ರಂಗಾಂತರಂಗ ನಾಟಕಕ್ಕೆ ಚಾಲನೆ

Drive to drama

ರಂಗಾಂತರಂಗ ನಾಟಕಕ್ಕೆ ಚಾಲನೆ  

ಧಾರವಾಡ 16: ರಂಗಾಯಣ ಧಾರವಾಡವು ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ “ರಂಗಾಂತರಂಗ-2025” ಬಹುಭಾಷಾ ನಾಟಕೋತ್ಸವ”ದ ನಾಟಕಕ್ಕೆ ಸಾಹಿತಿಗಳಾದ ಹೇಮಾ ಪಟ್ಟಣಶೆಟ್ಟಿ ಅವರು ಚಾಲನೆ ನೀಡಿದರು. ರಂಗಾಯಣ ನಿರ್ದೇಶಕರಾದ ಡಾ.ರಾಜು ತಾಳಿಕೋಟಿ ಅವರು ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ನಾಟಕ ತಂಡದ ಕೃಷ್ಣನ್ ಉಪಸ್ಥಿತರಿದ್ದರು. ನಂತರ ಪದ್ಮಶ್ರೀ ಕಾವಾಲಂ ನಾರಾಯಣ ಪಣಿಕ್ಕರ್ ಅವರು  ರಚಿಸಿ ನಿರ್ದೇಶಿಸಿದ ಮಲೆಯಾಳಂ ನಾಟಕ “ಕಲಿವೇಷಂ” ನಾಟಕವನ್ನು ಕೇರಳದ ಸೋಪಾನಂ ರಂಗ ತಂಡದವರು ಪ್ರಸ್ತುತಪಡಿಸಿದರು. ಮಹಾರಾಷ್ಟ್ರದ ಅಭಿರುಚಿ ಕೊಲ್ಲಾಪುರ ತಂಡ “ಶ್ವೇತವರ್ಣಿ ಶಾಮಕರ್ಣಿ” (ಮರಾಠಿ ಭಾಷೆ) ನಾಟಕವನ್ನು ಪ್ರದರ್ಶಿಸಲಿದ್ದಾರೆ.  ನಾಟಕದ ಕುರಿತು: “ಕಲಿವೇಷಂ” ಪ್ರಸಿದ್ಧ ಕಥಕ್ಕಳಿ ಕಥೆ “ನಳಚರಿತಂ” ಆಧರಿತವಾದುದು. ಇದರಲ್ಲಿ ನಾಯಕನಾದ ನಳ ಕಲಿಯ ಮೇಲೆ ಹಿಡಿತ ಸಾಧಿಸುತ್ತಾನೆ. ‘ಕಲಿ’ಯಂತಹ ಖಳನಾಯಕನ ಪಾತ್ರವನ್ನೇ ಕಥಕ್ಕಳಿ ಆಟದಲ್ಲಿ ನಿರ್ವಹಿಸುವ ನಟನಿಗೂ ಕೂಡಾ ಯುಧಿಷ್ಠಿರ ಮುಂತಾದ ಘನವಾದ ಸಾತ್ವಿಕ ಪಾತ್ರಗಳನ್ನು ಮಾಡುವ ಆಸೆಯಿದ್ದರೂ ಅವಕಾಶವೇ ಸಿಗದ ನಟ. ನಳ ಮತ್ತು ಕಲಿಯೊಂದಿಗೆ ಮುಖಾಮುಖಿಯಾಗಿ ನಟನ ಅಸ್ಮಿತೆಯ ಹುಡುಕಾಟವನ್ನು ನಾಟಕ ಬಿಂಬಿಸುತ್ತದೆ.