ದುರ್ಗಾಪರಮೇಶ್ವರಿ ಜಾತ್ರಾ ನಿಮಿತ್ಯ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ

ಲೋಕದರ್ಶನ ವರದಿ

ಬೈಲಹೊಂಗಲ 29:  ಪಟ್ಟಣದ ಬಸವನಗರದ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದ 11ನೇ ವರ್ಷದ ಜಾತ್ರಾ ಮಹೋತ್ಸವದ ಶ್ರೀಮಾತಾ ಉತ್ಸವ 2019ರ ಅಂಗವಾಗಿ ಗುರುವಾರ ರಾತ್ರಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ರೋಚಕವಾಗಿ ನಡೆದವು.

     ಮಹಾರಾಷ್ಟ್ರದ ಸದಲಗಾ, ಕೂಣರ್ಿ, ಗೋಕಾಕ ತಾಲ್ಲೂಕಿನ ನಾಗನೂರ, ಧಾರವಾಡ, ಕರೀಕಟ್ಟಿ, ಚಿಕ್ಕೊಪ್ಪ, ಅಸುಂಡಿ, ಉಡಿಕೇರಿ ಭಾಗಗಳಿಂದ 26ಕ್ಕೂ ಹೆಚ್ಚು ಕಬಡ್ಡಿ ತಂಡಗಳು ಭಾಗವಹಿಸಿದ್ದವು. ಗೋಕಾಕ ತಾಲ್ಲೂಕಿನ ನಾಗನೂರ ಗ್ರಾಮದ ಜೈ ಹನುಮಾನ ತಂಡ ಪ್ರಥಮ ಬಹುಮಾನ 20,000 ರೂ.ನಗದು, ಘೋಡಗೇರಿ ತಂಡ ದ್ವಿತೀಯ 15,000 ರೂ., ಧಾರವಾಡದ ಬೂಲ್ಸ್ ತಂಡ ತೃತೀಯ 10,000 ರೂ., ಚಿಕೊಪ್ಪ ತಂಡ ನಾಲ್ಕನೇ ಬಹುಮಾನ 5,000 ರೂ.ಪಡೆದುಕೊಂಡರು.

    ಪ್ರತಿಯೊಬ್ಬ ಕ್ರೀಡಾಪಟುಗಳು ತಮ್ಮ ಜೀವದ ಹಂಗು ತೊರೆದು ಉತ್ತಮವಾಗಿ ಆಟ ಪ್ರದಶರ್ಿಸಿದರು. ತಂಪಾದ ವಾತಾವರಣದಲ್ಲಿ ಶ್ರೀದುಗರ್ಾಮಾತೆಯನ್ನು ಮನದಲ್ಲಿ ಸ್ಮರಣೆ ಮಾಡುತ್ತಾ ಕಣಕ್ಕಿಳಿದ ಆಟಗಾರರು ಕ್ರೀಡಾಭಿಮಾನಿಗಳನ್ನು ರಂಜಿಸಿದರು. 

   ಕಬಡ್ಡಿ, ಕಬಡ್ಡಿ ಎನ್ನುತ್ತ ಎದುಸಿರು ಬಿಟ್ಟು ಸೊಗಸಾಗಿ ಆಟ ಪ್ರದಶರ್ಿಸಿದರು. ಕಬಡ್ಡಿ ಆಟಗಾರರ ಚಾನಾಕ್ಷ್ಯತನ, ಓಟ, ಎದುರಾಳಿ ತಂಡದ ಸದಸ್ಯರನ್ನು ಹಿಡಿದು ಶರಣಾಗತಿ ಮಾಡುತ್ತಿದ್ದ ದೃಶ್ಯ ಕಂಡು ಪ್ರೇಕ್ಷಕರು ಬೆರಗಾದರು. 

  ವೇದಮೂತರ್ಿ ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ, ರಾಯಭಾಗ ಬಿಜೆಪಿ ಯುವ ಮುಖಂಡ ಅರುಣ ಐಹೊಳೆ ಪಂದ್ಯಾವಳಿಗೆ ಚಾಲನೆ ನೀಡಿದರು. 

    ಕ್ರೀಡಾಪಟುಗಳಾದ ಬಸವರಾಜ ಹೊಸಮಠ, ಎಚ್.ಎಸ್.ಶಿಂಗಾಡೆ ವಿಶೇಷ ಆಮಂತ್ರಿತರಾಗಿದ್ದರು. ಮುಖಂಡರಾದ ಈಶ್ವರ ಕೌಜಲಗಿ, ಸಂತೋಷ ರಾಯರ, ಸಂತೋಷ ಪಾಟೀಲ, ಶಿವರುದ್ರಯ್ಯ ಭೂಸನೂರಮಠ, ಅಜ್ಜಪ ಪರುಶೆಟ್ಟಿ ಹಾಗೂ ಮತ್ತಿತರರು ಇದ್ದರು.