ಕಾಗವಾಡ 06: ಕಾಗವಾಡ ವಿಧಾನಸಭಾ ಕ್ಷೇತ್ರದ ಮುಖ್ಯ ಗ್ರಾಮವಾಗಿದ್ದರೂ, ಈವರೆಗೆ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ದೊರೆತಿಲ್ಲಾ. ಈ ಮೊದಲು ರೂಪಿಸಿರುವ ಯೋಜನೆ ಕಳಪೆಮಟ್ಟದ್ದಾಗಿದ್ದರಿಂದ ಗ್ರಾಮೀಣ ಕುಡಿಯುವ ನೀರಿನ ಪುನಃಶ್ಚೇತನ ಯೋಜನೆ ಅಡಿಯಲ್ಲಿ ಇಲಾಖೆಯ ಸಚಿವರೊಂದಿಗೆ ಚಚರ್ಿಸಿ 2 ಕೋಟಿ ರೂ. ವಿಶೇಷ ಅನುದಾನ ಮಂಜೂರುಗೊಳಿಸಿಕೊಂಡಿದ್ದೇನೆ ಎಂದು ಶಾಸಕ ಶ್ರೀಮಂತ ಪಾಟೀಲರು ಹೇಳಿದರು.
ಮಂಗಳವಾರ ದಿ. 5ರಂದು ಕಾಗವಾಡದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ 'ಫ್ರೇಶರ್ ಫಿಲ್ಟರ್ ಯೋಜನೆಗೆ ಪೂಜೆ ಸಲ್ಲಿಸಿ, ಶಾಸಕ ಶ್ರೀಮಂತ ಪಾಟೀಲ ಮಾತನಾಡಿದರು.
ಈ ಮೊದಲು, ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಲ ಗ್ರಾಮ ಯೋಜನೆ ರೂಪಿಸಿದರು. ಆದರೆ ಜನರಿಗೆ ಇದರ ಸದುಪಯೋಗವಾಗಲಿಲ್ಲಾ. ನೀರಿನ ಸಮಸ್ಯೆ ಗಮನದಲ್ಲಿ ತಂದಾಗ ವಿಶೇಷ ಅನುದಾನ ಮಂಜೂರುಗೊಳಿಸಿಕೊಂಡಿದ್ದೇನೆ ಎಂದು ಹೇಳಿ, ಗ್ರಾಮದ ಜನರಿಗೆ ಸುಸ್ಥಿತಿಯಲ್ಲಿ ಯೋಜನೆ ರೂಪಿಸಿ ನೀರು ಪೂರೈಸಿರಿ ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಯನಿವರ್ಾಹಕ ಅಭಿಯಂತ ಎ.ಟಿ.ಅಸ್ಕಿ ಇವರು ಶಾಸಕರಿಗೆ ಯೋಜನೆ ಮಾಹಿತಿ ನೀಡಿ, ಈ ಮುಂದೆ 30 ವರ್ಷದ ವರೆಗೆ ತಲಾ 55 ಲೀಟರ್ ನೀರು ಪೂರೈಕೆವಾಗುವ ಸಂಪೂರ್ಣ ಯೋಜನೆ ಇಲ್ಲಿಗಿದೆ ಎಂದು ಭರವಸೆ ನೀಡಿದರು.
ಮಂಗಸೂಳಿ ಗ್ರಾಮದ ರೇಣುಕಾ ನಗರದಲ್ಲಿ 30 ಲಕ್ಷ ರೂ. ವೆಚ್ಚುಮಾಡಿ ನೀರಿನ ಸೌಕರ್ಯ ನೀಡುವ ಕಾಮಗಾರಿಗೆ ಚಾಲನೆ ನೀಡಿದರು.
ಕಾಗವಾಡ ಕ್ಷೇತ್ರದಲ್ಲಿ ಬೇಸಿಗೆ ಎದುರಿಸಲು ಸಿದ್ಧತೆ:
ಕಾಗವಾಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 55 ಕೊಳವೆಭಾವಿಗಳು ತೋಡಲಾಗಿದೆ. ಸುದೈವದಿಂದ ಎಲ್ಲ ಭಾವಿಗಳಿಗೆ ನೀರು ಲಭಿಸಿದೆ. ಅದರಂತೆ ಅವಶ್ಯಕತೆಯಲ್ಲಿರುವ ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ಕಾರ್ಯನಿವರ್ಾಹಕ ಅಭಿಯಂತ ಎ.ಟಿ.ಅಸ್ಕಿ ಶಾಸಕರಿಗೆ ಭರವಸೆ ನೀಡಿದರು.
ಕಾಗವಾಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಚೌಗುಲೆ, ತಾಪಂ ಸದಸ್ಯ ಸಂಭಾಜಿ ಪಾಟೀಲ, ಸುಧಾಕರ ಭಗತ, ಜ್ಯೋತಿ ದೇವಣೆ, ಜ್ಯೋತಿಕುಮಾರ ಪಾಟೀಲ, ನ್ಯಾಯವಾದಿಗಳಾದ ಅಮೀತ ಧೊಂಡಾರೆ, ಮಂಗಸೂಳಿಯ ಅಭಯ ಪಾಟೀಲ, ಆಮೀರ ಶೇಖ, ಪುಂಡ್ಲಿಕ್ ಪಾಟೀಲ, ಚಂದರ ಪಿಂಜಾರೆ, ಸಾವಂದ ಆದುಕೆ, ಬಂಡು ಪಾಟೀಲ, ಪಿಡಿಒ ಸಂತೋಷ ಸನದಿ, ಗ್ರಾಪಂ ಸದಸ್ಯರು, ದಲಿತ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.