ಅವಧಿಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯಥರ್ಿಗಳು ಪಾಲಿಸಬೇಕಾದ ಚುನಾವಣಾ ಆಯೋಗದ ಸಾಮಾನ್ಯ ನಿದರ್ೆಶನ ಹಾಗೂ ಹೊಸ ಮಾರ್ಗಸೂಚಿಗಳ ಬಗ್ಗೆ ಮಾಹಿತಿ, ತಿಳುವಳಿಕೆ ನೀಡಿದರು.

  ಚುನಾವಣೆಯಲ್ಲಿ ಮತದಾರನಿಗೆ ಆಯೋಗದಿಂದ ವಿತರಿಸುವ ಮತದಾರ ಚೀಟಿ (ಗಿಠಣಜಡಿ ಟಠಿ) ಯೊಂದಿಗೆ ಆಯೋಗ ಸೂಚಿಸಿರುವ ತಮ್ಮ ಭಾವಚಿತ್ರವಿರುವ ಒಂದು ದಾಖಲೆಯನ್ನು ತೋರಿಸಬೇಕು.   ಮತದಾರ ಚೀಟಿಯೊಂದಿಗೆ ಮತದಾರ ಗುರುತಿನ ಪತ್ರ ಅಥವಾ ಆಧಾರ್ ಅಥವಾ ವಾಹನ ಚಾಲನಾ ಪತ್ರ ಸೇರಿದಂತೆ ಆಯೋಗ ಗುರುತಿಸಿರುವ ಇತರ 12 ದಾಖಲಾತಿಗಳಲ್ಲಿ, ತಮ್ಮ ಭಾವಚಿತ್ರವಿರುವ ಒಂದು ದಾಖಲಾತಿಯನ್ನು ಮತದಾರ ಚೀಟಿಯೊಂದಿಗೆ ಹೊಂದಿರುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಹೇಳಿದರು.

   ಚುನಾವಣೆಗೆ ಸ್ಪಧರ್ಿಸುವ ಅಭ್ಯಥರ್ಿಗಳು ಸಲ್ಲಿಸುವ ನಮೂನೆ-26 ರ ಅಫಿಡಿವಿಟ್ಕ್ಕೆ ತಿದ್ದುಪಡಿ ಮಾಡಲಾಗಿದ್ದು, ಅದರಂತೆ ನಮೂನೆ-26 ರ ತಿದ್ದುಪಡಿಯಲ್ಲಿನ ಅಗತ್ಯ ಮಾಹಿತಿ ಸಲ್ಲಿಸಬೇಕು. ಈ ಕುರಿತು ಅಭ್ಯಥರ್ಿಗಳಿಗೆ ಪಕ್ಷದ ಪ್ರತಿನಿಧಿಗಳು ತಿಳುವಳಿಕೆ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

   ಪ್ರಚಾರ ಸಾಮಗ್ರಿ ಹಾಗೂ ಪ್ರಚಾರ ಕಾರ್ಯಕ್ರಮದಲ್ಲಿ ಬಳಸುವ ವಿವಿಧ ಸರಕು, ಸೇವೆಗಳ ಮಾರುಕಟ್ಟೆ ದರ ನಿಗದಿಗಾಗಿ ರಾಜಕೀಯ ಪಕ್ಷದ ಪ್ರತಿನಿಧಿಗಳು ತಮ್ಮ ದರಪಟ್ಟಿ ಇರುವ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸ್ವೀಪ್ ಕಾರ್ಯಕ್ರಮಗಳ ನೊಡೆಲ್ ಅಧಿಕಾರಿ ಡಾ.ಬಿ.ಸಿ. ಸತೀಶ್ ಅವರು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಎವಿಎಂ ಮತಯಂತ್ರ ಹಾಗೂ ವಿವಿ ಪ್ಯಾಟ್ಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ,ಅಣಕು ಮತದಾನದ ಮೂಲಕ ರಾಜಕೀಯ ಪಕ್ಷದ ಪ್ರತಿನಿಧಿಗಳಿಂದ ಮತದಾನ ಮಾಡಿಸಿದರು.  

   ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಸೇರಿದಂತೆ ಇತರ ಅಧಿಕಾರಿಗಳು, ಬಾರತೀಯ ಜನತಾ ಪಕ್ಷ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್, ಜೆಡಿಎಸ್, ಬಿಎಸ್ಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.