ಧಾರವಾಡ ಸಾಂಸ್ಕೃತಿಕ ಜನೋತ್ಸವಕ್ಕೆ ಚಾಲನೆ

ಧಾರವಾಡ/ಹುಬ್ಬಳ್ಳಿ 22: ನಾವಿಂದು ಕರಾಳ ಪರಿಸ್ಥಿತಿಯಲ್ಲಿದ್ದೇವೆ. ಜನರ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಆಳುವವರು ಬಡತನ, ನಿರುದ್ಯೋಗ, ಬೆಲೆಯೇರಿಕೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಮುಂತಾದ ನೈಜ ಸಮಸ್ಯೆಗಳಿಂದ ಜನರನ್ನು ವಿಮುಖರನ್ನಾಗಿಸುತ್ತಿದ್ದಾರೆ. ಜನರ ಸಂಸ್ಕೃತಿಯನ್ನು, ಆಹಾರವನ್ನು, ಉಡುಗೆ-ತೊಡುಗೆಗಳನ್ನು ನಿಯಂತ್ರಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಜನರಲ್ಲಿ ಅಂಧಾಭಿಮಾನ, ಜಾತೀಯತೆ, ಮೂಢನಂಬಿಕೆಗಳನ್ನು ಬಿತ್ತಲಾಗುತ್ತಿದೆ. ಇದೆಲ್ಲದರ ನಡುವೆ ಚಿಲುಮೆಯ ರೀತಿಯಲ್ಲಿ ಜನರ ಸಾಂಸ್ಕೃತಿಕ ಮಟ್ಟವನ್ನು ಎತ್ತರಿಸುವ ಪ್ರಯತ್ನವಾಗಿ ಸಾಂಸ್ಕೃತಿಕ ಜನೋತ್ಸವ ಹೊಸ ಭರವಸೆಯನ್ನು ನೀಡುತ್ತಿದೆ ಎಂದು ಹಿರಿಯ ಕಲಾವಿದ ಬಿ. ಮಾರುತಿ ಹೇಳಿದರು. ಅವರು ಇಂದು ನಗರದ ಕ.ವಿ.ವ. ಸಂಘದ ಪಾ.ಪು ಸಬಾಭವನದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ, ಎಐಡಿವೈಓ ಮತ್ತು ಎಐಡಿಎಸ್ಓ ಸಂಘಟನೆಗಳು ಆಯೋಜಿಸಿರುವ 16ನೇ ಧಾರವಾಡ ಸಾಂಸ್ಕೃತಿಕ ಜನೋತ್ಸವವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಇಂದು ಬೆಳಗಾದರೆ ಟಿವಿಗಳಲ್ಲಿ ಧಾರವಾಹಿಗಳು ಮೌಲ್ಯಗಳಿಲ್ಲದ ಭಾವನೆಗಳನ್ನು ಬಿತ್ತುತ್ತಿವೆ. ತಂದೆತಾಯಿಗಳನ್ನು ಬೀದಿಗೆ ತರುವಂತಹ, ಅಕ್ರಮ ಸಂಬಂಧಗಳನ್ನು ಸರಿಯೆನ್ನುವ ರೀತಿ ವೈಭವೀಕರಿಸಿ ಬಿತ್ತರಿಸಲಾಗುತ್ತಿದೆ. ಇವುಗಳಿಗೆ ಯುವಜನರು ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಸಂಘಟನೆಗಳು ದುಡಿಯುವವರ, ರೈತರ, ಕಾಮರ್ಿಕರ ದುರ್ಬಲರ ಬದುಕಿನಲ್ಲಿ ಬದಲಾವಣೆಗಾಗಿ ಶ್ರಮಿಸುತ್ತಲೇ ಅಂತಹ ಜನರನ್ನು ನೈತಿಕವಾಗಿ ಮೇಲೆತ್ತಲು, ಉನ್ನತ ಮೌಲ್ಯಗಳನ್ನು ಬೆಳೆಸಲು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ವಿದ್ಯಾಥರ್ಿ-ಯುವಜನರಲ್ಲಿ ಅಡಗಿರುವ ಚೇತನವನ್ನು, ಪ್ರತಿಭೆಯನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ನಾವೆಲ್ಲರೂ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತ ಸಮಾಜದ ಬದಲಾವಣೆಗೆ, ಉನ್ನತ ನಾಗರಿಕತೆಯೆಡೆಗೆ ಸಾಗಲು ಸಂಘಟನೆ ಜೊತೆಗೆೆ ನಾವೆಲ್ಲರೂ ಕೈಜೋಡಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಆವಿಷ್ಕಾರ ಫಿಲಂ ಸೊಸೈಟಿಯ ಜಿಲ್ಲಾ ಸಂಚಾಲಕ ಮಲ್ಲು ಹುಡೇದ ಮಾತನಾಡಿ ಇಂದು ಹಲವಾರು ಸಕರ್ಾರಿ ಪ್ರಾಯೋಜಿತ ಸಾಂಸೃತಿಕ ಕಾರ್ಯಕ್ರಮಗಳು ವಿದ್ಯಾಥರ್ಿ-ಯುವಜನರಲ್ಲಿ, ಜನಗಳಲ್ಲಿ ಕೀಳು ಅಭಿರುಚಿಯನ್ನು ಬಿತ್ತುತ್ತಿವೆ. ಅಶ್ಲೀಲತೆಯನ್ನು ನಿಷೇಧಿಸಬೇಕಾದ ಸಕರ್ಾರಗಳು ಕಣ್ಮುಚ್ಚಿಕೊಂಡಿವೆ. ಇಂತಹವುಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಲೇ, ಪರ್ಯಾಯವಾದ ಸಾಂಸ್ಕೃತಿಕ ಆಂದೋಲನವನ್ನು ನಮ್ಮ ಸಂಘಟನೆಗಳು ಹರಿಬಿಟ್ಟಿದ್ದು ಉನ್ನತವಾದ ಅಭಿರುಚಿ, ನೈತಿಕತೆಯನ್ನು ವಿದ್ಯಾಥರ್ಿ-ಯುವಜನರಲ್ಲಿ ತುಂಬಲು ಸಾಂಸ್ಕೃತಿಕ ಜನೋತ್ಸವವನ್ನು ಆಯೋಜಿಸುತ್ತಾ ಬಂದಿವೆ. ಇದನ್ನು ಪ್ರೋತ್ಸಾಹಿಸಿ ಬೆಳೆಸಬೇಕಾದ ಜವಾಬ್ದಾರಿ ಜನಗಳ ಮೇಲಿದೆ ಎಂದರು. 

ಪ್ರಾಸ್ತಾವಿಕವಾಗಿ ಎಐಡಿಎಸ್ಓ ಜಿಲ್ಲಾ ಜಂಟಿ ಕಾರ್ಯದಶರ್ಿ ಮಹಾಂತೇಶ ಬೀಳೂರು ಮಾತನಾಡಿ ಸಾಂಸ್ಕೃತಿಕ ಜನೋತ್ಸವದ ಉದ್ದೇಶಗಳನ್ನು ಹಾಗೂ ನಡೆದುಬಂದ ದಾರಿಯ ಕುರಿತು ಮಾತನಾಡಿದರು. 

ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲಿಗೆ ಧಾರವಾಡ ಆವಿಷ್ಕಾರ ತಂಡದವರು ಕ್ರಾಂತಿಕಾರಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಧಾರವಾಡದ ಉಪಾಧ್ಯ ನೃತ್ಯ ವಿಹಾರ ತಂಡದಿಂದ ಗೀತ ನೃತ್ಯ ಪ್ರದರ್ಶನಗೊಂಡಿತು. ಡಾ. ಜ್ಯೋತಿ ಕೂಡಲಗಿಯವರ ತಂಡದವರು ಪ್ರಗತಿಪರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಶಾಂತಲಾ ನೃತ್ಯಾಲಯದವರು ಕಾವ್ಯಾಧಾರಿತ ನೃತ್ಯ ಪ್ರದಶರ್ಿಸಿದರು. ಬಾಲಬಳಗದ ಮಕ್ಕಳು ಗಾಯನ ಪ್ರಸ್ತುತಪಡಿಸಿದರು. ಪ್ರಿಯಚೇತನ ಕಲ್ಚರಲ್ ಅಕಾಡೆಮಿಯವರು ಪ್ರಗತಿಪರ ಗೀತೆಗಳಿಗೆ ಹೆಜ್ಜೆ ಹಾಕಿದರು.