2020ರ ವೇಳೆಗೆ ಎಲ್ಲಾ ಬಡ ಕುಟುಂಬಗಳಿಗೆ ಸೂರು ಕಲ್ಪಿಸಲಾಗುವುದು: ಪಾಟೀಲ

ಲೋಕದರ್ಶನ ವರದಿ

ಗದಗ 04: ಗದಗ-ಬೆಟಗೇರಿ ನಗರದ ವಸತಿರಹಿತರ ಬೇಡಿಕೆಗೆ ಅನುಗುಣವಾಗಿ ಸಮೀಕ್ಷೆ ಕಾರ್ಯ ನಡೆಸಿ ಈಗಾಗಲೇ 3630 ಮನೆಗಳನ್ನು ನಿಮರ್ಾಣ ಹಂತದಲ್ಲಿದೆ, ಬರುವ 2020ರ ವೇಳೆಗೆ ಗದಗ-ಬೆಟಗೇರಿ ನಗರದಲ್ಲಿಯ ಸೂರಿಲ್ಲದ ಎಲ್ಲಾ ಬಡ ಕುಟುಂಬಗಳಿಗೆ ಸೂರು ಕಲ್ಪಿಸಲಾಗುವುದೆಂದು ಗದಗ ಮತ ಕ್ಷೇತ್ರದ ಶಾಸಕರಾದ ಹಾಗೂ ಕನರ್ಾಟಕ ಪ್ರದೇಶ ಕಾಂಗ್ರೇಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಹೆಚ್.ಕೆ.ಪಾಟೀಲ ಹೇಳಿದರು.

ಅವರು ನಗರದ ವಾಲ್ಮೀಕಿ ಸಬಾಭವನದಲ್ಲಿ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯಿಂದ ಆಯೋಜಿಸಲಾಗಿದ್ದ 348 ವಸತಿರಹಿತ ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡುತ್ತ. ಗದಗ-ಬೆಟಗೇರಿ ನಗರದಲ್ಲಿ ವಾಸವಾಗಿರುವ ವಸತಿರಹಿತರ ಸಮೀಕ್ಷೆಯನ್ನು 2018ರಲ್ಲಿ ನಡೆಸಲಾಗಿದೆ, ಮತದಾರರ ಯಾದಿ ಸಮೇತ ಅರ್ಹರ ಫಲಾನುಭವಿಗಳನ್ನು ಗುರುತಿಸಲು ಪಾರದರ್ಶಕವಾಗಿ ನಡೆಸಿ ಸಮೀಕ್ಷೆಯನ್ನು 2018 ಅಗಷ್ಟ 15 ರೂಳಗೆ ಪೂರ್ಣಗೊಂಡಿದೆ, ಸಮೀಕ್ಷೆ ಪ್ರಕಾರ ಗದಗ ಮತ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ 2500 ಹಾಗೂ ನಗರದ ಪ್ರದೇಶದಲ್ಲಿ 6000 ವಸತಿರಹಿತರು ವಾಸವಾಗಿದ್ದಾರೆ, ಸಮೀಕ್ಷೆ ನಡೆಸಲಾಗಿರುವ ಎಲ್ಲಾ ವಸತಿರಹಿತರ ಕುಟುಂಬಗಳಿಗೆ ಬರುವ 2020ರ ಅಗಷ್ಟ 15 ರೂಳಗೆ ವಸತಿ ಕಲ್ಪಿಸಲಾಗುವುದು, ಗದಗ ವಿಧಾನ ಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ವಸತಿರಹಿತ ಮುಕ್ತವನಾಗಿ ಮಾಡುಲಾಗುವುದೆಂದು ಹೆಚ್.ಕೆ.ಪಾಟೀಲ ಹೇಳಿದರು, ನಗರದ ಗಂಗಿಮಡಿ ಹಾಗೂ ವಿವಿಧ ಭಾಗದಲ್ಲಿ ವಸತಿರಹಿತರಗಾಗಿ 3630 ಮನೆಗಳ ನಿಮರ್ಾಣ ಕಾರ್ಯ ಭರದಿಂದ ಸಾಗಿದೆ, ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ 348 ವಸತಿರಹಿತ ಕುಟುಂಬಗಳಿಗೆ ಮಂಜೂರಾತಿ ಪತ್ರ ವಿತರಿಸಲಾಗಿದ್ದು.

ಗಂಗಿಮಡಿಯಲ್ಲಿ ನಿಮರ್ಿಸಲಾಗುತ್ತಿರುವ ಮನೆಗಳಲ್ಲಿ ಪ್ರಾಧಾನ್ಯತ ನೀಡಲಾಗುವುದು, ಬಡವರಿಗಾಗಿ ನಿಮರ್ಿಸಲಾಗುತ್ತಿರುವ ಮನೆಗಳು ಉಳ್ಳವರ ಪಾಲಾಗಬಾರದೆಂದು ಅನೇಕ ರೀತಿಯ ದಾಖಲೆಗಳನ್ನು ಪರೀಶಿಲ್ಲಿಸಲಾಗುತ್ತಿದೆ, ನಗರದ ನಿಜವಾದ ಸೂರಿಲ್ಲದ ಕುಟುಂಬಗಳನ್ನು ಗುರಿತಿಸುವ ಕಾರ್ಯ ನಡೆಸಲಾಗುತ್ತಿದ್ದು.

ಯಾವುದೇ ಕಾರಣಕ್ಕೊ ಅನರ್ಹರಿಗೆ ಮನೆಗಳನ್ನು ಸಿಗುವ ಅವಕಾಶ ಕಲ್ಪಿಸಲಾಗುವುದಿಲ್ಲಾ, ಸಮೀಕ್ಷೆ ಸಂದರ್ಭದಲ್ಲಿ ಗುರುತಿಸಲ್ಪಟ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ವಿತರಿಸಲಾಗುತ್ತಿದ್ದು, ಆದಷ್ಟು ಬೇಗನೆ ಮನೆಗಳನ್ನು ಹಂಚಿಕೆ ಮಾಡುವ ಕಾರ್ಯ ಕೈಗೊಳ್ಳಲಾಗುವುದು, ನೂತನ ತಂತ್ರಜ್ಞಾನವನ್ನು ಅಳವಡಿಸಿ ಮನೆಗಳನ್ನು ನಿಮರ್ಿಸಲಾಗುತ್ತಿದ್ದು, ಬರುವ ಮಾರ್ಚ ಒಳಗಾಗಿ 1000 ಮನೆಗಳ ನಿಮರ್ಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯಿಂದ 348 ವಸತಿರಹಿತ ಕುಟಮಬಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಬೇಡಿಕೆಯನ್ನು ಗದಗ ಮತ ಕ್ಷೇತ್ರದ ಶಾಸಕರಾದ ಹೆಚ್.ಕೆ.ಪಾಟೀಲರಿಗೆ ನೀಡಲಾಗಿತ್ತು, ರಾಜ್ಯದಲ್ಲಿ ಅತೀ ಹೆಚ್ಚು ಬಡವರಿಗೆ ಸೂರು ಕಲ್ಪಿಸಿರುವುದು ಕ್ಷೇತ್ರ ಗದಗ ಕ್ಷೇತ್ರ ಮಾಜಿ ಶಾಸಕರದಾದ ಡಿ. ಆರ್,ಪಾಟೀಲರು ಮತ್ತು ಹೆಚ್.ಕೆ.ಪಾಟೀಲರು ಗದಗ-ಬೆಟಗೇರಿ ನಗರದ ವಿವಿಧ ಭಾಗಗಲ್ಲಿ ಆಶ್ರಯ ಮನೆಗಳನ್ನು ನಿಮರ್ಿಸಿ ಬಡವರಿಗೆ ಹಂಚಿಕೆ ಮಾಡಿದ್ದಾರೆ, ಇದೇ ರೀತಿ ಗದಗ-ಬೆಟಗೇರಿ ನಗರದ ವಸತಿರಹಿತರಿಗಾಗಿ ರಾಜ್ಯದಲ್ಲಿಯ ಅತೀ ಹೆಚ್ಚು ಅಂದರೆ 3630 ಮನೆಗಳನ್ನು ನಿಮರ್ಿಸಲಾಗುತ್ತಿದ್ದು, ನಗರದ ಸಾವಿರಾರು ಬಡ ಕುಟುಂಬಗಳ ಸ್ವಂತ ಮನೆಗಳ ಕನಸು ಶಿರ್ಘವೇ ನನಸಾಗಲಿದೆ, ಬಡ ಕುಟುಂಬಗಳ ಅಭಿವೃಧ್ದಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಜನಪ್ರೀಯ ಶಾಸಕರಾದ ಹಚ್.ಕೆ.ಪಾಟೀಲರ ಸೇವೆಗೆ ನಗರದ ಸ್ಲಂ ನಿವಾಸಿಗಳ ಪರವಾಗಿ ಅಭಿನಂದಿಸಿದರು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್.ವಿ.ಬಳಗಾರ, ಶಹರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಗುರಣ್ಣ ಬಳಗಾನೂರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರಭು ಬುರಬುರೆ, ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹ್ಮದಯುಸುಫ ನಮಾಜಿ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು, ಮಹ್ಮದ ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು, ಅಶೋಕ ಕುಸಬಿ ವಂದಿಸಿದರು, ಗದಗ-ಬೆಟಗೇರಿಯ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಮತ್ತು ವಸತಿರಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.