ಗದಗ 15: ವಿಶ್ವ ಶೌಚಾಲಯ ದಿನಾಚರಣೆ-2018ರ ಪ್ರಯುಕ್ತ ಗದಗ ಜಿಲ್ಲಾಡಳಿತ ಭವನದಲ್ಲಿಂದು ಸ್ವಚ್ಛತಾ ರಥಕ್ಕೆ ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಪಿ. ಬಳಿಗಾರ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಸ್ವಚ್ಛತಾ ರಥವು ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸಂಚರಿಸಲಿದ್ದು ಗ್ರಾಮೀಣ ಪ್ರದೇಶದ ಕ್ಷೇತ್ರ ಮಟ್ಟದಲ್ಲಿ ಹಾಗೂ ಶಾಲಾ ಮಕ್ಕಳಲ್ಲಿ ನೈರ್ಮಲ್ಯದ ಅಭ್ಯಾಸಗಳನ್ನು ರೂಡಿಸುವ ಸಲುವಾಗಿ ಸ್ವಚ್ಛ ಭಾರತ ಮಿಷನ್ ಜನಾಂದೋಲನವನ್ನು ತೀವ್ರಗೊಳಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ದಿ. 16ರಂದು ಶಾಲಾ ಮಕ್ಕಳಿಂದ ಜಾಥಾ, ಪ್ರಬಂಧ, ಚಚರ್ಾ ಸ್ಪಧರ್ೆಗಳನ್ನು ದಿ. 17 ರಂದು ಸೈಕಲ್ ಜಾಥಾ, ದಿ. 18ರಂದು ಮನೆ ಮನೆಗೆ ಭೇಟಿ ಕಾರ್ಯಕ್ರಮ, ದಿ. 19ರಂದು ಮೇಣದ ಬತ್ತಿ ಜಾಥಾ ಹಾಗೂ ಸ್ವಚ್ಛತಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.