ಲೋಕದರ್ಶನ ವರದಿ
ಹುಕ್ಕೇರಿ 11: ಹಲವಾರು ಪಾಲಕರ ಆಥರ್ಿಕ ಬಿಕ್ಕಟ್ಟು ಹಾಗೂ ನಿರ್ಲಕ್ಷತೆಯಿಂದಾಗಿ ಇಂದು ಮಕ್ಕಳು ಹಲವಾರು ರೋಗಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರಕಾರ 1 ರಿಂದ 10 ನೇ ತರಗತಿಯ ವಿದ್ಯಾಥರ್ಿಗಳಿಗಾಗಿ ವಿನೂತನ ವಿಶೇಷ ಶಾಲಾ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ಗಂಟಲುಮಾರಿ, ನಾಯಿ ಕೆಮ್ಮು ಹಾಗೂ ಧನುವರ್ಾತ ಮುಂತಾದವುಗಳಿಗೆ ತಡೆ ನೀಡಲು ಲಸಿಕೆ ನೀಡಲಾಗುತ್ತಿದೆ.
ಬೆಳಗಾವಿ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನಗರದ 1808 ವಿದ್ಯಾಥರ್ಿಗಳಿಗೆ ಲಸಿಕೆ ನೀಡುವ ಗುರಿಯಿರುವದಾಗಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಸಂಜಯ ದೊಡಮನಿ ತಿಳಿಸಿದ್ದಾರೆ.
ಬುಧವಾರ ದಿ. 11 ರಂದು ನಗರದ ಗಜಬರವಾಡಿ ಸರಕಾರಿ ಉದರ್ು ಶಾಲೆ, ಜಾಬಾಪೂರ, ಕೋಟೆ ಭಾಗ ಹಾಗೂ ಸೀಡಫಾರ್ಮ ಸರಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲಾ ಮಕ್ಕಳಿಗೆ ಲಸಿಕೆ ನೀಡಲಾಯಿತು. ಈ ಅಭಿಯಾನ ದಿ. 11 ರಿಂದ 31 ಡಿಶೆಂಬರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಸರ್ಿಂಗ ಅಧಿಕಾರಿಗಳಾದ ವಿಜಯಕುಮಾರ ಕುಂಬಾರ, ಉದಯ ಹಜಾರೆ, ಪ್ರಭಾರಿ ಮುಖ್ಯೋಪಾಧ್ಯಾಯ ಮಹ್ಮದಯುಸುಫ ಕಾರದಗಾರಿ, ಶಿಕ್ಷಕ ಬಿ.ಎಮ್.ಗೊಟ್ಟಯ್ಯನವರ, ಎಮ್.ಟಿ.ಬಾಗಲಕೋಟಿ, ನಿಂಗಪ್ಪ ಪಾಟೀಲ ಉಪಸ್ಥಿತರಿದ್ದರು.