ಗದಗ 19: ರಾಜ್ಯದಲ್ಲಿನ ಮುಂಗಾರು ಬೆಳೆ ಹಾನಿ ವೀಕ್ಷಣೆಗೆ ಆಗಮಿಸಿರುವ ಕೇಂದ್ರ ತಂಡವಿಂದು ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿ, ಇಟಗಿ ಹಾಗೂ ಹೊಸಳ್ಳಿ ಗ್ರಾಮಗಳ ಜಮೀನುಗಳಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಪರಿಶೀಲಿಸಿತು.
ವಿಜಯಪುರ ಜಿಲ್ಲೆಯ ಆಲಮಟ್ಟಿಯಿಂದ ಆಗಮಿಸಿದ ಕೆಂದ್ರ ಅಧ್ಯಯನ ತಂಡದ ನೇತೃತ್ವವನ್ನು ಕೇಂದ್ರ ಕುಕ್ಕುಟ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ನಿದರ್ೇಶಕ ಡಾ. ಮಹೇಶ ವಹಿಸಿದ್ದು, ಸಿಡಬ್ಲುಸಿಯ ನಿದರ್ೇಶಕ ಡಾ. ಓ.ಆರ್.ಟಿ.ರೆಡ್ಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಧೀನ ಕಾರ್ಯದಶರ್ಿ ನೀತಾ ತೆಹಲ್ಲ್ಯಾನಿ ತಂಡದಲ್ಲಿದ್ದರು.
ರೋಣ ತಾಲೂಕಿನ ಸೂಡಿ ಗ್ರಾಮದ ಸುಶೀಲವ್ವ ಬಸಪ್ಪ ಹಾದಿಮನಿ ಇವರ ಸವರ್ೇ ಸಂಖ್ಯೆ 285/2ರ 3 ಎಕರೆ ಜಮೀನಿನಲ್ಲಿ ಉಳ್ಳಗಡ್ಡಿ ಬೆಳೆಹಾನಿ, ಇಟಗಿ ಗ್ರಾಮದ ಸಂಗಮೇಶ್ವರ ಬಸವರಾಜ ಸರದೇಸಾಯಿ ಅವರ ಒಂದುವರೆ ಎಕರೆ ಜಮೀನು ಸವರ್ೇ ಸಂಖ್ಯೆ 231ರಲ್ಲಿ ಶರಣಪ್ಪ ವಿರುಪಾಕ್ಷಪ್ಪ ಮೇಟಿ ಇವರ ಎರಡು ಎಕರೆ ಜಮೀನು ಸವರ್ೇ ಸಂಖ್ಯೆ 244/6ರಲ್ಲಿನ ಸೂರ್ಯಕಾಂತಿ ಬೆಳೆ ಹಾನಿ ಹೊಸಳ್ಳಿ ಗ್ರಾಮದ ಜಯಪ್ರಕಾಶ ಅಬ್ಬಿಗೇರಿ ಅವರ ಸವರ್ೆ ನಂಬರ 163/1ರಲ್ಲಿ ಸೂರ್ಯಕಾಂತಿ ಬೆಳ ಹಾನಿ ಕುರಿತು ವೀಕ್ಷಣೆ ಮಾಡಿ ರೈತರೊಂದಿಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿ ಅದರಿಂದ ರೈತ ಕುಟುಂಬಗಳ ಮೇಲಾಗುವ ಪರಿಣಾಮಗಳ ಕುರಿತು ಚಚರ್ೆ ನಡೆಸಿತು. ಈ ಸಂದರ್ಭದಲ್ಲಿ ಕೇಂದ್ರ ಕುಕ್ಕುಟ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ನಿದರ್ೇಶಕ ಡಾ. ಮಹೇಶ ಅವರು ಮಾತನಾಡಿ ಬೆಳೆ ಹಾನಿಯಿಂದಾಗಿ ಕುಸಿಯುತ್ತಿರುವ ರೈತರ ಆಥರ್ಿಕ ಪರಿಸ್ಥತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಅವರಿಗೆ ಪೂರಕ ಉದ್ಯೋಗಗಳ ಕುರಿತು ಮಾಹಿತಿ ನೀಡಿ ಅವರನ್ನು ಕೃಷಿಯೊಂದಿಗೆ ಪಶುಪಾಲನೆಯಂತಹ ಪೂರಕ ಉದ್ಯೂಗಗಳಲ್ಲಿ ತೋಡಿಗಿಸಿಕೊಳ್ಳಲು ಪ್ರೇರೆಪಿಸುವಂತೆೆ ಜಿಲ್ಲಾಡಳಿತಕ್ಕೆ ಸೂಚಿಸಿದರು.
ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಜಿ.ಪಂ. ಸಿಇಓ ಮಂಜುನಾಥ ಚವ್ಹಾಣ ರೈತರು ಮತ್ತು ಕೇಂದ್ರ ಅಧ್ಯನ ತಂಡಗಳ ನಡುವೆ ಸಂವಾದದಲ್ಲಿ ಭಾಗವಹಿಸಿ ಗದಗ ಜಿಲ್ಲೆಯ ಪ್ರಸಕ್ತ ಮುಂಗಾರು ಮಳೆ ಕೊರತೆ, ರೈತ ಹಾಗೂ ಕೃಷಿ ಕೂಲಿಕಾರರ ಆಥರ್ಿಕ ಹಾಗೂ ಸಾಮಾಜಿಕ ಸ್ಥಿತಿಯು ಕುಸಿಯುತ್ತಿರುವ ಕುರಿತು ಮನವರಿಕೆ ಮಾಡಿಕೊಟ್ಟರು.
ಸಂಸದರಾದ ಶಿವಕುಮಾರ ಉದಾಸಿ ಹಾಗೂ ರೋಣ ಶಾಸಕರಾದ ಕಳಕಪ್ಪ ಬಂಡಿಯವರು ಮಾತನಾಡಿ ಸರಕಾರದ ಮಾರ್ಗಸೂಚಿಗಳನ್ವಯ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದೆ. ಇದರಿಂದಾಗಿ ಆಥರ್ಿಕವಾಗಿ ಸಂಕಷ್ಕ ಸಿಲುಕಿದ ಸುಮಾರು 30 ಕ್ಕೂ ಹೆಚ್ಚು ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಜೊತೆಗೆ ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಕೇಂದ್ರ ಸರಕಾರವು ಬೆಳೆ ಪರಿಹಾರ ಜೊತೆಗೆ ಮಾನವ ಹಾನಿ ಹಾಗೂ ಜಾನುವಾರು ಹಾನಿಗಳಿಗೂ ಪರಿಹಾರ ನೀಡಬೇಕೆಂದು ಕೇಂದ್ರ ಬರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸಂಸದರು ನುಡಿದರು.
ಕೇಂದ್ರದ ತಂಡಕ್ಕೆ ಗಜೇಂದ್ರಗಡ ಪರಿವೀಕ್ಷಣಾ ಮಂದರಿದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಗದಗ ಜಿಲ್ಲೆ 2018 ರ ಮುಂಗಾರು ಮಳೆ ಕೊರತೆಯಿಂದ ಜಿಲ್ಲೆ ಸಂಕಷ್ಟಕ್ಕೀಡಾದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಕೃಷಿ ಇಲಾಖೆ ಜಂಟಿ ನಿದರ್ೇಶಕ ಬಾಲರೆಡ್ಡಿ, ತೋಟಗಾರಿಕೆ ಉಪನಿದರ್ೆಶಕ ಪ್ರದೀಪ, ರೋಣ ತಹಶೀಲ್ದಾರ ಅಜಿತ ಎಂ. ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿ ಕಂದಾಯ, ಕೃಷಿ , ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಜೊತೆಗಿದ್ದರು.