ಜಗದ್ಗುರು ಫಕ್ಕೀರೇಶ್ವರರ ಜಾತ್ರಾ ಕಾರ್ಯಕ್ರಮಗಳಿಗೆ ಚಾಲನೆ


ಲೋಕದರ್ಶನ ವರದಿ:

ಶಿರಹಟ್ಟಿ : ಅನೇಕ ವಿಶಿಷ್ಟತೆಗಳನ್ನು ಹೊಂದಿದ ಹಿಂದು-ಮುಸ್ಲೀಂ ಭಾವೈಕತೆಯಿಂದ ಕೂಡಿದ ಸರ್ವ ಧರ್ಮ ಸಮನ್ವಯಾಚಾರ್ಯ ಜಗದ್ಗುರು ಫಕೀರೇಶ್ವರರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಿಗೆ 13ನೇ ಪಟ್ಟಾಧ್ಯಕ್ಷ ಸಿದ್ದಾರಾಮೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.

  ಜಾತ್ರಾ ಮಹೊತ್ಸವದ ಮೊದಲ ದಿನ ಶ್ರೀಗಳು ಭಕ್ತರ ಸಮ್ಮುಖದಲ್ಲಿ ಶ್ರೀ ಜಗದ್ಘುರು ಫಕ್ಕೀರೇಶ್ವರರ ಕತೃ ಗದ್ದುಗೆಗೆ ಪೂಜೆ ಸಲ್ಲಿಸಿ ಸಕಲ ವಾಧ್ಯ ಮೇಳ ಹಾಗೂ ಸಾಂಪ್ರದಾಯಕ ವೈಭವದೊಂದಿಗೆ ಅಶ್ವಾ ರೂಢರಾಗಿ ಊರಿಂದ ಪಯಣ ಬೆಳಸಿದರು. ಇದು ಈ ಮಠದ ಸಂಪ್ರದಾಯವಾಗಿದ್ದು ಮಹಾಸ್ವಾಮಿಗಳು ಮಠದಿಂದ ಪಯಣ ಬೆಳಸಿದ ಮೇಲೆ ಭಕ್ತರೆಲ್ಲರೂ ಸೇರಿ ತೇರಿಗೆ ಸಾಯಂಕಾಲ ಕಳಸಾರೋಹಣ ಮಾಡಿ ತಮ್ಮನ್ನು ತಾವು ಜಾತ್ರೇಯ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಳ್ಳುವರು. ಮರಳಿ ಇದೆ ತಿಂಗಳ 18ರ ಆಗಿ ಹುಣ್ಣಿಮೆಯಂದು ನಡೆಯೂವ ಜಾತ್ರೇಯ ದಿನದಂದೆ ಮಹಾಸ್ವಾಮಿಗಳು ಪುರ ಪ್ರವೇಶ ಮಾಡುವರು. 

ಈ ಮಧ್ಯದ ದಿಗಳಲ್ಲಿ ಶ್ರೀಗಳು ಸುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಗ್ರಾಮಸ್ಥರಿಗೆ ಜಾತ್ರೇಯ ಆಮಂತ್ರಣ ನೀಡುವರು. ಈ ವೇಳೆ ಜನರು ಶ್ರೀಗಳಿಗೆ ಪಾದಪೂಜೆ ಮಾಡಿ ದಾನ-ಧರ್ಮ ಮಾಡುವದರೊಂದಿಗೆ ಆಶೀವರ್ಾದ ಪಡೆಯುವರು.

 ಈ ವೇಳೆ ಡಿ.ಎನ್.ಡಬಾಲಿ, ವಾಯ್.ಎಸ್.ಪಾಟೀಲ್, ಹುಮಾಯೂನ ಮಾಗಡಿ, ಚಂದ್ರಕಾಂತ ನೂರಶೇಟ್ರ, ಬಸವಣ್ಣೆಪ್ಪ ತುಳಿ, ಅಜ್ಜು ಪಾಟೀಲ್, ಎಮ್.ಸಿ.ಹಿರೇಮಠ, ಪಿ.ವಿ.ಪರಬ, ಬಿ.ಎಸ್.ಹಿರೇಮಠ, ಶೌಕತಲಿ ಮನಿಯಾರ, ಬಾಬು ಪಾಟೀಲ್, ಅರ್ಶದಲಿ ಢಾಲಾಯತ, ಬಸವರಾಜ ಬೋರಶೇಟ್ಟರ, ಮುಂತಾದವರು ಇದ್ದರು. 

ವಾಯ್.ಎಸ್.ಪಾಟೀಲ್.( ಮಠದ ಭಕ್ತರು.)

ಶ್ರೀಗಳ ಅನುಪಸ್ಥಿತಿಯಲ್ಲಿ ಅವರ ಕೃಪಾಶಿವರ್ಾದದಿಂದ ಜಾತ್ರೆಗೆ ಬೇಕಾಗುವ ಸಕಲ ತಯಾರಿಯನ್ನು ಊರಿನ ಭಕ್ತರೇ ಮಾಡಿಕೊಂಡು,  ಶ್ರೀಗಳನ್ನು ಜಾತ್ರೆಯ  ದಿನದಂದೆ ಬರಮಾಡಿಕೊಂಡು ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜಾತ್ರೇ ಜರುಗುವದು ಫಕ್ಕೀರೇಶ್ವರ ಮಠದ ವಿಶೇಷತೆ ಹಾಗೂ ಸಂಪ್ರದಾಯವಾಗಿದೆ.

ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ