ಕೊಪ್ಪಳ 17: ಕೊಪ್ಪಳ ಜಿಲ್ಲೆಯಲ್ಲಿ ಜಾನುವಾರು ಸಂರಕ್ಷಣೆಗಾಗಿ 7 ಗೋಶಾಲೆಗಳನ್ನು ನಡೆಸಲಾಗುತ್ತಿದ್ದು ಸಬ್ಸಿಡಿ ದರದಲ್ಲಿ ಮೇವು ಬ್ಯಾಂಕ್ಗಳ ಮೂಲಕವೂ ಮೇವು ಕಲ್ಪಿಸಲಾಗುತ್ತಿದೆ. ಇದರೊಂದಿಗೆ ಸರ್ಕಾರದ ಜಮೀನು, ಕರೆ ಅಂಗಳದಲ್ಲಿ ಹಸಿರು ಮೇವು ಬೆಳೆಸಲು ಮೂಲ ಭೂತ ಸೌಕರ್ಯವನ್ನು ಕಲ್ಪಿಸಿ ನಿರ್ವಹಣೆಗೆ ಹಾಲು ಉತ್ಪಾದಕ ಸೊಸೈಟಿಗಳಿಗೆ ವಹಿಸುವುದರಿಂದ ಇನ್ನೂ ಪರಿಣಾಮಕಾರಿಯಾಗಿ ನಿರ್ವಹಣೆ ಸಾಧ್ಯವಾಗಲಿದೆ ಎಂದು ರಾಜ್ಯ ವಸತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹರ್ಷ ಗುಪ್ತ ತಿಳಿಸಿದರು.
ಅವರು ಇಂದು (ಜುಲೈ. 17) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿನ ಬರ ನಿರ್ವಹಣೆ ಮತ್ತು ವಿವಿಧ ಇಲಾಖೆಗಳಲ್ಲಿನ ಪ್ರಗತಿ ಪರಿಶೀಲನೆ ವೇಳೆ ತಿಳಿಸಿದರು.
ಜಿಲ್ಲೆಯಲ್ಲಿ ಅಂದಾಜು 2.83 ಲಕ್ಷ ಜಾನುವಾರುಗಳಿದ್ದು ಇದರಲ್ಲಿ 4 ಸಾವಿರದಷ್ಟು ಜಾನುವಾರುಗಳಿಗೆ ಗೋಶಾಲೆಯಲ್ಲಿ ಮೇವು ವಿತರಿಸಲಾಗುತ್ತಿದೆ. ಮತ್ತು ಮೇವು ಬ್ಯಾಂಕ್ಗಳಲ್ಲಿ ಪ್ರತಿ ಕೆಜಿಗೆ 2 ರೂ.ಗಳ ದರದಲ್ಲಿ ಮೇವು ವಿತರಣೆ ಮಾಡಲಾಗುತ್ತಿದೆ. ಆದರೆ ಜಾನುವಾರುಗಳ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲಾ ಜಾನುವಾರುಗಳಿಗೂ ಮೇವು ವಿತರಿಸಬೇಕು. ಇದಕ್ಕಾಗಿ ರೈತರಿಗೆ ಮೇವಿನ ಬೀಜಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದರೊಂದಿಗೆ ಎಲ್ಲೆಲ್ಲಿ ಅವಕಾಶವಿದೆ ಅಂತಹ ಕಡೆ ಹಸಿರು ಮೇವನ್ನು ಬೆಳಸಲು ಸ್ಥಳ ಗುರುತಿಸಿ ಇದಕ್ಕೆ ಬೇಕಾದ ನೀರು, ತಡೆ ಬೆಲಿ ನಿಮರ್ಿಸಿ ಆಯಾ ಭಾಗದ ಹಾಲು ಉತ್ಪಾದಕರ ಸೊಸೈಟಿಗಳಿಗೆ ನಿರ್ವಹಣೆಗೆ ಮತ್ತು ವಿತರಣೆಗೆ ನೀಡುವುದರಿಂದ ಸಾರ್ವಜನಿಕರ ಸಹಭಾಗಿತ್ವ ಮತ್ತು ಪಾರದರ್ಶಕವಾಗಿರುತ್ತದೆ. ಮತ್ತು ಇದು ಖಾಯಂ ವ್ಯವಸ್ಥೆಯಾಗಿರುತ್ತದೆ. ಈಗಾಗಲೇ ಈ ವ್ಯವಸ್ಥೆ ಗುಜರಾತ ರಾಜ್ಯದಲ್ಲಿದೆ ಎಂದರು.
ಕುಡಿಯುವ ನೀರು: ಜಿಲ್ಲೆಯ 17 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆ ಗ್ರಾಮಗಳಲ್ಲಿ ಲಭ್ಯವಿರುವ ಖಾಸಗಿ ಬೋರ್ವೇಲ್ಗಳ ಮಾಲೀಕರ ಮನವಲಿಸಿ ನಿಯಮಾನುಸಾರ ಆ ನೀರನ್ನು ಗ್ರಾಮದ ಜನರಿಗೆ ಪೂರೈಸಲು ಕ್ರಮ ಕೈಗೊಂಡು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾನ ದಿನಗಳನ್ನು ಸೃಷ್ಠಿಸಿ: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಆಗದ ಕಾರಣ ಭೀಕರ ಬರಗಾಲ ಸ್ಥಿತಿಯಿದೆ. ಆದ್ದರಿಂದ ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಸೃಷ್ಠಿಸಬೇಕು. ನರೇಗಾದಡಿ ನೋಂದಣಿ ಮಾಡಿಕೊಂಡ ಕೂಲಿಕಾರರಿಗೆ ನಮೂನೆ-6 ನ್ನು ಸಂಬಂಧಿಸಿ ಗ್ರಾಮ ಪಂಚಾಯತ್ಗಳು ಒದಗಿಸಬೇಕು. ನಮೂನೆ-6 ನ್ನು ನೀಡಿದ 15 ದಿನಗಳಲ್ಲಿ ಆ ವ್ಯಕ್ತಿಗೆ ಕೆಲಸ ನೀಡಬೇಕು. ಮಾನವ ದಿನಗಳ ಸೃಷ್ಠಿಯಲ್ಲಿ ಇದುವರೆಗೆ ಕಡಿಮೆ ಸಾಧನೆ ಮಾಡಿರುವ ತಾಲೂಕುಗಳಲ್ಲಿ ಸಂಬಂಧಿಸಿ ಕಾರ್ಯನಿವಾರ್ಹಕ ಅಧಿಕಾರಿಗಳು, ಪಿಡಿಒಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸೂಕ್ತ ತಿಳುವಳಿಕೆ ನೀಡುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳನ್ನು ಸೃಷ್ಠಿಸಿ ಬರಗಾಲದ ಸಂದರ್ಭದಲ್ಲಿ ಜನರಿಗೆ ಉದ್ಯೋಗ ಒದಗಿಸಿ ಅನುಕೂಲ ಮಾಡಿಕೊಡಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಾತನಾಡಿ, ಕಳೆದ ವರ್ಷ 36 ಲಕ್ಷ ಮಾನವ ದಿನಗಳ ಸೃಜನೆ ಗುರಿಯಲ್ಲಿ 42 ಲಕ್ಷ ಸಾಧನೆ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 44 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದ್ದು ಜೂನ್ ವರೆಗೆ 14.94 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಬರ ಪರಿಸ್ಥಿತಿ ಇರುವುದರಿಂದ ಜನರಿಗೆ ಉದ್ಯೋಗ ಕೊಡಲು ಸಮುದಾಯದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಮತ್ತು ಕೆರೆ ಹೂಳೆತ್ತುವ ಕೆಲಸವನ್ನು ಕೈಗೊಳ್ಳಲಾಗಿದೆ. ಇಂತಹ ಕಡೆ 1500 ರಿಂದ 2000 ವರೆಗೆ ಜನರು ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನಿಡಿದರು. ಮತ್ತು ಕನ್ರ್ವಜಂನ್ಸ್ ಅಡಿ ಕೃಷಿ ಇಲಾಖೆ, ತೋಟಗಾರಿಕೆ ಸೇರಿದಂತೆ ವೈಯಕ್ತಿಕ ಕಾಮಗಾರಿಗಳು ಸಹ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ರೈತರಿಗೆ ವಾಷರ್ಿಕ 6000 ರೂ.ಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ಎಲ್ಲಾ ಅಂಕಿ ಅಂಶಗಳನ್ನು ಸಂಗ್ರಹಿ ಕಳುಹಿಸಬೇಕಾಗಿದೆ. ಜಿಲ್ಲೆಯಲ್ಲಿ 2.32 ಲಕ್ಷ ರೈತರಿದ್ದು ಇದರಲ್ಲಿ 1.52 ಲಕ್ಷ ರೈತರು ನೋಂದಣಿ ಮಾಡಿದ್ದಾರೆ. ಅನರ್ಹರನ್ನು ಪರಿಶೀಲಿಸಿ ಅರ್ಹರ ಪಟ್ಟಿ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.
ಉಸ್ತುವಾರಿ ಕಾರ್ಯದಶರ್ಿಗಳು ಮಾತನಾಡಿ ರೈತ ಸಾಲ ಮನ್ನಾ ಸೇರಿದಂತೆ ರೈತರ ಬ್ಯಾಂಕ್ ಖಾತೆಯ ಆಧಾರ ಸಂಖ್ಯೆ ಜೋಡಿಸುವಲ್ಲಿ ಇರುವ ತಾಂತ್ರಿಕ ತೊಂದರೆಗಳನ್ನು ಶೀಘ್ರ ಪರಿಹರಿಸಿ. ಸಾಲ ಮನ್ನಾ ವಿಷಯದಲ್ಲಿ ಸರ್ಕಾರಿ ನಿಗದಿ ಪಡಿಸಿರುವ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಹ ರೈತರಿಗೆ ಯೋಜನೆಯ ಲಾಭ ಒದಗಿಸಿ ಎಂದು ಹೇಳಿದರು. ಹಾಗೂ ಸಕರ್ಾರದ ಸಾಮಾಜಿಕ ಭದ್ರತಾ ಯೋಜನೆ ಮಾಸಾಶನ ಸೇರಿದಂತೆ ಅನೇಕ ಯೋಜನೆಗಳಿಗೆ ಆಧಾರ್ ಜೋಡಣೆ ಮಾಡಲಾಗುತ್ತದೆ. ಆಧಾರ್ ಜೋಡಣೆ ವಿಳಂಬದಿಂದ ಅಂಕಿ ಅಂಶ ಸಂಗ್ರಹಿಸುವಲ್ಲಿ ಸಾಕಷ್ಟು ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ಆಯಾ ಗ್ರಾಮ ಪಂಚಾಯತಿಗಳಲ್ಲಿ ಇರುವ ಕಿಯೋಸ್ಕಗಳ ಮೂಲಕ ಆಧಾರ್ ಜೋಡಣೆ ಮಾಡುವುದು ಅತ್ಯಂತ ಸುಲಭ ಮತ್ತು ತ್ವರಿತವಾಗಿ ಜೋಡಣೆ ಸಾಧ್ಯವಾಗುತ್ತದೆ ಎಂದರು.
ಜಿಲ್ಲೆಯ 333 ಗ್ರಾಮಗಳಲ್ಲಿ ಅಧಿಕೃತ ರುದ್ರಭೂಮಿಗಳಿಲ್ಲ ಎಂಬ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಯವರು ಇಷ್ಟೊಂದು ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲದಿರಲು ಸಾಧ್ಯವಿಲ್ಲ, ಜನಾಂಗವಾರು ತೆಗೆದುಕೊಂಡಾಗ ಈ ಸಮಸ್ಯೆ ಉದ್ಬವಿಸಬಹುದು. ಇದನ್ನು ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಮುಖ್ಯ ಮಂತ್ರಿಗಳ ಗ್ರಾಮವಿಕಾಸ ಯೋಜನೆಯಡಿ ಆಯ್ಕೆಯಾಗಿರುವ ಜಿಲ್ಲೆಯ 20 ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಕರ್ಾರ ನೀಡಿರುವ ಅನುದಾನವನ್ನು ವ್ಯವಸ್ಥಿತವಾಗಿ ಬಳಕೆ ಮಾಡಿ. ಅಭಿವೃದ್ಧಿ ಕಾಮಗಾರಿಯಲ್ಲಿ ವಿಳಂಬವಾದರೆ ಸಂಬಂಧಿಸಿದವರ ಮೇಲೆ ದಂಡ ವಿಧಿಸಿ ಎಂದರು. ಈ ಕಾಮಗಾರಿಗಳನ್ನು ಕೆಆರ್ಐಡಿಎಲ್ ಹಾಗೂ ಪಿಆರ್ಇಡಿ ನೀಡಲಾಗಿದೆ ಎಂದು ಉಪ ಕಾರ್ಯದಶರ್ಿ ತಿಳಿಸಿದರು. ಯಾವುದೇ ಕಾಮಗಾರಿಗಳನ್ನು ಸಕರ್ಾರಿ ಏಜೆನ್ಸಿಗಳಿಗೆ ವಹಿಸುವಾಗ ಅವರ ತಾಂತ್ರಿಕ ಸಿಬ್ಬಂದಿ, ಸಾಮಾಥ್ರ್ಯವನ್ನು ಆಧರಿಸಿ ನೀಡಬೇಕು. ಟೆಂಡರ್ಗಳಿಗೆ ಅವಕಾಶವಿದ್ದಾಗ ಟೆಂಡರ್ಗಳ ಮೂಲಕವೇ ಕಾಮಗಾರಿಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಮುದಾಯ ಶೌಚಾಲಯ, ವೈಯಕ್ತಿಕ ಶೌಚಾಲಯ ನಿಮರ್ಾಣ ವಿಷಯಗಳಲ್ಲಿ ನಿಗದಿತ ಅವಧಿಯೊಳಗೆ ಗುರಿ ಸಾಧನೆ ಮಾಡಬೇಕು. ವಸತಿ ಯೋಜನೆಯ ಕುರಿತು ಅರ್ಹ ಫಲಾನುಭವಿಗಳಿಗೆ ಈ ಪ್ರಕ್ರಿಯೆಯ ಮಾಹಿತಿ ಇರುವುದಿಲ್ಲ. ಆದ್ದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಸೌಲಭ್ಯವನ್ನು ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಸತಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಲು ಫಲಾನುಭವಿಗಳಿಗೆ ಉದ್ಬವಿಸುವ ಸಮಸ್ಯೆ, ತೊಂದರೆಗಳನ್ನು ನಿವಾರಿಸಲು ವಸತಿ ಸಹಾಯಕರನ್ನು ನೇಮಕ ಮಾಡಿದಲ್ಲಿ ತ್ವರಿತ ಅನುಷ್ಠಾನ ಸಾಧ್ಯವಾಗಲಿದೆ ಎನ್ನುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ತಿಳಿಸಿದರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಾ ಜೈನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ ಕ್ಷೀರಸಾಗರ, ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿದರ್ೇಶಕ ರವಿ ಬಿಸರಳ್ಳಿ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.