ಲೋಕದರ್ಶನ ವರದಿ
ತಾಳಿಕೋಟೆ 04: ಗ್ರಾಮಗಳ ಅಭಿವೃದ್ದಿ ಹೊಂದಬೇಕಾದರೆ ಜನಪ್ರತಿನಿಧಿಗೊಳೊಂದಿಗೆ ಪಕ್ಷ ಬೇಧ ಮರೆತು ಸಹಕರಿಸಿದಾಗ ಗ್ರಾಮಗಳು ಅಭಿವೃದ್ದಿಹೊಂದಲು ಸಾಧ್ಯವಾಗುತ್ತದೆ ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ನುಡಿದರು.
ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ವಿಜಯಪುರ ವತಿಯಿಂದ 2017-18 ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ(ಎಸ್.ಸಿ.ಪಿ) ದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿಸಂಸ್ಕೃತಿಕ ಭವನ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಮಾಡುವದು ಸಲ್ಲದು ಇಂಗಳಗೇರಿ ಗ್ರಾಮದಲ್ಲಿ ಸಂಸ್ಕೃತಿಕ ಭವನ ನಿಮರ್ಾಣಕ್ಕೆ ಭೂಮಿಯನ್ನು ದಾನ ಮಾಡಿದ ಗುರುಪಾದಪ್ಪ ಸಜ್ಜನ ಅವರ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು ಉರಿ ದಾಳಿಯ ನಂತರ ನಮ್ಮ ವಾಯು ಸೇನೆಯ ಸೈನಿಕರು ಏರಸ್ಟ್ರೈಕ್ ದಾಳಿಯ ಮೂಲಕ 350 ಕ್ಕೂ ಹೆಚ್ಚು ಉಗ್ರರನ್ನು ಪಾಕ್ ಗಡಿಯೊಳಗೆ ನುಗ್ಗಿ ಸಂಹಾರ ಮಾಡಿದ್ದಾರೆ ನಮ್ಮ ದೇಶದ ಸೈನಿಕರಿಗೆ ಎಲ್ಲ ರೀಯಿಂದಲೂ ಬದ್ರತೆಯನ್ನು ಒದಗಿಸಿದ್ದಾರೆಂದ ಅವರು ದೇಶದ ಅಭಿವೃದ್ದಿ ದೃಷ್ಠಿಯಿಂದ ಮತ್ತು ದೇಶದ ಬದ್ರತೆ ಗೋಸ್ಕರ್ ಮತ್ತೋಮ್ಮೆ ಮೋದಿ ಪ್ರಧಾನಿಯಾಗುವದು ಅತ್ಯವಶ್ಯಕವಾಗಿದೆ ಈ ದೃಷ್ಠಿಯಿಂದ ಎಲ್ಲರೂ ದೇಶದ ಭದ್ರತೆ ಕಾಯ್ದುಕೊಳ್ಳುವ ಕೋಸ್ಕರ ಹಾಗೂ ದೇಶದ ಅಭಿವೃದ್ದಿ ಗೋಸ್ಕರ್ ಮೋದಿ ಅವರನ್ನು ಬೆಂಬಲಿಸುವಂತಹ ಕಾರ್ಯ ಮಾಡಬೇಕಾಗಿದೆ ಇಂಗಳಗೇರಿ ಗ್ರಾಮದ ರಸ್ತೆ, ಚರಂಡಿ ಒಳಗೊಂಡಂತೆ ಅನೇಕ ಅಭಿವೃದ್ದಿ ಕಾರ್ಯಗಳಿಗೆ ಬದ್ದನಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾರ್ಯವನ್ನು ಕೈಗೊಳ್ಳಲಾಗುವದೆಂದರು
ಇದೇ ಸಮಯದಲ್ಲಿ ಸಂಸ್ಕೃತಿಕ ಭವನ ನಿಮರ್ಾಣಕ್ಕೆ ಜಾಗೆ ದಾನ ನೀಡಿದ ಗುರುಪಾದಪ್ಪ ಸಜ್ಜನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಮಲಕೇಂದ್ರಾಯಗೌಡ ಪಾಟೀಲ, ಹೇಮರಡ್ಡಿ ಮೇಟಿ, ಗ್ರಾಂ.ಪಂ.ಅಧ್ಯಕ್ಷ ರಾಜು ಕರಡ್ಡಿ, ಬಸನಗೌಡ ಬಿರಾದಾರ, ಗುರಲಿಂಗಯ್ಯಮುತ್ಯಾ, ನಿಮರ್ಿತಿ ಕೇಂದ್ರದ ಕಿರಿಯ ಅಭಿಯಂತರ ಡಾ.ತಿವಾರಿ, ಇಂಗಳಗೇರಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.