ಗದಗ 20: ಗದಗ ಜಿಲ್ಲೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ವಿವಿಧ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳ ವಿದ್ಯಾಥರ್ಿಗಳಿಂದ ಪ್ರಭಾತಪೇರಿ ಕಾರ್ಯಕ್ರಮ ಏರ್ಪಡಿಸಲಾಯಿತು. ಸದರಿ ಕಾರ್ಯಕ್ರಮಕ್ಕೆ ವಿಧಾನ ಪರಿಷತ ಸದಸ್ಯರಾದ ಎಸ್. ವಿ. ಸಂಕನೂರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಹಾಗೂ ಕಾಲೇಜಿನ ವಿದ್ಯಾಥರ್ಿಗಳಿಗೆ ಸ್ವಚ್ಚತೆಯ ಕುರಿತು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಗದಗ ಜಿಲ್ಲೆ "ಬಯಲು ಬಹಿದರ್ೇಸೆ ಮುಕ್ತ" ಜಿಲ್ಲೆಯಾಗಿದ್ದು ಎಲ್ಲರು ಶೌಚಾಲಯವನ್ನು ಬಳಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಘನ, ದ್ರವ್ಯ ತ್ಯಾಜ್ಯ ವಸ್ತುಗಳ ವಿಲೇವಾರಿ ಕುರಿತು ಸಮರ್ಪಕವಾಗಿ ಎಲ್ಲರ ಜವಬ್ದಾರಿಯೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಮಂಜುನಾಥ ಚವ್ಹಾಣ ಉಪಕಾರ್ಯದಶರ್ಿಗಳಾದ ಎಸ್. ಸಿ. ಮಹೇಶ ಸಹಾಯಕ ಕಾರ್ಯದಶರ್ಿಗಳಾದ ಸಿ. ಆರ್. ಮುಂಡರಗಿ ಹಾಗೂ ಗದಗ ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿಗಳಾದ ಡಾ. ಹೆಚ್. ಎಸ್. ಜನಗಿ ಹಾಗೂ ಸ್ವಚ್ಚ ಭಾರತ ಮಿಷನ್ ಜಿಲ್ಲಾ ಸಮಾಲೋಚಕರಾದ ಕೃಷ್ಣಾ. ಎಲ್. ದೊಡ್ಡಮನಿ, ಹೆಚ್. ಎಫ್. ಕುಸಣ್ಣವರ ಹಾಗೂ ಸುರೇಶ ಕಪ್ಪತ್ತನವರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಖೆ ಹಾಗೂ ಜಿಲ್ಲಾ ಎನ್.ಎಸ್.ಎಸ್ ನೂಡಲ್ ಅಧಿಕಾರಿಗಳು ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿಗಳು ಪ್ರಭಾತಪೇರಿ ಏರ್ಪಡಿಸಿದ ಎಲ್ಲಾ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು. ಪ್ರಭಾತಪೇರಿಯು ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗಿ ಕೀತ್ತೂರ ಚನ್ನಮ್ಮರಾಣಿ ರಸ್ತೆ ಮಾರ್ಗವಾಗಿ ಗಾಂಧಿ ಸರ್ಕಲ್, ಟಾಂಗಾಕೂಟ್, ಬಸವೇಶ್ವರ ಸರ್ಕಲ್ ಹಾಗೂ ಕೆ.ಹೆಚ್.ಪಾಟೀಲ್ ಸರ್ಕಲ್ ಭೂಮರೆಡ್ಡಿ ಸರ್ಕಲ್ ಮಾರ್ಗವಾಗಿ ಸ್ವಚ್ಚ ಅಭಿಯಾನದ ಶೌಚಾಲಯ ಬಳಕೆ, ಗ್ರಾಮೀಣ ಪ್ರದೇಶದಲ್ಲಿ ಸುಚಿತ್ವ ಕಾಪಾಡುವ ಬಗ್ಗೆ ಘೋಷಣೆ ಕೂಗುತ್ತಾ ಜಿಲ್ಲಾ ಕ್ರೀಡಾಂಗಣದವರೆಗೆ ಬಂದು ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.