ಗದಗ 28: ಮಹಾತ್ಮಾ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಮಾನವ ದಿನಗಳನ್ನು ಸೃಜಿಸಿ ಕೂಲಿ ಪಾವತಿಗೆ ಅಗತ್ಯದ ಕ್ರಮ ಜರುಗಿಸಲು ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಅವರು ಸೂಚನೆ ನೀಡಿದರು.
ಗದಗ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು(ದಿ.28) ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಧ್ಯದಲ್ಲೇ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣಾ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಸ್ಥಗಿತಗೊಳ್ಳದಂತೆ ಸಂಬಂಧಿಸಿದವರಿಂದ ಅಗತ್ಯದ ಅನುಮತಿ ಪಡೆಯಬೇಕು. ರಾಜೀವ ಆವಾಸ ಯೋಜನೆಯಡಿ ಪಟ್ಟಣ ಪ್ರದೇಶಗಳಲ್ಲಿ ಅಗತ್ಯದ ಅನುದಾನ ಬಿಡಗುಡೆಗೆ ಶೀಘ್ರ ಕ್ರಮ ಜರುಗಿಸಬೇಕು. ಜಿಲ್ಲೆಯಲಿ ಸೋಲಾರ ಘಟಕಗಳು ಸ್ಥಾಪನೆಯಾಗುತ್ತಿದ್ದು ಇವುಗಳ ದುರಸ್ತಿ ಕುರಿತು ದೀನದಯಾಳ ಉಪಾದ್ಯಯ ಕೌಶಲ್ಯ ತರಬೇತಿ ನೀಡಬೇಕು. ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಕೇಮದ್ರವು ಅಗತ್ಯದ ಅನುದಾನ ಬಿಡುಗಡೆ ಮಾಡಿದ್ದು ಬೇಸಿಗೆ ಸಮಯದಲ್ಲಿ ಜನ ವಸತಿಗಳಿಗೆ ಕುಡಿಯುವ ನೀರಿನ ವ್ಯತ್ಯವಯವಾಗದಂತೆ ನಿಗಾ ವಹಿಸಬೇಕು. ವೃದ್ಯಾಪ, ವಿಧವಾ, ಅಂಗವಿಕಲ ವೇತನ ಹಾಗೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ನೀಡಲಾಗುತ್ತಿರುವ ವೇತನವನ್ನು ಫಲಾನುಭವಿಗಳ ಬ್ಯಾಂಕ ಖಾತೆಗೆ ಜಮೆಯಾಗುವಂತೆ ಕ್ರಮ ವಹಿಸಲು ಸೂಚಿಸಿದ ಸಂಸದರು ಸಮುದಾಯ ಶೌಚಾಲಯಗಳ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿ ಸ್ವಚ್ಛತೆಗೆ ತೆಗೆದುಕೊಂಡಂತಹ ಕ್ರಮಗಳ ಕುರಿತು ದಿಶಾ ಸಮಿತಿಗೆ ವರದಿ ನೀಡಲು ಸೂಚಿಸಿದರು. ನೀಡಿದರು. ಅಮೃತ ಯೋಜನೆಯಡಿ ನಗರ ಪ್ರದೇಶದಿಂದ ದೂರವಿರುವ ಪ್ರದೇಶಗಳಿಗೆ ಅಗತ್ಯದ ಸಾರಿಗೆ ವ್ಯವಸ್ಥೆ ಒದಗಿಸಬೇಕು. 14ನೇ ಹಣಕಾಸು ಯೋಜನೆಯಡಿ 6608.20 ಲಕ್ಷ ರೂ. ಅನುದಾನವಿದ್ದು 906 ಕಾಮಗಾರಿಗಳ ಪೈಕಿ 4942.59 ಲಕ್ಷ ವೆಚ್ಚದಡಿ ಒಟ್ಟು 794 ಕಾಮಗಾರಿಗಳು ಪೂರ್ಣಗೊಂಡಿದ್ದು ಬಾಕಿ ಉಳಿದ 112 ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಗ್ರಾಮ ಪಂಚಾಯತಗಳಿಗೆ ಬಿ.ಎಸ್.ಎನ್.ಎಲ್ ನಿಂದ ಒದಗಿಸಲಾದ ಸಂಪರ್ಕದಡಿ ಬಾಕಿ ಉಳಿದಿರುವ ಬಿಲ್ಲನ್ನು ಪಾವತಿಸಬೇಕು. ಸಂಪರ್ಕ ವ್ಯವಸ್ಥೆಯಲ್ಲಿ ತೊಂದರೆಯಿದ್ದರೆ ಅವುಗಳ ದುರಸ್ತಿಗೆ ಸಂಬಂಧಿಸಿದ ಗ್ರಾಮ ಪಂಚಾಯತಗಳು ಬಿ.ಎಸ್.ಎನ್.ಎಲ್. ಗೆ ಪತ್ರ ಬರೆಯಬೇಕು. ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಸ್ಥಳೀಯ ಸಂಸ್ಥೆ, ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಜಿ.ಪಂ. ಯೋಜನಾ ನಿದರ್ೇಶಕ ಟಿ. ದಿನೇಶ, ಯೋಜನಾಧಿಕಾರಿ. ಬಿ.ಆರ್.ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.