ಗಟ್ಟಿ ಆರೋಗ್ಯಕ್ಕೆ ಸಿರಿಧಾನ್ಯಗಳೇ ಮದ್ದು: ಹುಂಡೇಕರ್
ಲೋಕದರ್ಶನ ವರದಿ
ಬೆಳಗಾವಿ 25: ಹಿಂದಿನ ಹಿರಿಯರ ಆರೋಗ್ಯದ ಗುಟ್ಟಿನ ಮೂಲವಾಗಿರುವ ಸಿರಿಧಾನ್ಯಗಳಲ್ಲಿ ಮಹಿಳೆಯರು ತಯಾರಿಸಿದ ಖಾದ್ಯಗಳು ಬೆರಗು ಮೂಡಿಸುವಂತಿವೆ ಎಂದು ವಿದ್ಯಾ ಹುಂಡೇಕರ ಹೇಳಿದರು.
ನಗರದ ಟಿಳಕವಾಡಿಯ ನೌಕರರ ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿದ್ದ ಭುವನೇಶ್ವರಿ ಉತ್ಸವದ ಹಿನ್ನೆಲೆಯಲ್ಲಿ ವಿವಿಧ ಸಿರಿಧಾನ್ಯಗಳ ಸ್ಪಧರ್ೆಗಳು ಜರಗಿದವು.
ಹೂಗಳಿಲ್ಲದೇ ಕೇವಲ ಎಲೆಗಳಿಂದ ಮಾತ್ರ ತಯಾರಿಸಿದ ಸುಂದರ ಹೂ ಕುಂಡಗಳು ಕಣ್ಣು ಕುಕ್ಕುವಂತಿವೆ. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆದರೆ ಮಾತ್ರ ಆರೋಗ್ಯ ಮಾಹಿತಿ ಸಿಕ್ಕಾಂಗುತ್ತದೆ ಎಂದರು.
ನಮ್ಮ ನಾಡಿನ ಸಂಸ್ಕೃತಿಯ ಬೆಳೆಗಿಸಲು ಸಿರಿಧಾನ್ಯಗಳಂತ ಭೂಮಿಯಲ್ಲಿ ಬೆಳೆದ ಧ್ಯಾನಗಳು ನಾವು ಸೇವಿಸದರೆ ಮಾತ್ರ ಆರೋಗ್ಯವನ್ನು ಕಾಪಾಡಿಕೊಂಡತಾಗುತ್ತದೆ. ಮನುಷ್ಯನು ರುಚಿಯಾದ ಪದಾರ್ಥಗಳ ಸೇವಿಸುವ ಬದಲು, ಎಲೆ, ಹೂ, ಸೊಪ್ಪು ಹಣ್ಣುಗಳನ್ನು ಸೇವಿಸಿ ಆರೋಗ್ಯವನ್ನು ಸದೃಢವಾಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಎಲೆಗಳ ಸಿಹಿ ಹಾಗೂ ಖಾರಾ ಪದಾರ್ಥ ತಯಾರಿಕೆ ಎಲೆಗಳ ಜೋಡಣೆ ಬೆಳಗಾವಿ ಕವಿತ್ರಿಯರು ಬರೆದ ಕವನ ಗಾಯನ ಸ್ಪಧರ್ೆಗಳನ್ನು ನಡೆಸಿದರು.
ನಗರದ ವಿವಿಧ ಮಹಿಳಾ ಮಂಡಳದ ಪದಾದಿಕಾರಿಗಳು, ಭಾರತಿ ಸಂಕಣ್ಣನವರ, ಜ್ಯೋತಿ ಬಾವಿಕಟ್ಟಿ, ವೀಣಾ ನಾಗಮೇತ್ರಿ, ಭಾರತಿಜಿರಗೆ, ಲಲಿತಾ ಪಾಟೀಲ, ಆಶಾ ಪಾಟೀಲ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಸುಜಾತಾ, ಮಮದಾಪೂರ, ಚೌಗಲಾ ಹಾಗೂ ಉಪಸ್ಥಿತರಿದ್ದರು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 