ಲೋಕದರ್ಶನ ವರದಿ
ರಾಮದುರ್ಗ12: ಪಟ್ಟಣದ ಸಮೀಪದ ತುರನೂರ ಗ್ರಾಮದ ಸಿದ್ದಲಿಂಗೇಶ್ವರ ನಗರದಲ್ಲಿ ಜೈ ಕನರ್ಾಟಕ ವೃದ್ಧಾಶ್ರಮ ಕಟ್ಟಡ ನಿಮರ್ಾಣಕ್ಕೆ ಸ್ಥಳೀಯ ಶ್ರೀಪತಿನಗರದ ಜಗದಾತ್ಮಾನಂದ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶ್ರೀಗಳು, ಶ್ರೀಪತಿ ನಗರದ ಸಿದ್ಧಾರೂಢ ಮಠದ ನೇತೃತ್ವದಲ್ಲಿ ಅನಾಥಾಶ್ರಮ ಪ್ರಾರಂಭಿಸಲಾಗಿದೆ. ತುರನೂರ ಗ್ರಾಮದಲ್ಲಿ ನಿಮರ್ಾಣವಾಗುತ್ತಿರುವ ವೃದ್ಧಾಶ್ರಮ ಅನಾಥ ವೃದ್ಧರಿಗೆ ಆಸರೆಯಾಗಿ, ದಯನೀಯ ಸ್ಥಿತಿಯಲ್ಲಿರುವ ವಯೋವೃದ್ಧರ ಜೀವನಕ್ಕೆ ದಾರಿದೀಪವಾಗಲಿದ್ದು, ಮಾನವೀಯತೆ ಮರೆಯುವ ಕಾರ್ಯಕ್ಕೆ ಸರ್ವರ ಸಹಕಾರ ಅಗತ್ಯವೆಂದರು.
ಜೈ ಕನರ್ಾಟಕ ಸೌಹಾರ್ದ ಸಹಕಾರಿ ಬ್ಯಾಂಕ ವ್ಯವಸ್ಥಾಪಕ ಶಿವಾನಂದ ಬರಗಿ, ಕಟ್ಟಡ ನಿಮರ್ಾಣಕ್ಕೆ ಜಾಗೆ ನೀಡಿ, ಕಟ್ಟಡ ನಿಮರ್ಾಣದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ತುರನೂರ ಗ್ರಾಮದ ಮುಖಂಡರಾದ ಕೆಂಪಣ್ಣ ಕ್ವಾರಿ, ಲಕ್ಕಪ್ಪ ಕ್ವಾರಿ, ಅಖಂಡಪ್ಪ ಒಡೆಯರ, ರಾಮದುರ್ಗ ಸಹಜ ಸ್ಥಿತಿ ಯೋಗ ಪ್ರತಿಷ್ಠಾನ ಕೇಂದ್ರದ ಸಂಚಾಲಕ ಸೋಮನಗೌಡ ಪಾಟೀಲ, ತಿಪ್ಪಣ್ಣ ಪೂಜೇರ, ಗಿರೀಶ ಪಾಟೀಲ, ಈರಣ್ಣ ಬಳ್ಳಾರಿ, ಕುಬೇರ ಗರಡಿಮನಿ ಸೇರಿದಂತೆ ಇತರರಿದ್ದರು.