ಬತ್ತಿ ಹೋದ ಕೃಷ್ಣೆ: ಒಣಗಿದ ಬೆಳೆ

ಸಂತೋಷಕುಮಾರ ಕಾಮತ 

ಮಾಂಜರಿ ೦೮: ಕಳೆದ ಒಂದೆರಡು ತಿಂಗಳಿಂಸ ಜೀವನದಿ ಕೃಷ್ಣೆ ಒಡಲು ಸಂಪೂರ್ಣ ಬತ್ತಿ ಹೋದ ಚಿಕ್ಕೋಡಿ ಉಪ ವಿಭಾಗದ ನದಿ ತೀರದ ರೈತರ ಬೆಳೆ ಒಣಗುತ್ತಿದ್ದು ರೈತ ವಲಯದಲ್ಲಿ ಆತಂಕ ಸೃಷ್ಟಿಸಿದೆ

   ಕೃಷ್ಣಾ ನದಿ ಪಾತ್ರದ ಗ್ರಾಮಗಳು ನದಿ ನೀರನ್ನು ಅವಲಂಬಿಸಿದ್ದು ಈಗ ನದಿ ಸಂಪೂರ್ಣ ಬತ್ತಿ ಹೊಗಿದೆ ನೀರು ಇಲ್ಲದೆ ಜನ ಜಾನುವಾರುಗಳು ಕುಡಿಯುವ ನೀರಿಗೆ ಪರಡಾಡುವಂತಹ ಪರಿಸ್ಥಿತಿ ತಲೆದೂರಿದೆ ಇನ್ನು ನದಿ ನೀರನ್ನು ಅವಲಂಬಿಸಿರುವ ರೈತರ ನೂರಾರು ಎಕರೆ ಕಬ್ಬು ಬೆಳೆ ನೀರು ಇಲ್ಲದೆ ಒಣಗುತ್ತಿವೆ ಇದರಿಂದ ರೈತರು ಕಂಗಾಲಾಗಿ ಹೊಗಿದ್ದಾರೆ

ಕೃಷ್ಣಾ ನದಿಯಿಂದ 20 ಕಿ.ಮೀ. ವರೆಗಿನ ಗ್ರಾಮಗಳಿಗೆ ನೀರನ್ನು ಪೈಪ್ಲೈನ್ ಮೂಲಕ ಸಾಗಿಸಿ ಬೆಡು ಭೂಮಿಯಾಗಿದ್ದ ಜಮಿನನ್ನು ನೀರಾವರಿ ಮಾಡಿಕೊಂಡಿದ್ದರೆ ಈಗ ಕೃಷ್ಣಾ ನದಿಯಲ್ಲಿ ನೀರು ಇಲ್ಲದೆ ಇರುವುದರಿಂದ ಅದೇ ಕೃಷ್ಣಾ ನದಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಬೆಳೆಗಳು ಒಣಗಿ ಕರಲಾಗುತ್ತಿವೆ

        ಕಬ್ಬು ಬೆಳೆಗಾರರು ಚಿಂತಾಕ್ರಾಂತ : ವಿಶೇಷ ಅಂದರೆ ಅಲ್ಲಿ ಕಬ್ಬಿನ ಬೆಳೆಯನ್ನೇ ಬೆಳೆಯಲಾಗುತ್ತಿದ್ದು ಕಬ್ಬು ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನದಿ ತೀರದ ರೈತರು ಮುಂದಿನ ಜಿವನೋಪಾಯ ಹೇಗೆ ಸಾಗಿಸುವುದು ಮತ್ತು ಲಕ್ಷಾಂತರ ರೂ. ಖಚರ್ು ಮಾಡಿ ಕಬ್ಬು ನಾಡಿ ಮಾಡಿದ ಕಬ್ಬು ಬೆಳೆ ಕಳೆದುಕೊಂಡ ರೈತರು ಮಾಡಿದ ಸಾಲ ತಿರಿಸುವ ದಾರಿ ಕಾಣದೆ ಚಿಂತಾಕ್ರಾಂತರಾಗಿದ್ದಾರೆ

ಕಾಖರ್ಾನೆಗಳಿಗೂ ಕಬ್ಬು ಕೊರತೆ ಭೀತಿ:  ಚಿಕ್ಕೋಡಿ ಉಪವಿಭಾಗದಲ್ಲಿ ಕೃಷ್ಣಾ ನದಿಯಲ್ಲಿ ನೀರಿಲ್ಲದೆ ಬತ್ತಿ ಹೋಗಿರುವುದರಿಂದ ನದಿ ತೀರದಲ್ಲಿ ಬೆಳೆದ ನೂರಾರು ಎಕರೆ ಕಬ್ಬು ಬೆಳೆ ಒಣಗಿ ಹೊಗುತ್ತಿದೆ ಹೀಗಾಗಿ ರೈತರು ದನಕರುಗಳು ಮೇವಿನ ಕೊರತೆ ನೀಗಿಸಲು ಒಣಗಿರುವ ಕಬ್ಬು ಕಡಿದು ದನಗಳಿಗೆ ಹಾಕುತ್ತಿರುವುದರಿಂದ ಮುಂದಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಉಪವಿಭಾಗದಲ್ಲಿ ಕಾಖರ್ಾನೆಗಳಿಗೆ ಕಬ್ಬು ಕೊರತೆಯ ಭಿತಿ ಎದುರಾಗಿದೆ

       ನಿಯೋಗದ ಮನವಿಗೂ ನೀರು ಬರಲಿಲ್ಲ : ನೀರು ಬಿಡಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನಾ ಮುಂದು ನೀ ಮುಂದು ಎಂದು ಪೈಪೋಟಿ ನಡಿಸಿ ಮನವಿ ಸಲ್ಲಿಸಿದರು ಪ್ರತಿಫಲವಿಲ್ಲ ಮಹಾರಾಷ್ಟ್ರ ಸಕರ್ಾರ ಕನರ್ಾಟಕ ರೈತರು ಪಡುತ್ತಿರುವ ಸಂಕಟ, ನೋವನ್ನು ಅರ್ಥ ಮಾಡಿಕೊಂಡಿಲ್ಲ ಅರ್ಥ ಮಾಡಿಕೊಳ್ಳುವ ಲಕ್ಷ್ಣಗಳು ಕಾಣುತ್ತಿಲ್ಲ ಮೂಗಿಗೆ ತುಪ್ಪ ಹಚ್ಚುವಂತೆ ರಾಜಕೀಯ ಪಕ್ಷಗಳ ನಾಯಕರಿಗೆ ಆಶ್ವಾಸನೆ ನೀಡುತ್ತಿದೆ ಅಷ್ಟೆ ಕೇಂದ್ರ ಸಕರ್ಾರ ಮಟ್ಟದ ಅಧಿಕಾರಿಗಳು ಹಾಗೂ ಕೇಂದ್ರ ಸಕರ್ಾರ ಹಸ್ತಕ್ಷೇಪ ಮಾಡಿಯಾದರೂ ನೀರು ಬಿಡಿಸಲು ಕ್ರಮ ಕೈಗೊಳ್ಳಬೇಕಾದ ಜರೂರಿದೆ

ಚಿಕ್ಕೋಡಿ ಉಪವಿಭಾಗದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನಲ್ಲಿ ನದಿ ತೀರದ ಜನ ಜಾನುವಾರುಗಳು ನೀರಿಲ್ಲದೆ ಪರಿತಪಿಸುತ್ತಿದ್ದು ರೈತರು ಬೆಳೆದ ಕಬ್ಬು ಬೆಳೆ ನೀರಿಲ್ಲದೆ ಒಣಗಿ ಲಕ್ಷಾಂತರ ರೂ. ಬೆಳೆ ಹಾನಿಯಾಗುತ್ತಿದೆ ಆದರೆ ರಾಜ್ಯ ಸರ್ಕರದ ಆಡಳಿತ ಯಂತ್ರ ಮಾತ್ರ ತನಗೆ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಯಾವುದೆ ಪರಿಹಾರೋಪಾಯಗೊಳ್ಳದೆ ಜಾಣಮೌನ ವಹಿಸಿರುವುದು ನದಿ ಪಾತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.