ಅದ್ದೂರಿ ಮರೆವಣಿಗೆಗೆ ಚಾಲನೆ

ಚನ್ನಮ್ಮನ ಕಿತ್ತೂರು, 27: ಕಿತ್ತೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅಂಬಡಗಟ್ಟಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ಸಮ್ಮೇಳನ ಸವರ್ಾಧ್ಯಕ್ಷರ ಮತ್ತು ತಾಯಿ ಭುವನೇಶ್ವರಿ ಮತ್ತು ದಿ.ಜಚನಿಯವರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಸಮ್ಮೇಳನದ ಸವರ್ಾದ್ಯಕ್ಷರಾದ ಲೇಖಕಿ ಸುನಂದಾ ನಾಗೇಶ ಎಮ್ಮಿಯವರನ್ನು ಮತ್ತು ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟ್ಟಗುಡ ಅವರನ್ನು ಅಲಂಕೃತ ಸಾರೋಟದಲ್ಲಿ ಅದ್ದೂರಿ ಮೆರವಣಿಗೆ ಮುಖಾಂತರ ಘೋಷಣೆ ಕೂಗುತ್ತಾ ವಿಶೇಷ ಗೌರವ ಸಲ್ಲಿಸಿ ಸಮ್ಮೇಳನದ ವೇದಿಕೆಗೆ ಕರೆತರಲಾಯಿತು.

ಮೆರವಣಿಗೆಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರ ಸೇರಿದಂತೆ ವಿವಿಧ ಮಹಾನ ವ್ಯಕ್ತಿಗಳ ರೂಪಕಗಳು ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಬ್ರಮದಿಂದ ಸಾಗಿತು.

ಮೆರವಣಿಗೆಯೂದಕ್ಕೂ ಕನ್ನಡ ಧ್ವಜಗಳ ಹಾರಾಟ ಮತ್ತು ಬಸವ ಪ್ರೀಯ ಶರಣ ಬಳಗ ಜಾಂಜ್ ಪಥಕ ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಸೌಂಡ ಸಿಸ್ಟಮ್, ಡೊಳ್ಳು, ಭಜನೆ, ಕಹಳೆ, ವಾಧ್ಯ ಮೇಳ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು  ಜತೆಗೆ ಶಾಲಾ ವಿದ್ಯಾಥರ್ಿಗಳು ಮೆರವಣಿಗೆಯಲ್ಲಿ ಕನ್ನಡ ಧ್ವಜಗಳನ್ನು ಹಿಡಿದು ಜಯ ಘೋಷಗಳನ್ನು ಕೂಗುತಾ ಸಾಗಿದರು. ಮೆರವಣಿಗೆ ಮುಂದೆ ಸಾಗಿ ಬರುತ್ತಿದಂತೆ ರಥದ ಮುಂದೆ ನೀರು ಹಾಕಿ ಗೌರವ ಸಲ್ಲಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿಮರ್ಾಣವಾಗಿ ತಳಿರು ತೋರಣ ಕಟ್ಟಿ ಮನೆಗಳ ಮುಂದೆ ರಂಗೋಲಿ ಹಾಕಿ ಗ್ರಾಮದ ವಿವಿಧ ಬೀದಿಗಳಲ್ಲಿ ಕನ್ನಡದ ಧ್ವಜಗಳನ್ನು ಕಟ್ಟಿ ಕನ್ನಡದ ಕಂಪು ಹರಡಿಸುವ ಕೆಲಸ ಗ್ರಾಮಸ್ಥರಿಂದ ನಡೆಯುತು.

ಸತೀಶಣ್ಣಾ ಜಾರಕಿಹೊಳಿ ಕಲ್ಯಾಣ ಮಂಟಪದಲ್ಲಿ ನಡೆಯುವ ಈ ಸಮ್ಮೇಳದ ಪರಿಷತ್ತಿನ ಧ್ವಜಾರೋಹಣ ಬೆಳಿಗ್ಗೆ 7.30ಕ್ಕೆ  ಕಸಾಪ  ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಅವರು ನರವೇರಿಸಿದರು. 8ಕ್ಕೆ ಗ್ರಾಮದ ಸ್ವಾತಂತ್ರ ಯೋಧರಾದ ಪಾರ್ವತೆವ್ವಾ  ಕೇರಿಮಠ ಅವರು ರಾಷ್ಟ್ರಧ್ವಜ ನೆರವೇರಿಸಿದರು. ನಾಡಧ್ವಜಾರೋಹಣವನ್ನು  ತಾಲೂಕಾ ಕಸಾಪ ಅಧ್ಯಕ್ಷ ಶೇಖರ ಹಲಸಗಿ ನೆರವೇರಿಸಿದರು. 8.30ಕ್ಕೆ  ಡಾ. ಜಚನಿ ಅವರು ಜನಿಸಿದ ಮನೆ ಮುಂಭಾಗದಿಂದ ಭುವನೇಶ್ವರಿದೇವಿಗೆ  ಪೂಜೆ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ  ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮೆರವಣಿಗೆ ಚಾಲನೆ ನೀಡಿದರು. 

ಗ್ರಾ ಪಂ ಅಧ್ಯಕ್ಷೆ ಕೌಸರಬಾನು ಮುಲ್ಲಾ, ಲಯನ್ಸ್ ಕ್ಲಬ್ ಅಧ್ಯಕ್ಷ ಹಬೀಬ ಶಿಲೇದಾರ, ಕಸಾಪ ತಾಲೂಕು ಅಧ್ಯಕ್ಷ ಶೇಖರ ಹಲಸಗಿ, ಜಿಲ್ಲಾ ಪಂಚಾಯತಿ ಸದಸ್ಯೆ ರಾಧಾ ಶ್ಯಾಮ ಕಾದ್ರೋಳಿ, ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಕಲ್ಮಠ, ತಾಲೂಕು ಪಂಚಾಯತಿ ಸದಸ್ಯ ಮಹಾದೇವ ಹಿತ್ತಲಮನಿ, ಪಿಕೆಪಿಎಸ್ನ ನಿದರ್ೇಶಕ ಅದೃಶಗೌಡ ಪಾಟೀಲ ಇತರರು ಇದ್ದರು. ವಿವಿಧ ಕನ್ನಡ ಪರ ಮತ್ತು ಮಹಿಳಾ ಸಂಘಟನೆಗಳ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದರು.