ಬೆಂಗಳೂರು 4: ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ನ್ನು ಖೆಡ್ಡಾಕ್ಕೆ ತಳ್ಳಿ ಸೋಲಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷರ ಆರೋಪ ದಲ್ಲಿ ಹುರುಳಿಲ್ಲ, ಸಿದ್ದರಾಮಯ್ಯ ಅವರು ನಿಖಿಲ್, ಪ್ರಜ್ವಲ್ ಹಾಗೂ ದೇವೇಗೌಡರ ಪರವಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ, ಆದರೂ ಅವರ ಬಗ್ಗೆ ವಿಶ್ವನಾಥ್ ವಿನಾಕಾರಣ ಆರೋಪ ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ಡಾ ಕೆ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ಅಭ್ಯಥರ್ಿಗಳು ಸೇರಿದಂತೆ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಮಾಡಿದ್ದಾರೆ, ಇದರಲ್ಲಿ ಸೋತವರನ್ನು ಮುಂದಿಟ್ಟುಕೊಂಡು ಖೆಡ್ಡಾಕ್ಕೆ ಬೀಳಿಸಿದರು ಎಂದು ಹೇಳುವುದು ಸೂಕ್ತವಲ್ಲ ಎನ್ನುವ ಮೂಲಕ ವಿಶ್ವನಾಥ್ ಹೇಳಿಕೆಯನ್ನು ಡಾ.ಸುಧಾಕರ್ ಅಲ್ಲಗಳೆದಿದ್ದಾರೆ ರಾಜಕೀಯ ಸ್ಥಿತ್ಯಂತರ ಪರಿಸ್ಥಿತಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ವಿಶ್ವನಾಥ್ ಅವರು ರಾಜೀನಾಮೆ ಕೊಡಬಾರದಿತ್ತು. ಆದರೂ ಇದು ಜೆಡಿಎಸ್ ಪಕ್ಷದ ಆಂತರಿಕ ವಿಚಾರ, ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಸಮನ್ವಯ ಸಮಿತಿಯಲ್ಲಿ ಮೈತ್ರಿ ಸರಕಾರವನ್ನು ಸುಭದ್ರವಾಗಿ ನಡೆಸಿ ಕೊಂಡು ಹೋಗುವಷ್ಟು ಸಮರ್ಥ ನಾಯಕರಿದ್ದಾರೆ. ವಿಶ್ವನಾಥ್ ಅವರನ್ನು ಸಮಿತಿಗೆ ಸೇರಿಸಬೇಕೇ ಬೇಡವೇ ಎನ್ನುವ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ವರಿಷ್ಠರು ತೀರ್ಮಾನಿಸುತ್ತಾರೆ ಎನ್ನುವ ಮೂಲಕ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು. ಮಾಜಿ ಸಚಿವ ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಅವರು ಪಕ್ಷದ ಹಿರಿಯರು. ಅವರ ನೋವಿನಲ್ಲಿ ನಾನೂ ಭಾಗಿಯಾಗುತ್ತೇನೆ. ಕಾಂಗ್ರೆಸ್ ನೇತೃತ್ವದ ಸಕರ್ಾರ ಆಡಳಿತಕ್ಕೆ ಬಂದಾಗಲೆಲ್ಲ ಅವರಿಬ್ಬರೂ ಸಂಪುಟ ಸೇರುತ್ತಿದ್ದರು, ಆದರೆ ಈಗಿರುವುದು ಮೈತ್ರಿ ಸಕರ್ಾರ. ಹೀಗಾಗಿ ಅವರಿಗೆ ಸಚಿವ ಸ್ಥಾನ ತಪ್ಪಿದೆ. ಅಧಿಕಾರವಿದ್ದಾಗ ಸುಮ್ಮನಿದ್ದವರು ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದರು. ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆಯೇ ಎಂಬ ಪಶ್ನೆಗೆ ಮಾಮರ್ಿಕವಾಗಿ ಉತ್ತರಿಸಿದ ಅವರು, "ನಿಮಗಿರುವಷ್ಟು ಕುತೂಹಲ ನಮಗೂ ಇದೆ" ಎಂದು ಉತ್ತರಿಸಿದರು.