ರಾಷ್ಟ್ರೀಯ ಸೇವಾ ಯೋಜನೆ ಶಿಬಿರಕ್ಕೆ ಚಾಲನೆ
ಯಮಕನಮರಡಿ 16: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ ಹಾಗೂ ಯಮಕನಮರಡಿ ವಿದ್ಯಾವರ್ದಕ ಸಂಘ ಕಲಾ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರದಲ್ಲಿ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯನ್ನು ದಿ. 16 ರಂದು ಶಾಲಾ ಆವರಣದ ಸಮುದಾಯಭವನದಲ್ಲಿ ಚಾಲನೆ ನಿಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯ ವಿ ಸಂಘದ ಜೆ ಎನ್ ಅವಾಡೆ ಹಾಗೂ ಪ್ರಾಚಾರ್ಯರಾದ ಡಾ: ಶ್ರೀ. ಎ ಎಸ್ ಗುತ್ತಿ ಉಪಸ್ಥಿತರಿದ್ದು ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರಾದ ಗೋಪಾಲ ಚಪಣಿರವರು ಉಪಸ್ಥಿತರಿದ್ದು ಸಸಿಗೆ ನೀರುಣಿಸುವುದರೋಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳು ನಾಳಿನ ಪ್ರಜೆಗಳಾಗಿ ಹೋರಹೋಮ್ಮ ಬೇಕು ಜೋತೆಗೆ ರಾಷ್ಟ್ರೀಯ ಸೇವಾ ಶಿಭಿರದಲ್ಲಿ ಪಾಲ್ಗೋಂಡು ಸ್ವಚ್ಚತೆ ಆರೋಗ್ಯ ಜೋತೆಗೆ ಪ್ರತಿಯೋಬ್ಬರು ರಾಷ್ಟ್ರೀಯ ಸೇವಾ ಯೋಜನೆಯೊಂದಿಗೆ ಹೆತ್ತವರ ಸೇವೆಯನ್ನು ಮಾಡುವುದನ್ನು ಮರೆಯವಬಾರದು. ಎಂದು ಹೆಳುತ್ತಾ ವಿದ್ಯಾರ್ಥಿಗಳು ವೈಕ್ತಿತ್ವ ವಿಕಸನ ಹೊಂದುವುದರ ಜೋತೆಗೆ ತಾವುಗಳು ಕಲಿತ ಶಾಲೆಗೂ ಶಿಕ್ಷಕರಿಗೂ ಕೀರ್ತಿ ತರಬೇಕು ನಾಳೆ ತಾವುಗಳು ರಾಷ್ಟ್ರ ಸೇವೆ ಯಲ್ಲಿಯೂ ಪಾಲ್ಗೊಳ್ಳಲು ಮುಂದಾಗಬೇಕು ತಮ್ಮ ಮನಸ್ಸನ್ನು ಏಕಾಗ್ರತೆ ಗೋಳಿಸಕೋಳ್ಳಬೆಕಾದರೆ ಪ್ರತಿದಿವಸ ಅರ್ದ ಗಂಟೆ ಕಾಲ ಜಾಣಪದ ಸಂಗಿತ ಇತ್ಯಾದಿಗಳನ್ನು ಅಳವಡಿಸಕೊಳ್ಳಬೆಕೆಂದು ಹೆಳಿದರು.
ಸಂಸ್ಥೆಯ ಕಾರ್ಯದರ್ಶಿ ಜೆ ಎನ್ ಅವಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಚಾರ್ಯ ಎ ಎಸ್ ಗುತ್ತಿ ರವರು ವಿದ್ಯಾರ್ಥಿಗಳ ಚಟುವಟಿಕೆಯ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ವ್ಹಿ.ಜೆ ಮೇದಾರ ಉಪಸ್ಥಿತರಿದ್ದರು. ಶಿಬಿರದಲ್ಲಿ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಇವರಿಗೆ ಪ್ರತಿನಿತ್ಯ ಸೇವಾ ಶಿಬಿರದ ಮಾಹಿತಿಯನ್ನು ತಿಳಿಸಿಕೊಡಲಾಗುವಿದೆಂದು ಯೋಜನಾಧಿಕಾರಿ ಹೆಳಿದರು.